ಪಾಲೀಸೆ ಕೃಷ್ಣ ರಮಣೀ | ರುಕ್ಮಿಣಿಪಾಲೀಸೆ ಕೃಷ್ಣ ರಮಣಿ ಪ
ಭಂಜನ ಪ್ರೀತೆ | ಫಾಲಾಕ್ಷಪಿತ ಮಾತೆ ಅ.ಪ.
ಚಾರು ಚರಣ ಸರೋರುಹ ಕೆರಗುವೆ | ಚಾರುಮತಿಯ ಕೊಡೆ 1
ಮೂರು ಗುಣಾಭಿಮಾನೀ | ಮಾಳ್ಪುದುಮೂರು ಗುಣಗಳ್ಹಾನೀ ||ವಾರೀಸಿ ತ್ರೈಗುಣ | ಪಾರು ಮಾಡಿಸು ಭವತಾರಕೆ ನೀ ನೆಂದು | ಬಾರಿ ಬಾರಿಗೆ ಪೇಳ್ವ 2
ಗುರು ಗೋವಿಂದ ವಿಠಲಾ | ನಿನ್ನೊಡವೆರಸಿ ಸೃಜಿಪ ಜಗಂಗಳಾ ||ಎರಡೆರಡು ವ್ಯೂಹಕಾಗಿ | ಎರಡೆರಡು ರೂಪ ತಾಳೆಎರಡೆರಡು ನೀನು ಆಗಿ | ಹರಿ ಕಾರ್ಯಕನುವಾದೆ 3