ಮಾನವ ಜನುಮ
ನಾನು ಯಾರೆಂಬ ಖೂನವಿಲ್ಲದೆ ಪ
ಕಾಲನಾಜ್ಞೆಯನ್ನು ಪಡೆದು
ಸೂಳ ಎಣಿಸಿ ಜಗಕಿಳಿದು
ಜಾಲಹಾಕಿ ಜವನಗೊಲಿದು
ಶೂಲಕ್ಹಾಕುವ ಮಾರಿಗೊಲಿದು 1
ತಂದ ಪುಣ್ಯವನ್ನು ಕೆಡಿಸಿ
ಮಂದಿಮಕ್ಕಳನ್ನು ಬಿಡಿಸಿ
ಮಂದನೆನಿಸಿ ಕುಂದುಹೊರೆಗೆ
ಬಂಧಕ್ಕೆಳೆವ ರಂಡೆನ್ಹೊರೆಸಿ2
ಜನನಿಜನಕರನ್ನು ಜರೆದಿ
ಮನೆಯ ಹೆಂಡಿರ ಮಾನ ಕಳೆದಿ
ಬಿನುಗು ಸೂಳೆಗೆ ವಶನಾದಿ
ಬಿನುಗರೊಳಗೆ ಬಿನುಗನಾದಿ 3
ನೀಗಿದಿ ಕುಲಶೀಲತೆ ಮುದಿ
ಗೂಗೆಯಂದದಿ ದಿನಗಳೆದಿ
ಭಾಗವತದ ಭಾಗ್ಯ ಮರೆದಿ
ಕಾಗೆನುಂಗಿದ ಹೊಲೆಯನಾದಿ 4
ಸಾಧು ಸುಜನಬೋಧ ಜರೆದಿ
ವೇದವಾಕ್ಯ ಮೀರಿ ನಡೆದಿ
ಶೋಧಿಸಿ ಸಮಯ ತಿಳಿಯದ್ಹೋದಿ
ಆದಿ ಶ್ರೀರಾಮಗ್ಹೊರತಾದಿ 5