ಒಟ್ಟು 6 ಕಡೆಗಳಲ್ಲಿ , 6 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತೋರಬಾರದೆ ನಿಮ್ಮ ಚರಿತೆಯನು ನರರೊಳು ನಗೆಗೀಡು ಮಾಡದ ಹಾಗೆ ಪ. ಕಲ್ಲೊಳು ಕಾಂತೆಯ ಮಾಡಿದವನೆಂ- ದೆಲ್ಲರು ಜಗÀದೊಳು ಪೇಳುವರು ಅಲ್ಲಿ ಮಾಡಿದ ಹಾಗೆ ಇಲ್ಲಿ ತೋರಿಸಿದರೆ ಬಲ್ಲಿದನೆನ್ನೊಡೆಯ ದೊಡ್ಡವನೆಂದು ಸಾರುವೆ 1 ಅಹಹ ಕುಬುಜೆಯಳ ತನುವನ್ನೆತ್ತಿ ಮಹಿಯೊಳು ಯುವತಿಯ ಮಾಡಿದೆಯೆಂಬರು ಬಹು ಪರಾಕ್ರಮವನ್ನು ಈಗ ತೋರಿಸಿದರೆ ಅಹುದೋ ಎನ್ನೊಡೆಯ ದೊಡ್ಡವನೆಂದು ಸಾರುವೆ 2 ನೀನೆ ಗತಿಯೆಂದು ಬಂದ ಭಕ್ತನ ಕ- ಣ್ಣುನವ ತಿದ್ದಿ ನಿಜವ ತೋರಿಸಯ್ಯ ದೀನದಯಾಳು ಹೆಳವನಕಟ್ಟೆ ರಂಗಯ್ಯ ದಾನಿ ಎನ್ನೊಡೆಯ ದೊಡ್ಡವನೆಂದು ಹೊಗಳುವೆ 3
--------------
ಹೆಳವನಕಟ್ಟೆ ಗಿರಿಯಮ್ಮ
ನಿನ್ನ ಮಾತ ಕೇಳಿ ಗಾಳಿ ನಿಲ್ಲಬೇಕೆ ಶೀತವನ್ನು ಸಹಿಸು ನೀನು ಮಾಯಾಬಲೆಗೆ ಸಿಲುಕೆ ಪಮುನ್ನ ಕಾಯವೆತ್ತಬೇಡವೆಂದಡದಕೆ ನೀನುಧನ್ಯನಾಗದೀಗ ಋತುಧರ್ಮಕಳುಕೆ ಅ.ಪಬಲೆಯ ಬೀಸಬೇಡವೆಂದು ಪಕ್ಷಿ ಪೇಳಲು ಕೇಳಿಬಲೆಯ ಬೀಸುದಿಪ್ಪುದೆಂತು ಪಕ್ಷಿ ಸಿಕ್ಕಲುಅಳುಕಿ ಸಾದು ಬಲೆಯ ಬಾಧೆ ಬಲಿಗನಾಗಲು ಹಾಗೆಛಳಿಯು ನಿನ್ನ ಬಾಧಿಸದು ಪರಮನಾಗಲು1ಬಲಿಗನಂತು ಪಕ್ಷಿ ಭಕ್ಷಣೆಯ ಮಾಳ್ಪನು ಹಾಗೆನಳಿನನಾಭ ತಾನು ವಿಷಯಾಸಕ್ತನೊ ಯೇನುಸಿಲುಕದಿಪ್ಪನೊಂದರೊಳಗೆಂಬುದಿದೇನು ಎಂದುಬಲಿಯವಾಗೆ ಶಂಕೆ ಮನವೆ ನಿನಗೆ ಪೇಳ್ವೆನು 2ಇಲ್ಲವಾದ ಜಗª ಮಾಯೆುಂದ ನಿರ್ಮಿಸಿ ತಾನುಅಲ್ಲಿ ಪೊಕ್ಕು ಉಳ್ಳದೆಂಬಹಾಗೆ ನಟಿಸಿನಿಲ್ಲಲೀಸದಿದನು ಮತ್ತೆ ಕ್ಷಣದೊಳಳಿಸಿ ಕೂಡೆನಿಲ್ಲುವನು ನಿಜದಿ ನಿರ್ವಿಕಾರಿಯೆನಿಸೀ 3ತಾನು ಸುಖಿಸುವಂತೆ ಎನ್ನ ಸುಖಿಸಬಾರದೆ ಲೋಕದೀನಬಂಧುವೆಂಬ ನುಡಿಯ ಹೋಗಲಾಡದೆಮಾನವರ ತನ್ನ ಹಾಗೆ ಕಾಣಬಾರದೆ ಎಂದುನೀನು ಕೇಳೆ ಪೇಳ್ವೆ ನಿನ್ನ ಮಾತ ಮೀರದೆ 4ಆನಂದರೂಪಗೆ ದುಃಖ ತೋರಿಸುವದೆ ಆತನೀನೆಂದೊಮ್ಮೆ ತಿಳಿಯೆ ನಿನಗೆ ದುಃಖ ಮರೆಯದೆಭಾನುವಿನ ಮುಂದೆ ತಮವು ನಿಲ್ಲಬಲ್ಲುದೆ ಜೀವನಾನೆಂಬುದರಿಂದ ಸುಖವು ಮರೆಸಿಕೊಂಡಿದೆ 5ವೇದದಲ್ಲಿ ಪೇಳಿದಂತೆ ಋಗಳೆಲ್ಲರೂ ತಾವುವೇದವೇದ್ಯಬ್ರಹ್ಮವೆಂದು ಸುಖವ ಕಂಡರೂಆದಿಮಧ್ಯತುದಿಗಳಲ್ಲಿ ಬ್ರಹ್ಮವೆಂಬರು ಅದಸಾದರದಿ ಸಾಧಿಸಲು ಸುಖವ ಕಾಂಬರು 6ಅರಿವು ಮರವೆ ಎರಡು ಬಳಿಕ ಕರಣಧರ್ಮವೂ ತಾವುಕರಣಸಾಕ್ಷಿಯಾದ ನಿಜವನರಿಯಲರಿಯವುಕುರುಹನಿಟ್ಟು ನೋಡಲರಿವಿನೊಳಗೆ ಬೆರೆವವೂ ಕೂಡೆತಿರುಪತೀಶ ವೆಂಕಟೇಶನೊಳಗೆ ಬೆರೆವವೂ7ಕಂ||ತನು ತಾ ಜೀವನ ನುಡಿಗೇಳ್ದನುವಾಗಿ ಮೇಲೆ ಮುಕ್ತಿಮಾರ್ಗಕ್ಕೆತನದಿಅನುಕೂಲನಪ್ಪೆನು ನಾ ನಿನ್ನನು ಮೀರೆನೆನುತ್ತ ಪೇಳುತ ತನುವಾದಿಪುದು
--------------
ತಿಮ್ಮಪ್ಪದಾಸರು
ಪಾರ್ವತೀತನಯ ಪಾಲಿಸು ಎನ್ನಾ ಪ. ಪಾರುಗಾಣಿಸುತೆನ್ನ ಮನದಲ್ಲಿನಿಂದು ಅ.ಪ. ರಜತಾದ್ರಿವಾಸನ ರಮಣಿ ಪುತ್ರನೆ ನಿನ್ನ ತ್ರಿಜಗÀ ಪೂಜಿಸುವುದೆಂದರಿತು ನಿನ್ನ ಭುಜಗ ಭೂಷಣ ಸುತನೆÀ ಕದನವ್ಯಾತಕೊ ದೇವಾ ಕಡೆಹಾಯಿಸೊ ಗಣಪಾ 1 ಗಂಗಜನಕÀನ ನಾಮ ಹಿಂಗದಲೆ ನುಡಿಸೆನಗೆ ಭೂ ಜಂಗುಳಿಗೆ ವಿದ್ಯಾಧಿದೇವದೇವಾ ಹಿಂಗಿಸುತಲಜ್ಞಾನ ರಂಗನಾ ಮರಿಮಗನೆ ಕಂಗಳಿಂದಲಿ ನೋಡಿ ಸಲಹೆನ್ನನು ದೇವಾ 2 ಶ್ರೀ ಶ್ರೀನಿವಾಸನ್ನ ತೋರುತ ಮನದಲಿ ಶ್ರೀಕರನೆ ಕರುಣಿಪುದು ಸ್ತುತಿಪ ಮತಿಯಾ ಏಕಭಕುತಿಯಲಿ ಸ್ತುತಿಸುವಾ ನರರಿಗೆ ಶ್ರೀಕಮಲನಾಭನ್ನ ತೋರುವಾ ಗಣಪ 3
--------------
ಸರಸ್ವತಿ ಬಾಯಿ
ಬೆಳಗಾಯಿತು ಏಳಿ ಪಾದ ನಳಿನ ಸೇವಕರು ಪ ಉದಯ ಕಾಲದೊಳೆದ್ದು ಹೃದಯ ನಿರ್ಮಲರಾಗಿ ಮಧುಸೂದನನ ಪಾಡಿ ಸ್ತುತಿಸುತಲಿ ಮುದದಿಂದ ಮಾಧವನ ವಿಧವಿಧದಿ ಪೂಜಿಸಿ ಪದುಮನಾಭನ ಪಾಡಿ ಪೊಗಳುವ ಜನರು 1 ರಂಗನ ಮಹಾದ್ವಾರದ ಮುಂದೆ ಕಾಣುವ ಗಜ ಸಾಲುಗಳ ನೋಡುತ ಬಂಗಾರ ಕೋಡುಳ್ಳ ಗೋವ್ಗಳಿಗೆರಗುತ್ತ ಅಂಗಜ ಜನಕನ ಪಾಡಿ ಪೊಗಳುವರು2 ರಂಭೆ ಊರ್ವಶಿ ಮೇನಕೆಯರೆಲ್ಲರು ಕೂಡಿ ಸಂಭ್ರಮದಲಿ ನಾಟ್ಯವಾಡುತಿರೆ ಗಂಗೆ ಗೋದಾವರಿ ಕೃಷ್ಣ ತುಂಗಭದ್ರೆ ಯಮುನೆಯರು ಇಂಬಿಲ್ಲದೆ ಪಾಡುತಿಹರೊ ಶ್ರೀ ಹರಿಯ 3 ಅತ್ರಿ ವಸಿಷ್ಠ ಗೌತಮ ಭಾರದ್ವಾಜರು ಅರ್ಥಿಯಲ್ಲಿ ಜಮದಗ್ನಿ ಋಷಿಗಳೆಲ್ಲ ಸ್ತೋತ್ರಮಾಡುತ ಪುರುಷೋತ್ತಮನನು ಪಾಡಿ ವಿಶ್ವಾಮಿತ್ರರು ಬಹು ಭಕ್ತಿಯಲಿ 4 ಸುತ್ತ ಸನಕಾದಿ ನಾರದರೆಲ್ಲ ಪಾಡಲು ನೃತ್ಯಗಾಯನದಿಂದ ಶ್ರೀ ಕೃಷ್ಣನ ಅರ್ತಿಯಿಂದ ಅಜಭವ ಸುರರೆಲ್ಲ ಸ್ತುತಿಸಲು ಸ್ತೋತ್ರಮಾಡಲು ದುರ್ಗದೇವಿಯರು5 ಗಜರಾಜ ಗೋಮಾತೆ ಮೊದಲಾದವರು ಬಂದು ಮಧುಸೂದನನ ನೋಡೆ ನಿಂತಿಹರು ಮದಗಜಗÀಮನೇರು ಮುದದಿ ಕಲಶ ಕನ್ನಡಿಗಳ ಪಿಡಿದು ನಿಂತಿಹರು ಬೇಗದಲಿ 6 ಮುತ್ತಿನ ಕದಗಳು ತೆಗೆವ ವ್ಯಾಳ್ಯದಲಿ ನೌಬತ್ತು ನಗಾರಿ ವಾದ್ಯಗಳಾಗಲು ಸಪರ್Àನ್ಹಾಸಿಕೆಯಲ್ಲಿ ಮಲಗಿರುವ ದೇವನ ಅರ್ಥಿವೈಭವ ನೋಡೊ ವೇಳೆ ಮೀರುವದು7 ಗಂಗಾಜನಕನ ಚರಣಂಗಳು ನೋಡುವ ಬಂಗಾರ ಕಿರುಗಂಟೆಗಳ ನಡುವನು ನೋಡುವ ರಂಗು ಕೇಸರಿಯ ಪೀತಾಂಬರ ನೋಡುವ ಶೃಂಗಾರ ವೈಜಯಂತಿಯ ನೋಡುವ 8 ವಕ್ಷ ಸ್ಥಳದಲ್ಲಿ ಶ್ರೀ ಲಕ್ಷ್ಮಿಯ ನೋಡುವ ಹಸ್ತದ ಆಭರಣಂಗಳ ನೋಡುವ ಮುತ್ತಿನ ಭುಜ ಕೀರ್ತಿ ರತ್ನದ್ಹಾರಗಳಿಂದ ಒಪ್ಪುವ ಉರದಿ ಶ್ರೀವತ್ಸನ ಸ್ತುತಿಸೆ 9 ಕೋಟಿ ಸೂರ್ಯರ ಕಾಂತಿ ಸೋಲಿಪ ನಗುಮುಖ ಲಲಾಟದಿ ಕಸ್ತುರಿ ತಿಲಕ ಒಪ್ಪಿರಲು ಮಾಟದ ಕರ್ಣಕುಂಡಲಗಳು ಹೊಳೆಯುತ್ತ ನೋಟದಿ ಜಗವ ಮೋಹಿಪ ದೇವನನು ನೋಡೆ10 ಅಂದದ ಮುಗುಳು ನಗೆಯು ದಂತ ಪಂಙÉ್ತಯು ಪಾದ ಕದಪುಗಳಂದವು ಇಂದ್ರ ನೀಲದಮಣಿ ಖಚಿತ ಕಿರೀಟದ ಮಂದಹಾಸದ ನಗೆÀಮುಖ ನೋಡುವ 11 ಕಡೆಗಣ್ಣ ನೋಟದಿ ಜಗವ ಸೃಷ್ಟಿಪದೇವ ಖಗವಾಹನನು ಸಂರಕ್ಷಿಪ ಲೋಕವ ಅಗಣಿತ ಮಹಿಮ ಅತಿಶಯದಿ ಲಯವ ಮಾಳ್ಪ ಸುಗುಣ ಸುಂದರನ ಗುಣ ಪೊಗಳುವ ಜನರು12 ನಿಖಿಳ ವ್ಯಾಪಕ ಕೃಷ್ಣ ಶುಕಮುನಿ ವಂದಿತ ದಿವ್ಯ ಚರಣನ ರುಕುಮಿಣಿ ಅರಸನ ಭಕುತರ ಪೋಷನ ಸಖ್ಯದಿಂದ ಪ್ರಿಯನ ನೋಡುವ ಸುಜನರು13 ಅನಿರುದ್ಧ ದೇವ ಶ್ರೀ ಪ್ರದ್ಯುಮ್ನ ಮೂರ್ತಿಯ ಸಂಕರುಷಣ ವಾಸುದೇವೇಶನ ನವನೀತ ಚೋರನ ನಾರಾಯಣನ ನಾಮ ಸ್ಮರಿಸುವ ಸುಜನರು 14 ಕವಿಜನ ಪ್ರಿಯನ ಕಮನೀಯ ರೂಪನ ಕಮಲನಾಭವಿಠ್ಠಲನ ಪಾಡುವ ಕಮಲಸಖನ ಸೋಲಿಸುವ ಮುಖಕಾಂತಿಯಕಮಲಾಕ್ಷಿಯರಸನ ಪೊಗಳುವ ಸುಜನರು15
--------------
ನಿಡಗುರುಕಿ ಜೀವೂಬಾಯಿ
ಶ್ರೀರಾಮ ಜಯರಾಮ ಜಯ ಜಯತು ರಾಮ ಶ್ರೀರಾಮ ಜಯರಾಮ ಜಯ ಜಯತು ರಾಮ ಪ ನಮೋ ರಾಮಚಂದ್ರ ಸದಾಪೂರ್ಣಾನಂದ ನಮೋ ಸುಗುಣ ಸಾಂದ್ರ ಕೌಸಲ್ಯಕಂದ ನಮೋ ರಾಘವೇಂದ್ರ ಸೀತಾ ಕುಮುದ ಚಂದ್ರ ನಮೋ ಅಜಭವೇಂದ್ರಾದ್ಯಖಿಲ ಸುರವಂದ್ಯ 1 ನಿನ್ನ ಉದಯದಿರವಿಯು ಉನ್ನತಿಯನೈದಿಹನು ಘನ್ನತೆಯ ಪೊಂದಿಹರು ಕೌಸಲ್ಯದಶರಥರು ನಿನ್ನ ಅನುಜರು ಜಗದಿ ಪರಮ ಪಾವನ್ನರು ನಿನ್ನರಸಿ ಶ್ರೀಸೀತೆ ತ್ರೈಲೋಕ್ಯ ಮಾತೆ 2 ನಿನ್ನ ಕರುಣದಿ ಹನುಮ ಬ್ರಹ್ಮತ್ವ ವೈದಿದನು ನಿನ್ನ ನಾಮದಿ ವ್ಯಾಧ ವಾಲ್ಮೀಕನಾದ ನಿನ್ನ ಪದರಜ ಸೋಂಕಿ ಶಿಲೆಯಬಲೆಯಾದುದು ನಿನ್ನ ಪ್ರೇರಣೆಯಿಂದ ಪ್ರಣವೆ ಜ್ವಾಲಾಯಿತು 3 ನಿನ್ನ ಪ್ರೇಮದಿ ಶಬರಿ ಮುನ್ನ ಸವಿನೋಡಿ ಫಲ ನಿನ್ನ ಪದಕರ್ಪಿಸಲು ಘನಪದವಿಯಿತ್ತೆ ನಿನ್ನ ಸಖ್ಯವನೆ ಬೆರಸಿದವ ಸುಗ್ರೀವನು ಧನ್ಯವಾಗಿರುತಿಪ್ಪ ನಿಹಪರಂಗಳಲಿ 4 ನಿನ್ನ ದಾಸ್ಯವನೈದಿ ಅನಂತ ಕಪಿವರರು ಉನ್ನತೋನ್ನತ ಯೋಗ್ಯತೆಗಳ ಪಡೆದಿಹರು ನಿನ್ನ ದ್ವೇಷದಿ ರಾವಣಾದಿಗಳು ಮಡಿದರು ನಿನ್ನ ಪೊಂದಿದ ವಿಭೀಷಣ ರಾಜ್ಯಪಡೆದ 5 ಸುರರು ಕೃತ ಪುಟಾಂಜಲಿಯಲ್ಲಿ ಸ್ಥಿತರಾಗಿ ಇರುತಿಹರು ನಿನ್ನಾಜ್ಞದಿ ಇತರ ಮನುಜರ ತೆರದಿ ಪಿತನಾಜ್ಞೆ ಪಾಲಿಸಲು ವ್ರತವನೇ ಕೈಕೊಂಡು ವನಕೈದಿದೆ 6 ಜಾನಕಿಯು ಅವಿಯೋಗಿ ನಿನ್ನ ಬಳಿಯಿರುತಿರಲು ವಾನರರ ಭಲ್ಲೂಕಗಳ ಸೇನೆನೆರಹಿ ಕಾನನವ ಸಂಚರಿಸಿ ಖಳರನ್ನು ಮೋಹಿಸಿದೆ ಶ್ರೀನಿಧಿಯೆ ತವ ಲೀಲೆ ಬಹು ಚೋದ್ಯವು 7 ತಾಮಸರ ಸಂಹರಿಸಿ ಭೂಮಿ ಭಾರವನಿಳಿಸಿ ನೇಮದಿಂ ಕೈಕೊಂಡು ರಾಜ್ಯವನ್ನು ಪ್ರೇಮದಿಂ ಪಾಲಿಸಿದೆ ಪ್ರಜೆಗಳನು ವಿಧವಿಧದಿ ತಾಮರಸಜನ ಪ್ರಾರ್ಥನೆಯ ಮನ್ನಿಸಿ 8 ನಿನ್ನ ರಾಜ್ಯವೆ ಸಕಲ ಸುಖದ ಸಾಮ್ರಾಜ್ಯವು ನಿನ್ನ ಯಾಙ್ಞವೆ ವೇದವಾಣಿಯಿಂದಧಿಕವು ನಿನ್ನನಂತವತಾರಗಳ ಚರಿತೆ ಸೋಜಿಗವು ನಿನ್ನಯವತಾರಕ್ಕು ಮೂಲಕ್ಕಭೇದವು 9 ನಿನ್ನ ಮಹಿಮಾ ಜಲಧಿಯೊಳು ರಮೆಯು ಮುಳುಗಿಹಳು ನಿನ್ನ ಸ್ತುತಿಗೈವ ನಾಲ್ಮೊಗನು ನಾಲ್ಮೊಗದಿಂ ನಿನ್ನ ಧ್ಯಾನದಿ ಸದಾ ಮೋದಿಪನು ಮಾರುತನು ನಿನ್ನನೇ ಪಾಡುವರು ಅಜಪವನ ಪತ್ನಿಯರು 10 ನಿನ್ನ ನಾಮವ ಸವಿದು ಭವನು ನಲಿನಲಿಯುತಿಹ ಖಗರಾಜ ರತಿ ವರ್ಣಿಸುವರು ಚನ್ನೆ ಪಾರ್ವತಿಯು ವಾರುಣಿಯು ಸೌಪರ್ಣಿಯು ಚನ್ನಾಗಿ ಪಾಡುವರು ನಿನ್ನ ಗುಣಗಳನು 11 ಸುರರು ನಾರದಾದಿ ಋಷಿವರರು ವಂದಿಸುತ ಭಕ್ತಿಯಲಿ ನಿನ್ನ ಪದಗಳಿಗೆ ಅಂದದಲಿ ವೀಣಾ ಸುಗಾನ ಸಂಗೀತದಲಿ ಒಂದೊಂದೇ ಮಹಿಮೆಗಳ ಪೊಗಳಿ ಕುಣಿಯುವರು 12 ಸುಖತೀರ್ಥಮುನಿರಾಜ ಗುರುರಾಘವೇಂದ್ರಾರ್ಯ ಅಕಳಂಕ ವgದೇಂದ್ರ ಯತಿಸಾರ್ವಭೌಮರು ಮುಕುತಿದಾಯಕ ನಿನ್ನ ಪದಕಮಲ ಪೂಜಿಸುತ ಪ್ರಖರ ಕಿರಣದಿ ಜಗವ ಬೆಳಗುತ್ತಲಿಹರು 13 ತಾಳತಂಬೂರಿ ಸಮ್ಯಾಳದಿಂದಲಿ ಕೂಡಿ ಕಾಲುಗೆಜ್ಜೆಯ ಕಟ್ಟಿ ಮೇಲು ಸ್ವರದಿಂದ ಮೇಲಾದ ಭಕ್ತಿಯಲಿ ವಾಲ್ಗೈಸುತಿಹರು 14 ನಿನ್ನ ಲೀಲೆಯ ಕಥೆಯು ಮುಕ್ತಿಗೆ ಸತ್ಪಥವು ನಿನ್ನ ನಾಮದ ಮಹಿಮೆ ನಿಗಮಗಮ್ಯ ನಿನ್ನ ಚರಣೋದಕವು ತ್ರಿಜಗಪಾವನ್ನವು ನಿನ್ನ ನೇಮವೇ ಸೃಷ್ಟಿ ಸ್ಥಿತಿಲಯಕೆ ಕಾರಣವು 15 ನಿನ್ನ ನಾಮದಿ ಭರದಿ ಶುಕನು ಕುಣಿದಾಡುತಿಹ ನಿನ್ನ ಧ್ಯಾನದಿ ಯೋಗಿವೃಂದ ಸಂದಿಪು (ದು) ನಿನ್ನ ರೋಷದಿ ಅಜಭವಾದ್ಯರು ತೃಣರು 16 ಮೂರ್ತಿ ಕಣ್ಣಿಗಲ್ಹಾದಕರ ನಿನ್ನಂಘ್ರಿ ಸೇವೆ ಸಾಮ್ರಾಜ್ಯಗಿಂ ಪರತರವು ನಿನ್ನ ನಾಮದ ರುಚಿಯು ಅಮೃತಕಿಂತಧಿಕ 17 ನಿನ್ನ ಧ್ಯಾನವೆ ಸಕಲ ಸಾಧನದ ಸಾರವು ನಿನ್ನ ಗುಣಗಾನವೆ ಶಾಸ್ತ್ರಗಳ ಭೂಷಣವು ನಿನ್ನ ಮಹಿಮಾರಹಿತ ಕಾವ್ಯವಗ್ರಾಹ್ಯವು ನಿನ್ನ ಲೀಲಾ ರಹಿತ ಶಾಸ್ತ್ರವೆ ಕುಶಾಸ್ತ್ರ 18 ನಿನ್ನ ನಾಮಧ್ಯಾನವೇ ದೇಹ ಸಾರ್ಥಕವು ನಿನ್ನ ನಾಮವೆ ವಿವಿಧ ರೋಗನಿರ್ಮೂಲಕವು ನಿನ್ನ ನಾಮವೆ ದುರಿತರಾಶಿಗೆ ಪಾವಕವು ನಿನ್ನ ನಾಮವೆ ಸಕಲಭವಬಂಧ ಮೋಚಕವು 19 ರೇಣು ತೃಣ ಕಾಷ್ಟದಲಿ ನಿನ್ನ ದಯಪರಮೇಷ್ಠಿಯಿಂದಿರುವೆಗಳಲಿ ನಿನ್ನ ಪ್ರೇಮದಿ ನಲಿದ ಮಂದಮತಿ ವಂದ್ಯನು ನಿನ್ನಲ್ಲಿ ಮಮತೆಯಿಲ್ಲದವದೂಷಿತನು 20 ಅಜಭವಗಿರೀಶಾ ಭಜಕÀಜನ ದಾಸಾ ಸುಜನಮನತೋಷಾ ಕುಜನ ಮನಕ್ಲೇಶ ದ್ವಿಜತತಿಯ ಪೋಷ, ರಜನಿಚರನಾಶ ರಜತಪುರಧೀಶ, ಭುಜಗÀಗಿರಿ ವಾಸ 21 ತಂದೆ ತಾಯಿಯು ನೀನೆ, ಬಂಧು ಬಳಗವು ನೀನೆ ಹಿಂದು ಮುಂದು ನೀನೆ, ಎಂದೆಂದು ನೀನೆ ಬಂದಭಯ ಪರಿಹರಿಸಿ ಕುಂದದಲೆ ಕಾಯ್ವಸಂ - ಬಂಧಿಗನÀು ಆಪ್ತ ಗೋವಿಂದ ನೀನೆ 22 ಸೃಜಿಸಿದವನು ನೀನೆ ಪೋಷಿಸಿದವನು ನೀನೆ ನಿಜಗತಿಯ ಜೀವರಿಗೆ ನೀಡುವವÀನು ನೀನೆ ಅಜಪಿತನೆ ನಿನ್ನ ಪದ ಭಜನೆ ಮಾಳ್ಪವರನ್ನು ನಿಜವಾಗಿ ಕಾಪಾಡಿ ಪೊರೆವ ಪ್ರಭುನೀನೆ 23 ಕೊಡುವವನು ನೀನೆ ಕೋಳುವವನು ನೀನೆ ಅಡಿಗಡಿಗೆ ಸುಖದುಃಖ ನೀಡುವವ ನೀನೆ ಕೊಡುವದಾತನು ನೀನೆ ಕೊಟ್ಟದ್ದು ಕೊಂಡರೆ ಹೊಡಕೊಂಡು ಅಳುವದ್ಯಾತಕೆ ಮೂಢಪ್ರಾಣಿ 24 ಈ ಪೊಡವಿಯೊಳು ಮೊದಲು ನಾನು ಬಹು ಕಾಲದಿ ಕೌಪೀನ ಸಹ ಯನ್ನ ಸಂಗಡಿರಲಿಲ್ಲ ಈ ಪೊಡುವಿಯನು ಬಿಟ್ಟು ನಾ ಪೋಪಕಾಲಕ್ಕು ಈ ಪರಿಯೆ ಪೋಪೆನೆಂಬುದು ಸಟಿಯು ಅಲ್ಲ 25 ಗಾಡಿ ವಾಜಿಯು ಮತ್ತೆ ಬೆಡಗಿನ ವಸನಗಳು ಕೇಡುಯಿಲ್ಲದವಾ ಭರಣ ವಸ್ತುಗಳು ನಾಡಿನೊಳು ಬಹುಮನ್ನಣೆಯು ಯೆಂಬರೆಲ್ಲೆನ್ನ ಕೂಡಬರಬಹುದಾದುದೊಂದುಯಿಲ್ಲ 26 ಎಷ್ಟುಗಳಿಸಿದರೆನ್ನ ಹೊಟ್ಟೆಗೊಂದೇ ರೊಟ್ಟಿ ಸೃಷ್ಟಿಪತಿ ನಿನ್ನಂಘ್ರಿ ನಿಷ್ಠೆ ತೊರೆದು ಕಷ್ಟ ನಷ್ಟಗಳನ್ನು ಸಹಿಸಿ ನಿಷ್ಠ್ಠುರನಾಗಿ ದುಷ್ಟತನದಿಂದ ನಾನಿಷ್ಟುಪರಿಗಳಿಸಿ 27 ದಾನಧರ್ಮಗಳಿಲ್ಲ ವÀ್ರತನೇಮಗಳುಯಿಲ್ಲ ಆನಮಿಸಿಕೊಡಲಿಲ್ಲ ಮಾನಿ ವಿಪ್ರರಿಗೆ ಧೇನುಪಾಲನೆ ನಿನ್ನಧ್ಯಾನವನ್ನೇ ಮರೆದು ಶ್ವಾನನÀಂದದಿ ಕಾದು ಕೊಂಡು ಕುಳಿತಿಪ್ಪೆ 28 ವಾರನಾರಿಯರಲ್ಲಿ ವೇಷಧಾರಿಗಳಲ್ಲಿ ಸೊರೆಮಾಡಿದೆ ಕರ್ಣನೆನಿಸ ಬೇಕೆಂದು ಶ್ರೀರಮಾಪತಿ ನಿನ್ನ ಚರಣ ಕಮಲಗಳನ್ನು ಆರಾಧಿಪರಿಗೆ ನಾರುವ್ವಿ ಕೊಡಲಿಲ್ಲ 29 ಸತಿಸುತರು ಹಿತÀದವರು ಹಿತವ ಮೇಲ್ತೋರಿದು - ರ್ಗತಿಗೆನ್ನ ಗುರಿಮಾಡುತಿಪ್ಪರಲ್ಲದಲೇ ಪರ - ಗತಿಗೆ ಸಾಧನ ತೋರ್ಪರಾರು ಯನಗಿಲ್ಲ 30 ಈ ಮಹಾಜ್ವರದಿಂದ ನೊಂದು ನಿನ್ನನು ನೆನೆವೆÉ ನಾಮಹಾಭಕ್ತಿಯಲಿ ನಂಬಿದವನಲ್ಲ ನಾ ಮಾಡಿದ ಪಾಪರಾಶಿಗಳ ಪರಿಹರಿಸಿ ಪ್ರೇಮದಿಂದಲಿ ಪೊರೆಯೋ ಪರಮಕರುಣಿ 31 ರೋಗವನೆ ಹೆಚ್ಚಿಸು ನಿರೋಗಿಯನು ಮಾಡು ಭವ ರೋಗದಿಂದಗತೀ ಕಡೆದಾಂಟಿಸು ಯೋಗಿವರ ನಿನ್ನಿಚ್ಛೆ ಹೇಗೆÀಮಾಡಿದರುಸರಿ ಆಗದೆಳ್ಳಿನಿತು ಸಂಕೋಚವೆನಗೆ 32 ನೀಕೋಟ್ಟಕವಚವಿದು ನೀ ತೆಗೆದು ಹಾಕಲ್ಕೆ ನಾಕೆಟ್ಟುದುದುಯೇನು ಕರುಣಾಳುವೆ ಈ ಕವಚ ಕೆಲಕಾಲ ಬಿಟ್ಟಮಾತ್ರಕೆ ಮುಂದೆ ನೂಕಬೇಡೆನ್ನ ಮನ ಪಾಪಗಳ ಕಡೆಗೆ 33 ತನುಮನವು ನಿನ್ನದು ಧನಧಾನ್ಯ ನಿನ್ನದು ವನಿತೆ ನಿನ್ನವಳು ಮನೆ ಮಾರು ನಿನ್ನದು ದೇವ ಎನಗಾಪ್ತರೆಂಬುವರು ನಿನ್ನದಾಸರು ರಾಮ ಎನದೆಂಬ ವಸ್ತುವೆಲ್ಲವು ನಿನ್ನದು 34 ನಿನ್ನ ನಂಬಿದಯನೆಗೆ ಪಾಪದಂಜಿಕೆಯಿಲ್ಲ ಪುಣ್ಯದಾಶೆಯು ಇಲ್ಲ ಪರಮಪುರುಷ ನಿನ್ನ ಪ್ರೇರಣೆಯಿಂದ ಯನಿ
--------------
ವರದೇಶವಿಠಲ
ಸಂಜೀವ ಶ್ರೀ ವೆಂಕಟ ನಮ್ಮನು ಪೊರೆವ ಪ ವೈಕುಂಠದಿಂದ ಬಂದು ಶೇಷಾಚಲದಲಿ ನಿಂದುಭಕ್ತರ ಪಾಲಿಪೆನೆಂದು ಅಭಯ ದಯಾಕರ ಸಿಂಧುಭಕುತಿ ಮುಕುತಿಯೀವ ಮತ್ಕುಲದೇವನೆಸಕಲ ಜನಸೇವಿತ ಘನ ಪರಿಪೂರ್ಣನೆವಿಕಸಿತ ಕಮಲನಯನ ಕಂಜನಾಭನೆಪ್ರಕಟಿತ ಶುಭಕೀರ್ತಿಯಿಂದ ಮೆರೆವನೆ 1 ಕ್ಲೇಶ ದುರಿತ ಸಂಹರನೆ2 ಜಯತು ದೋಷವಿನಾಶ ಜಯಮಹಿಮಾ ವಿಶೇಷಜಯತು ಲಕುಮೀ ಪರಿತೋಷ ಜಯ ಶ್ರೀವೆಂಕಟೇಶಜಯ ಕಮಲಜನಕನೆ ಜಯಜಗದೀಶಜಯ ಗಜವರದ ಪಾಲಿತ ಪುಣ್ಯಘೋಷಜಯತು ಜನಾರ್ಧನ ಜಗÀನ್ಮೋಹನ ವೇಷÀಜಯ ರಂಗವಿಠಲ ಕರುಣಾವಿಲಾಸ 3
--------------
ಶ್ರೀಪಾದರಾಜರು