ಜಗಕ್ಕಿಂತ ಭಾರವೇನೊ ನಮ್ಮ ರಂಗ
ನಗಕ್ಕಿಂತ ಗಾತ್ರನೇನೋ ಪ
ಜಗಕ್ಕಿಂತ ಭಾರವೇನೋ | ಖಗಪೊತ್ತು ತಿರುಗಲೆ[ೀಕೆ]
ನಗದ ಮೇಲೇ ಕುಳಿತಿಹ
ಭಾರ ಜಗಂಗಳ ಹೊರುತಲಿ ನಲಿವವನಿವನೇ
ನಗಗಳ ಬೆರಳಲಿ ಎತ್ತಿದನಿವನೇ
ಖಗಮೃಗಗಳಿಗೆ ಒಲಿದವನಿವನೇ1
ತೃಣಕ್ಕಿಂತ ಹಗುರನೇನೋ ರಣದೆ ರಾವಣನ ಕೊಂದೆ
ಮಣಿಗಿಂತ ಸಣ್ಣನೇನೋ ಧರಣಿಯನಳೆದೈತಂದೆ
ತೃಣಕ್ಕೆಲ್ಲಾ ತೃಣರೂಪಾಗಿಹನು
ಮಣಿಗೆಲ್ಲಾ ಶ್ರೀಮಣಿಯಾಗಿರುವ ಸ
ದ್ಗುಣಿಗಳಿಗೆ ಕರುಣಿಯು ಇವನು 2
ಎಲ್ಲೆಲ್ಲು ಇರುವನೇನೋ ನಮ್ಮ ರಂಗ
ಎಲ್ಲಿಯೂ ಇರುವನೇನೇ ಅಲ್ಲಲ್ಲಿ ಇರುವ ರಂಗ
ಎಲ್ಲೆಲ್ಲು ಇಲ್ಲವೇನೇ ಅಲ್ಲಲ್ಲಿ ಅಂತರಂಗ 7
ಬಲ್ಲಿದರೆಲ್ಲ ಬಲ್ಲರು ಇವನ ಕಲ್ಲೆಂಬುವರಿಗೆ ಇವನು
ಇಲ್ಲದ ತಾಣವೊಂದಿಲ್ಲವು ಭಕ್ತಿಯ
ಸೊಲ್ಲಿಗೆ ಸೋಲುವ ಮಾಂಗಿರಿರಂಗ 8