ಯತಿಗಳು
ಆನೆ ಬರುತ್ತಿದಿಕೋ ದಾಸರ ಮರಿ-ಯಾನೆ ಬರುತ್ತಿದಿಕೋ ಪ.
ಮದವೇರಿ ಹದಮೀರಿ ಮದನಾರಿ ತಾನೆಂಬಅಧಮರೆದೆಯ ಮೆಟ್ಟಿ ಸೀಳಲು ಅ.ಪ.
ಮರುತಮತ ನಿರಂತರ ಚರಣದ ಧೂಳಿಕರದಲಿ ಪಿಡಿದು ಶಿರದ ಮೇಲೆ ಚೆಲ್ಲುತ್ತ 1
ಇದ್ದು ಜಗಕ್ಕಿಲ್ಲೆಂಬ ಶುದ್ಧ ಮೂರ್ಖತೆಯುಳ್ಳಅದ್ವೈತಿಗಳ ಬುದ್ಧಿಮಡುವನ್ನೆ ಕಲಕುತ್ತ 2
ಜಗಕೆ ಕರ್ತ ನಾನೆಂದು ಬೊಗಳಿಕೊಂಬುವ ನಾ-ಯಿಗಳ ಕರದಲ್ಲಿ ಪಿಡಿದು ಮೊಗದ ಮೇಲೆ ಉಗುಳುತ್ತ3
ಮಧ್ವಮುನೇಂದ್ರರ ಶುದ್ಧತೀರ್ಥದಿ ಮಿಂದುತಿದ್ದಿದ ನಾಮ ಶ್ರೀಮುದ್ರೆ ಶೃಂಗಾರದಿ 4
ಮುರಿಯಲು ದುರುಳನ ಗರುವವನೆ ಮುನ್ನಸಿರಿ ಹಯವದನನ ಅರಮನೆ ಪಟ್ಟದ 5