ರಾಮಪದಸರಸೀರುಹಭೃಂಗರೋಮಕೋಟಿಲಿಂಗ ಅಸುರಮದಭಂಗ ಪ
ಒಂದು ನಿಮಿಷಕೆ ಪೋಗಿ ಸಂಜೀವನವ ತಂದೆÀಂದುಗೊರಳನ ಭಜಕ ನಂದನನ ನೀ ಕೊಂದೆಇಂದ್ರಸೂನುವಿನ ಭಕುತಿಗೆ ರಥಾಗ್ರದಿ ನಿಂದೆಮಂದರಧರನ ಮುಂದೆ ಸುರ-ವೃಂದವರಿಯೆ ಪುರವ ಹೋಮಗೈದು ಬಂದೆ 1
ಉರುಗದೆಯಿಂದ ಕೌರವನ ತೊಡೆಗಳ ತರಿದೆಧುರದಲ್ಲಿ ಮಾಗಧನ ಮರ್ಮಸ್ಥಳ ಮುರಿದೆದುರುಳ ದುಶ್ಶಾಸನನ ಕರುಳುಗಳನೆ ಹಿರಿದೆಕರವೆತ್ತಿ ಬಲವೆರಡ ಕರೆದೆಗುರು ಮಧ್ವಮುನಿಯಾಗಿ ಶಾಸ್ತ್ರ್ರಗಳನೊರೆದೆ 2
ಧರೆಯೊಳತ್ಯಧಿಕ ಸೋದೆಪುರನಿವಾಸಸಿರಿ ಹಯವದನನ ಪರಮಪ್ರಿಯ ದಾಸನೆರೆನಿನ್ನ ನಂಬಿರ್ದ ಭಕ್ತರಿಗೆ ಕೊಡು ಲೇಸಕರುಣವಾರಿಧಿ ಪುಣ್ಯವಾಸ ಜಗಕೆಗುರುವೆನಿಸಿ ಮೆರೆದೆ ಮುಖ್ಯಪ್ರಾಣೇಶ 3