ಬಾರೋ ಈ ರೇಳು ಜಗಜೀವನಾ | ಜಗಜೀವನಾ ಪ
ಬಾರೋ ಈರೇಳು ಜಗಜೀವನಾ ಜಗಜೀವನಾ |
ಪಾವನ ದೇವಾ ಪಾವನ ದೇವಾ | ಧೀರ ಕೇಶವಾ 1
ಕಂಗೆಡುತಿದೆ ಕಂಗೆಡುತಿದೆ | ನಿನ್ನ ಕಾಣದೆ 2
ಬೆನ್ನ ಬಿದ್ದವರವಗುಣವಾ | ಅವಗುಣವಾ |
ಆರಿಸುವರೇ ಆರಿಸುವರೇ | ಚಿನ್ನ ಶ್ರೀ ಹರಿ3
ಇಂದು ಮನಿಗೆ ಬಾರದಿರಲು | ಬಾರದಿರಲು |
ನಿಲ್ಲದು ಪ್ರಾಣಾ ನಿಲ್ಲದು ಪ್ರಾಣಾ | ಒಂದರೆಕ್ಷಣಾ 4
ತಂದೆ ಮಹಿಪತಿ ಸುತ ಪ್ರಭುವೇ | ಸುತ ಪ್ರಭುವೇ |
ದೀನಾಭಿಮಾನಿ ದೀನಾಭಿಮಾನಿ | ಬಂದು ಕೂಡೋ ನಿ 5