ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತೋರಬಾರದೆ ನಿಮ್ಮ ಚರಿತೆಯನು ನರರೊಳು ನಗೆಗೀಡು ಮಾಡದ ಹಾಗೆ ಪ. ಕಲ್ಲೊಳು ಕಾಂತೆಯ ಮಾಡಿದವನೆಂ- ದೆಲ್ಲರು ಜಗÀದೊಳು ಪೇಳುವರು ಅಲ್ಲಿ ಮಾಡಿದ ಹಾಗೆ ಇಲ್ಲಿ ತೋರಿಸಿದರೆ ಬಲ್ಲಿದನೆನ್ನೊಡೆಯ ದೊಡ್ಡವನೆಂದು ಸಾರುವೆ 1 ಅಹಹ ಕುಬುಜೆಯಳ ತನುವನ್ನೆತ್ತಿ ಮಹಿಯೊಳು ಯುವತಿಯ ಮಾಡಿದೆಯೆಂಬರು ಬಹು ಪರಾಕ್ರಮವನ್ನು ಈಗ ತೋರಿಸಿದರೆ ಅಹುದೋ ಎನ್ನೊಡೆಯ ದೊಡ್ಡವನೆಂದು ಸಾರುವೆ 2 ನೀನೆ ಗತಿಯೆಂದು ಬಂದ ಭಕ್ತನ ಕ- ಣ್ಣುನವ ತಿದ್ದಿ ನಿಜವ ತೋರಿಸಯ್ಯ ದೀನದಯಾಳು ಹೆಳವನಕಟ್ಟೆ ರಂಗಯ್ಯ ದಾನಿ ಎನ್ನೊಡೆಯ ದೊಡ್ಡವನೆಂದು ಹೊಗಳುವೆ 3
--------------
ಹೆಳವನಕಟ್ಟೆ ಗಿರಿಯಮ್ಮ