ನೀನಲ್ಲದಿನ್ನಾರು ಸಲಹುವರೊ ಎನ್ನ ಪ
ನಾನು ನನ್ನದು ಎಂಬ ದುರಭಿಮಾನಿಯನ್ನಅ.ಪ.
ಶ್ರೀಮದಾಚಾರ್ಯರ ಪುಸ್ತಕ ಭಂಡಾರವನು
ಪ್ರೇಮದಿಂ ಧರಿಸುತ ವೃಷಭನಾಗಿರ್ದು ಚರಿಸಿ
ಕಾಮಪಿತನೊಲಿಮೆಯಿಂ ಮರಳಿ ಜನಿಸಿ ಗುರುಗಳ
ಆ ಮಹಾಭಾಷ್ಯವರುಹಿದ ಜಯತೀರ್ಥ ಗುರುವೆ 1
ಬಾಲತನದಲಿ ಸಕಲ ಲೀಲೆಗಳ ತೊರೆದು
ಕಾಲುಂಗುಟಾಗ್ರದಿ ನಿಂದು ತಪವಗೈದು
ಶ್ರೀಲೋಲನ ಮೆಚ್ಚಿದಂಥ ಧೀರ ದೈವ ಭೂ-
ಪಾಲನಂಶದ ಶ್ರೀಪಾದರಾಜ ಗುರುವೆ2
ಪಿತನ ಮತ ಧಿಕ್ಕರಿಸಿ ಶ್ರೀಪತಿಯೆ ಪರನೆಂಬ
ಮತಿಪÉೂಂದಿ ಶಿಶುತನದಲಿ ನರಹರಿಯ ಒಲಿಸಿ
ಅತಿಹಿತನಾದ ಪ್ರಹ್ಲಾದದೇವನಂಶದಿಂ
ಕ್ಷಿತಿಯೊಳುದ್ಭವಿಸಿದ ವ್ಯಾಸರಾಜ ಗುರುವೆ 3
ಈ ಧರೆಯೊಳೆಸೆಯುತಿಹ ಉಡುಪಿಯೊಳು ನೆಲಸಿರ್ಪ
ಯಾದವ ತೀರ್ಥಾಯ ಪದ ಸರಸಿರುಹ ಭೃಂಗ
ಮೋದ ತೀರ್ಥಾರ್ಯರ ಪದಕರುಹನಾದಂಥ
ಸೋದೆಯೊಳ್ರಾಜಿಸುವ ವಾದಿರಾಜ ಗುರುವೇ 4
ಕಂತುಜನಕನಿಗತ್ಯಂತ ಪ್ರಿಯನಾದ ಮತಿ
ವಂತನಾ ವ್ಯಾಸಮುನಿಯೆ ನೀನಾಗಿ ಬಂದು
ಸಂತಸದಲಿ ಸಾಧು ಜನರಿಷ್ಟ ಪೂರೈಸುತ
ಮಂತ್ರಾಲಯದಿ ಮೆರೆವ ರಾಘವೇಂದ್ರ ಗುರುವೆ 5
ಜಲಜಭವನೂರುಭವನಂಶದಲಿ ಜನಿಸಿ
ಕಲಿಯುಗದಿ ಹರಿನಾಮವೆ ಗತಿಯೆಂದು ಸಾರಿ
ಹಲವು ಪದ ಸುಳಾದಿಗಳ ರಚಿಸಿ ಸಜ್ಜನರ
ಕಲುಷಗಳ ಕಳೆದ ಪುರಂದರದಾಸರಾಯ 6
ಸಕಲ ಋಷಿಗಳ ಸಂಶಯವ ಪರಿಹರಿಸಿ ವೇದ
ಉಕುತಿಗಳಿಂದ ಹರಿಯೆ ಪರನೆಂದು ಸ್ಥಾಪಿಸಿ
ಭಕುತಿ ವೈರಾಗ್ಯನಿಧಿ ಭೃಗುಮುನಿಯೆಂದೆನಿಸಿದ
ಮುಕುತಿಪಥ ತೋರಿಸಿದ ವಿಜಯದಾಸರಾಯ 7
ಸೂತ್ರ ಪುರಾಣಗಳ ರಚಿಸೆ
ದಾಸತ್ವವಹಿಸಿ ಸಕಲ ಗ್ರಂಥಗಳ ಬರೆದು
ಶ್ರಿಶಗರ್ಪಿಸುತ ಲೇಸು ಜಗಕೆಗೈದಂಥ ಗ
ಣೇಶಾವತಾರಿ ಗೋಪಾಲದಾಸರಾಯ 8
ಸಿರಿ ರಂಗೇಶವಿಠಲನ ಕಾಂಬ ತೃಷೆಯಲಿ ಹರಿಗೆ
ಹರಿಕಥಾಮೃತಸಾರ ಪಾನಗೈಯಲಿತ್ತ
ನರಹರಿಯ ಕೃಪಾಪಾತ್ರ ಸಹ್ಲಾದನಂಶದ
ಗುರುವರ ಶ್ರೀ ಜಗನ್ನಾಥದಾಸರಾಯ 9