ಆನೆಂತು ವರ್ಣಿಸಲಿ ಆ ದಿವ್ಯ ಮೂರುತಿಯನ ಪ
ಆನಂದಮಯ ನಮ್ಮ ಆನಂದಕಂದನನು ಅ.ಪ.
ಪಾದ ಆ ಜಾನು ಆ ನಡುವು ಆ ನಾಭಿ
ಆ ವಕ್ಷ ಆ ಬಾಹು ಆ ಮುಖದ ಭಾವ
ಆ ನೇತ್ರ ಆ ನಿಲುವು ಆ ಮಂದಹಾಸಗಳ
ಆದ್ಯಂತ ಬಣ್ಣಿಸಲು ಆದಿಶೇಷಗೆ ವಶವೆ 1
ಆವನಿಗೆ ಸಮರÀಧಿಕರಿಲ್ಲವಾತಗಿನ್ನು
ಆವಸಾಮ್ಯವ ಕೊಟ್ಟು ಬಣ್ಣಿಸುವೆನು
ಆವನೀ ಜಗಕ್ಕೆಲ್ಲ ಆಧಾರವಾಗಿಹನೊ
ಆವನಂಘ್ರಿಗಳ ಮುನಿಗಳಾವಾಗ ಚಿಂತಿಪರೊ 2
ಆವ ಮಂಗಳ ಮೂರ್ತಿಯಾ ಲಕ್ಷಣಗಳೆಲ್ಲ
ಆವ ಶಾಸ್ತ್ರದೊಳುಂಟು ಅವನಿಯೊಳಗೆ
ವಾಸುದೇವ ತಾನಾವಾಗಲೆಲ್ಲರೊಳು
ಆವಾಸವಾಗಿಹನು ಆ ಕರಿಗಿರೀಶನು 3