ರುದ್ರದೇವರು
ಭಜನೆ ಮಾಡೆಲೊ ಮನವೆ ಭಜನೆ ಮಾಡೆಲೊ ಪ
ಭಜನೆಯನ್ನು ಮಾಡಿ ಸುಖಿಸೊಭುಜಗಭೂಷಣ ಶಿವನೆ ಅ.ಪ.
ನಾನೆ ನಾನೆ ನಾನು ಎಂಬ ಶ್ವಾನಬುದ್ಧಿಯನ್ನು ಬಿಟ್ಟುನೀನೆ ನೀನೆ ಗತಿಯೆಂದು ಸಾನುರಾಗದಿಂದ ಮೃಡನ 1
ಕಾಕುಜನರ ವಾಸ ಬಿಟ್ಟು ಏಕಭಾವದಿಂದ ಕುಳಿತುಸಾಕು ಸಾಕೆನಿಸದಂತೆ ನಾಲ್ಕು ಮೊಗದವನ ಸುತನ 2
ತಂದೆವರದವಿಠಲನು ತಂದೆ ಜಗಕೆಲ್ಲವೆಂದುಛಂದಛಂದಾದಿ ಭಜಿಪ ಇಂದುಶೇಖರ ಭವನ 3