ಜÉೂೀಜೋ ಜೋಜೋ ಜೋ ಮುಖ್ಯಪ್ರಾಣ
ಜÉೂೀಜೋ [ಮಲೆವರ] ಗಂಟಲಗಾಣ ಪ.
ಜÉೂೀಜೋ ರಾಕ್ಷಸಶಿಕ್ಷ ಕಲ್ಯಾಣ
ಜÉೂೀಜೋ ಸಕಲವಿದ್ಯಾ ಪ್ರವೀಣ ಅ.ಪ.
ಆ ಜಗದಲಿ ನೀ ಬಾಲಬ್ರಹ್ಮಚಾರಿ
ಸೋಜಿಗದಲಿ ಕಪಿ ರಾಜ್ಯವನಾಳಿ
ತೇಜಮುತ್ತಿನ ಕವಚಕುಂಡಲಧಾರಿ
ಪೂಜಿಪರ ಪಾಲಿಪೆ ಸುಜನರುಪಕಾರಿ 1
ಭೂಮಿ ಭಾರವನಿಳಿಸಿದ ಭೀಮ
ಕಾಮಿ ಕೀಚಕನ ಕುಟ್ಟಿ ರಣಧಾಮ
ಭಾಮಿನಿ ದ್ರೌಪದಿ ಕಷ್ಟ ನಿರ್ಧೂಮ
ಕಾಮಿತಾರ್ಥವನೀವÀ ಕಲ್ಪತರು ಭೀಮ 2
ಸೌಂದರ್ಯರೂಪದ ಶ್ರೀಮದಾನಂದ
ತಂದೆ ಹಯವದನನ ಮೋಹದ ಕಂದ
ಬಂದು ಉಡುಪಿಯಲಿ ನೆಲೆಯಾಗಿ ನಿಂದ
ವಂದಿಸುವೆ ನಿದ್ರ್ರೆಗೈ ಹರಿಧ್ಯಾನದಿಂದ 3