ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬದುಕಲು ಪ್ರಾರ್ಥಿಸಿರೊ ಬಹುದಿನ ಬದುಕಲು ಪ್ರಾರ್ಥಿಸಿರೊ ಪ ಬದುಕಿ ಬಾಳುವಂಥ ಹದವತಿ ಸುಲಭವು ಬುಧಜನ ತೋರುವರದನು ಸಂತೋಷದಿ ಅ.ಪ ನಾನಾ ಯೋನಿಗಳಲ್ಲಿ ಬಂದು ಈ ಮನುಷ್ಯ ಜನ್ಮವು ಏನು ಪುಣ್ಯವೊ 1 ಕಾಲವು ಕೆಟ್ಟಿತು ಬಾಳಲಾಗದೆಂದು ಬಾಲಭಾಷೆಗಳ ಪೇಳದೆ ದ್ಯೆರ್ಯದಿ2 ರಾಜಶಾಸನವು ಈ ಜಗಕಲ್ಲವೆ ಮೂರ್ಜಗದೊಡೆಯನ ಶಾಸನ ಮೀರದೆ 3 ಕ್ಷೇತ್ರ ತೀರ್ಥಗಳು ವ್ಯರ್ಥಗಳಾದರೂ ಕ್ಷೇತ್ರಜ್ಞನ ಕೃಪಾ ಮಾತ್ರವಿದ್ದರೆ ಸಾಕು 4 e್ಞÁನಿಗೆ ಹರಿ ಪ್ರಿಯ e್ಞÁನಿ ಹರಿಗೆ ಪ್ರಿಯ e್ಞÁನವ ಪಡೆದು ಪ್ರಸನ್ನ ಮಾನಸರಾಗಿ5
--------------
ವಿದ್ಯಾಪ್ರಸನ್ನತೀರ್ಥರು