ನದಿಗಳು
ಗಂಗಾದೇವಿ ನಮೋ ನಮೋ ಗಂಗಾದೇವಿ ತರಂಗಿಣಿ
ನೀ ಮುದ್ದು ಮಂಗಳಾಂಗನ ಮುಖ ತೋರಿಸೆ ಗಂಗಾದೇವಿ ಪ
ವಾಮನನಖದಿಂದ ಒಡೆದÀು ಬ್ರಹ್ಮಾಂಡ
ಬಹಿರಾವರಣದಿಂದಿಳಿದೆಯೆ
ಬಹಿರಾವರಣದಿ ಇಳಿದು ನಿರಂಜನ
ಆಲಯದೊಳು ಬಂದೆ ಭರದಿಂದ1
ಹರಿಪಾದೋದಕವಾಗಿ ಹರಿದು ಬಂದೆಯೆ ನೀನು
ಹರನ ಜಟೆಯಲ್ವಾಸವ ಮಾಡಿ
ಹರನ ಜಟೆಯಲ್ವಾಸವ ಮಾಡಿ ನೀ
ಮೇರುಗಿರಿಯಲ್ಲಿ ನಾಲ್ಕು ಸೀಳಾದೆಯೆ 2
ಜಕ್ಷು ಭದ್ರಾ ಸೀತಾ ಎಂಬ ಮೂವರ ಬಿಟ್ಟು
ಭರತಖಂಡಕೆ ಬಂದೆ ಬಹುದೂರ ಭಾಗಮ್ಮ
ಪ್ರತ್ಯಕ್ಷ ಅಳಕನಂದನ ತಾಯಿ 3
ಸಾಗರನರಸಿ ಪ್ರಯಾಗದಿ ಮರದ ಬಾಗಿಣವನು
ಕೊಂಬೆ ವೇಣಿಯ ದಾನ
ಕೊಂಬೆ ವೇಣಿಯ ದಾನ ಮುತ್ತೈದೇ-
ರಾಗಿರೆಂದ್ಹರಸಿ ಪೂಜೆಯಗೊಂಬೆ 4
ಸಗರನ ಮಕ್ಕಳ ಅಗಿವೆ ಕಡಿವೆನೆಂದು
ಭಗೀರಥನ್ಹಿಂದೆ ಬಂದೆಯೆ ನೀನು
ಭಗೀರಥನ್ಹಿಂದೆ ಬಂದೆಯೆ ಹಿಮಾಲಯ ದಾಟಿ
ಜಾಹ್ನವಿ 5
ಗಮನ ಮಾಡುವ ಗಂಗಾ
ಸಮನಾಗಿ ಹರಿದೆ ಸಂಗಮಳಾಗಿ
ಸಮನಾಗಿ ಹರಿದೆ ಸಂಗಮಳಾಗಿ ತ್ರಿವೇಣಿ
ಯುಗಳ ಪಾದಗಳಾರು ತೋರಿಸೆ 6
ಭೀಷ್ಮನ ಜನನಿ ಭೀಮೇಶ ಕೃಷ್ಣನ ಪುತ್ರನ(ತ್ರಿ ನೀ?)
ದೋಷವ ಕಳೆದÀು ಸಂತೋಷದಿ
ದೋಷವ ಕಳೆದÀು ಸಂತೋಷದಿ ಸಾಯುಜ್ಯ
ಬ್ಯಾಸರದಲೆ ಕೊಟ್ಟು ಸಲಹಮ್ಮ 7