ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಂಗಳ ಮಹಿಮಗೆ ನೀರಾಜನಂಗಳ ಪೈಸರಿಸಿ ಭೃಂಗಾಳಕಂಗಳೆಯರು ಸ್ಮಿತವದನಂಗಳೆಯರು ಶಿರಿ ತಿರುವೆಂಗಳಪತಿಗಾರತಿಯ ಬೆಳಗಿರೆ ಪ.ಅಕ್ರಮದಲಿಶ್ರುತಿಕದ್ದೊಯ್ದವನಾಕ್ರಂದಿಸಿ ಸೀಳಿದಶುಭಮತ್ಸ್ಯಾಕೃತಗೆ ಜಗಂಗರ್ಭಾಕೃತಗೆ ಹತತಮವ್ಯಾಕೃತಗಾರತಿಯ ಬೆಳಗಿರೆ 1ಇಂದಿರನೈಶ್ವರ್ಯವು ಮಕರದಮಂದಿರ ಮಗ್ನಾಗಿರೆ ಗಿರಿಭೃತಕಂಧರಗೆ ಕಚ್ಛಪ ಸುಂದರಗೆ ಕರುಣಾಸಾಂದರಗಾರತಿಯ ಬೆಳಗಿರೆ 2ಪೊಂಗಣ್ಣಿನದಿತಿಜಕ್ಷಿತಿಯಹಿಂಗದೆ ಬೈಚಿಡಲು ಕ್ರೋಡದಿಭಂಗಿತಗೆ ವಸುಮತಿ ಸಂಗತಗೆ ದಿವಿಜರಇಂಗಿತಗಾರತಿಯ ಬೆಳಗಿರೆ 3ದಾನವಗಂಜದೆ ಶಿಶು ವರಹರಿನೀನೆ ಗತಿಯೆನೆ ಕಾಯ್ದ ಸುಜಾಣನಿಗೆ ನಿಜಜನಪ್ರಾಣನಿಗೆ ನರಪಂಚಾನನಗಾರತಿಯ ಬೆಳಗಿರೆ 4ಧರ್ಮದಿ ಕೊಬ್ಬಿದ ಬಲಿಚಕ್ರನಮರ್ಮದಿ ಜಡಿದ ವಿಚಿತ್ರಕರ್ಮನಿಗೆ ಧೃತಮೃಗಚರ್ಮನಿಗೆ ಅಣುವಟುಶರ್ಮನಿಗಾರತಿಯ ಬೆಳಗಿರೆ 5ವೀರ ಕ್ಷತ್ರಿಯರ ಕುಲ ಸಂಹಾರ ರೇಣುಕೆ ಕಂಠ ವಿದಾರಿಗೆ ವಿತರಣ ಶೂರಗೆಘೋರಕುಠಾರಿಗಾರತಿಯ ಬೆಳಗಿರೆ 6ಮುನಿಮಖಪಾಲಕ ತ್ರಯಂಬಕಧನುಹರ ಸೀತಾವರ ದಶಮುಖಹನನಗೆ ಮತ್ತವನನುಜಪಗೆ ಅಂಜನಾತನುಜಪಗಾರತಿಯ ಬೆಳಗಿರೆ 7ಪೊಂಗೊಳಲೂದುತ ಗೋಜಂಗುಳಿಹೆಂಗೆಳೆಯರ ಮೋಹಿಪ ತಾವರೆಗಂಗಳಗೆ ಸುಖದ ತರಂಗನಿಗೆ ಪಾಂಡವಸಂಗನಿಗಾರತಿಯ ಬೆಳಗಿರೆ 8ನೀಚರ ಬಲವಳಿಯಲು ಸತ್ವರಖೇಚರನಾರಿಯರ ವ್ರತಹೃತಆಚರಗೆಜಿತಬೌದ್ಧಾಚರಗೆ ನಿಗಮವಿಗೋಚರಗಾರತಿಯ ಬೆಳಗಿರೆ 9ಸಂಕರ ಕಲಿಯಂ ಮಥಿüಸಲು ತಾಬಿಂಕದಿ ಹಯವೇರಿದ ಸದ್ಧರ್ಮಾಂಕುರಗೆ ವರ್ಧಿಪ ಕಿಂಕರಗೆ ಪ್ರಸನ್ವೆಂಕಟರೇಯಗಾರತಿಯ ಬೆಳಗಿರೆ 10
--------------
ಪ್ರಸನ್ನವೆಂಕಟದಾಸರು