ರಂಗ ನಿನ್ನಯ ಮುಖ ತೋರಯ್ಯ ಪ
ಅರ್ಧರಾತ್ರಿಯಲ್ಲವತರಿಸಿದ್ಯೊ ಹೋಗಿ
ಮುದ್ದು ಗೋಪಿಯ ಸುತನೆನಿಸಿದ್ಯೊ
ಭದ್ರದೇವಿಯರ ನೀ ಕಳಿಸಿದ್ಯೊ ಬಂ
ದಿದ್ದ ಪೂತಣಿಯ ಸಂಹರಿಸಿದ್ಯೊ 1
ವತ್ಸಕಾಯುತಲ್ಹೋಗಿ ವನದೊಳು ಬಂದ
ಕಿಚ್ಚು ನುಂಗಿದೆ ನಿನ್ವದನದೊಳು
ಸ್ವಚ್ಛಮಾಡಿದಿ ಕಾಳಿಜಲಗಳು ತೋರೆ
ಕುಕ್ಷಿಯೊಳಗೆ ತ್ರಿಜಗಂಗಳು 2
ದೇವಕ್ಕಿದೇವಿ ಯಶೋದಾನೆ ವಸು
ದೇವ ನಂದ ಬಲರಾಮಗೆ ಎದುರು
ಬಾರೋ ಭೂದೇವಿರಮಣನೆ
ಭೀಮೇಶ ಕೃಷ್ಣನೆÀ ಶ್ಯಾಮವರಣನೆ3