ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮೋಹನಾರ್ಯನೆ ಯೆನ್ನಾ | ಪೀಡಿಸುವ ಭವಮೋಹಕಳೆವುದು ಮುನ್ನಾ | ಹರಿಯಂಘ್ರಿ ಭಜನೆಯಈಹ ಕೊಡುವುದು ಇನ್ನಾ | ಭೂಸುರವರೇಣ್ಯಾ ಪ ದೇಹ ಮಮತೆಯ ದಾಶೆಯಲಿ ಸುಖ | ವಾಹಿನಿಗಳನುಭವಿಸೆ ಬಲುದುರ್‍ದೇಹ ಪೋಷಣೆಗೈದು ಹರಿಪದ | ಈಹಿಸದೆ ಬಲುನೊಂದೆ ಭವದಲಿ ಅ.ಪ. ಜಯದಲುದಿಸುತಲಂದೂ | ತಾರುಣ್ಯವನುನಿರ್‍ಭಯದಿ ಕಳೆದಿಹೆ ಬಂಧೂ | ವಿದ್ವೇಷದೊಳಗ್ಹರಿಹಯನನುಜ ವರ್ತಿಗಳಂದೂ | ಸಲಹಿದರು ಎನ್ನಯ ಭಯ ನಿವಾರಿಸುತಂದೂ | ಕಾರುಣ್ಯ ಸಿಂಧೂ ||ಹಯಮುಖನ ಪದ ಸತ್ಸರೋಜಗಳ್ | ದ್ವಯಭಜಿಪ ಮನವಿರದೆ ವಿಷಯದಹುಯಿಲಿನಲಿ ಬೆಂಡಾಗಿ ತಾಪದ | ತ್ರಯದಿ ಬಲು ಬಳಲಿರುವೆನಯ್ಯ |ಜಯದ ಸಂವತ್ಸರವು ಮರಳಿ | ಬಯಲು ಆಗದ ಮುನ್ನ ಹರಿಪದದ್ವಯಗಳನು ಕಾಂಬಂಥ ಹದನವ | ದಯದಿ ತೋರುತ ಸಲಹೊ ಬಂಧು 1 ಕಾಮಮದ ಮಾತ್ಸರ್ಯಾ | ಅರಿಗಳನಮನನೇಮನಿಷ್ಟಯ ಚರ್ಯಾ | ಕುಂದಿಸುತ ವಿಷಯಸ್ತೋಮ ಕಳೆಯುವರಯ್ಯ | ಈ ಪರಿಯ ಪರಿಭವಸೀಮೆ ಮೀರುವ ಚರ್ಯಾ | ಪರಿಹರಿಸೊ ಜೀಯ ||ಭ್ರಾಮಕತ್ರಯ ಮಾರಿಗೆನ್ನ ಸು | ಹೋಮಿಸುವ ದುರುಳನನು ಸದೆವತಾಮರಸಭವ ಪದಕೆ ಬರುತಿಹ | ಆ ಮಹಾ ಮಾರುತ ನೊಳಿರುವ |ರಾಮ ಚಂದ್ರ ಪದಾರವಿಂದವ |ಕಾಮಿಸುತ ತನ್ಮಹಿಮೆಗಳ ಸನ್‍ನಾಮ ಕೀರ್ತನೆಗೈದು ಮೋದಿಪ | ಪ್ರೇಮಮನವಿತ್ತೆನ್ನ ಸಲಹೋ 2 ನೀರೊಳಾಡುತ ಬಂದಾ | ಬೆನ್ನಿನಲಿ ಬಹುಭಾರ ಪೊತ್ತುದೆ ಛಂದಾ | ಅವನಿಯನು ತನಕೋರೆದಾಡೆಗಳಿಂದಾ | ತರಳನನು ಬಹುಘೋರರೂಪದಲಿಂದಾ | ಸಲಹಿದುದೆ ಛಂದಾ ||ಮೂರು ಪಾದವ ಬೇಡಿ ಬಲಿಯನು | ಭಾರಿ ಕೊಡಲಿಯ ಪೆತ್ತು ಪೆಗಲೋಳು |ಘೋರ ಅಟವಿಯ ತಿರುಗಿ ತಿರುಗಿ | ನಾರೆರೊಲುಮೆಗೆ ಸಿಲ್ಕಿ ತ್ರಿಪುರದನಾರಿಯರ ವ್ರತಗೆಡಿಸಿ ಹಯವನು | ಏರ್ದ ಗುರುಗೋವಿಂದ ವಿಠ್ಠಲಕಾರಣನು ಜಗಕೆಂಬ ಮತಿಯನು | ಧೀರಗುರು ಮೋಹನ್ನ ಕರುಣಿಸು 3
--------------
ಗುರುಗೋವಿಂದವಿಠಲರು
ಶಾರದೇ ಮಜ್ಜನನಿಯೆ - ಶಾರದೇ ಪ ಶಾರದೆ ಶರಣೆಂಬೆ ನಿನ್ನ | ಚರಣನೀರಜ ದ್ವಂದ್ವಕೆ ಯನ್ನ | ಆಹಕಾರುಣ್ಯದಲಿ ಹೃದಯ | ವಾರಿಜದೊಳು ಮೆರೆವಮಾರಮಣನ ದಿವ್ಯ | ಮೂರುತಿ ತೋರಿಸು ಅ.ಪ. ವಾಣಿ ನಿಲ್ಲ್ವುದು ಎನ್ನ ವದನಾ | ದಲ್ಲಿನೀ ನುಡಿಸೇ ಹರಿ ಗಾನಾ | ಕರವೀಣೆ ನುಡಿಪಂತೆ ಯೆನ್ನಾ | ದೇಹವೀಣೆ ನುಡಿಸೇ ನೀ ಮುನ್ನಾ | ಅಹವೇಣಿ ಮಾಧವನಾದ | ಶ್ರೀನಿವಾಸನ ಕಾಂಬಜ್ಞಾನಾನು ಸಂಧಾನ | ಮಾಣದೆ ಎನಗೀಯೇ 1 ಅಜ್ಞರೊಳಾಗ್ರಾಣಿ ನಾನು | ಇಂಗಿತಜ್ಞಳೆ ನಾ ಪೇಳ್ವುದೇನೂ | ಆಭಿಜ್ಞರೊಳಿರಿಸುವುದಿನ್ನೂ | ಸರ್‍ವಜ್ಞರ ಮತ ತಿಳಿಸಿನ್ನೂ | ಆಹವಿಜ್ಞಾನ ಸುಸಖ ಬ್ರಹ್ಮ | ಯಜ್ಞಾನೆ ಜಗಕೆಂಬಸುಜ್ಞಾನ ಸುಖವಿತ್ತು | ಪ್ರಾಜ್ಞನ ಕಾಣಿಸೇ 2 ವ್ರತನೇಮ ಉಪವಾಸ ಒಂದೂ | ಮಾಡಿಕೃತಕೃತ್ಯನಲ್ಲಮ್ಮ ಬಂಧೂ | ಕೃತಿಪತಿಯೆ ಎನಗೆ ಗತಿ ಎಂದೂ | ದ್ವಂದ್ವಕೃತಿಗಳ ನರ್ಪಿಪ ಸಂದೂ | ಆಹಹಿತದಿ ತಿಳಿಸಿ ಗುರು | ಗೋವಿಂದ ವಿಠಲನಸುತನಾಗಿ ಮೆರೆವಂಥ | ಚತುರಾಸ್ಯ ಪ್ರಿಯರಾಣಿ 3
--------------
ಗುರುಗೋವಿಂದವಿಠಲರು
ಶ್ರೀನಿವಾಸನೆ ನಿನ್ನ | ವರ್ಣಿಸಲು ಅಳವೇ ಮಾನನಿಧಿ ಗುಣಪೂರ್ಣ | ನಿನ್ನಂಘ್ರಿ ಭಜಿಪರ ಬನ್ನ ಪ. ವೈನತೇಯನ ವರೂಥ ನಾನಾ ಹಾರ ಪದಕದಿ ಮೆರೆವ ಸುಂದರ ಕಾಮಪೂರ್ಣ ಮುಖಾರವಿಂದನ ನೀ ಮನದಿ ತೋರುತ್ತ ಪೊರೆಯೊ ಅ.ಪ. ಶೇಷಪರ್ವತವಾಸ | ಭಕ್ತರನು ಸಲಹೋ ಈ ಕ್ಷಿತಿತ್ರಯಕೀಶ ಪೋಷಿಸುವೋ ಭಕ್ತರವಾಸಿ ನಿನ್ನದೊ ಶ್ರೀಶ ಲಕ್ಷ್ಮೀನಿವಾಸ ದೋಷದೂರನೆ ಎನ್ನ ಅವಗುಣ ದೋಷಗಳನೆಣಿಸದಲೆ ಸಲಹೊ ಶೇಷವರ ಪರ್ಯಂಕಶಯನ ವಿ- ಭೀಷಣ ಪ್ರಿಯ ಭೀಷ್ಮವರದ1 ಮಾಘ ಸಪ್ತಮಿ ಕುಂಭ | ಸಂಕ್ರಮಣ ದಿವ್ಯ ಯೋಗ ಶುಕ್ಲದಿ ಎಂಬ | ಸ್ಥಿರವಾರದಲ್ಲಿ ಆಗ ರಥದಲ್ಲಿ ಬಿಂಬ | ಭಕುತರಿಗೆ ಕಾಂಬ ಜಾಗು ಮಾಡದೆ ಸೂರ್ಯಮಂಡಲ ಬೇಗ ಬಿಗಿದಿಹ ಸಪ್ತ ಹಯಗಳ ಬಾಗಿ ಭಜಿಸಲು ಭಕ್ತವರ್ಗವು ನೀ ಜಗದಿ ಮೆರೆಯುತ್ತ ಪೊರೆದೆ 2 ವಿೂನನಾಗಿ ಮತ್ತೆ ವೇದವನೆ | ತಂದು ಆ ನಳಿನಭವಗಿತ್ತೆ ಅಲ್ಲಿಂದ ಸುರರಿಗೆ ಪ್ರಾಣದಾನವನಿತ್ತೆ ಮೇದಿನಿಯ ಪೊತ್ತೆ ನಾನೆ ಜಗಕೆಂಬ ದಾನವನ ಕೊಂದು ದಾನ ಬೇಡಿ ಭೂಮಿ ಅಳೆದು ಮಾನಿನಿ ಶಿರ ತರಿದು ಸೀತಾ ಮಾನಿನಿಗೆ ಅಂಬುಧಿಯ ಬಿಗಿದೆ 3 ಮಾನಿನಿಯರಿಗೆ ಕಾಣದೆ | ಬೆಣ್ಣೆಯನು ಕದ್ದು ಮಾನವೆಲ್ಲವ ಕಳೆದೆ ಅಲ್ಲಿಂದ ಮುಂದೆ ಮಾನವ ಬಿಟ್ಟು ನಿಂದೆ ಏನ ಹೇಳಲಿ ಹಯವನೇರಿ ದಾನವರ ಸಂಹರಿಸಿ ಮೆರೆದೆ ನಾನಾ ರೂಪ ನಾಟಕಧರ ನೀನೀ ಪರ್ವತದಲಿ ನಿಂದಿಹೆ 4 ದೇಹವ್ಯಾಪ್ತಕ ನೀನೆ | ದೇಹಗಳ ಕೊಟ್ಟು ಮೋಹಗೊಳಿಸುವ ನೀನೆ ದೇಹಸ್ಥನಾಗಿ ತೋರುವ ಬಿಂಬ ನೀನೆ | ಜೀವಾಕಾರನೆ ಈ ಹದನ ಎನಗಿನ್ನು ತಿಳಿಯದೊ ಮೋಹ ಹರಿಸಿ ಸುಜ್ಞಾನ ನೀಡೊ ಸ್ನೇಹ ಗೋಪಾಲಕೃಷ್ಣವಿಠ್ಠಲ ಶ್ರೀ ಹರಿಯೆ ಹೃದಯದಲಿ ನಿಲಿಸೊ 5
--------------
ಅಂಬಾಬಾಯಿ