ಒಟ್ಟು 4 ಕಡೆಗಳಲ್ಲಿ , 2 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದೇ ಪೂರ್ಣಪದಾ ತಿಳಿ ಜೀವಾ ಆತ್ಮಸ್ವರೂಪಾ ನೋಡು ನೀ ಈ ಜಗಕೆಲ್ಲ ಆಧಾರಾ ಪರಮಪದವದೇ ನೊಡು ನೀ ಪ ತೋರುವೀ ಜೀವರಾಧಾರ ತೋರದಾ ಪೂರ್ಣಾಜÁ್ಞನರೂಪ ಅದೇ ಕಲ್ಪನೆರಹಿತ ಅದ್ವೈತ ಪರಮಪದವದೇ ನೋಡು ನೀ 1 ಮನವಾಣಿಗೆ ಸಿಗದ ಆ ಸ್ಥಿತಿ ಪೂರ್ಣಾ ಪರಮಾತ್ಮನೈ ಅದೇ ನೀನಿಹೆ ಜೀವಾ ತಿಳಿಯಿದನಾ ಗುರು ಶಂಕರನಾ ಬೋಧನಾ 2
--------------
ಶಂಕರಭಟ್ಟ ಅಗ್ನಿಹೋತ್ರಿ
ಚರಣ ಕಮಲಕರ್ಪಿಸುವೆ ಗುರುನಾಥಾ ಈ ಸೇವೆಯು ಕರುಣನಿಧಿಯೆ ಜÁ್ಞನರೂಪ ರಾಜವಿದ್ಯೆ ರಾಜಗುಹ್ಯ ಆತ್ಮತತ್ವ ಬೋಧಿಸಿ ನೀ ಮೂಢತನದ ತಮವ ಕಳೆದು ತೇಜದಿಂದ ಮೆರೆವ ನಿನ್ನ 1 ಬಾಲನ ತೊದಲಾದ ನುಡಿಯ ಕೇಳಿ ಜನನಿ ನಲಿವ ತೆರದಿ ಲೀಲೆಯಿಂದ ಆಲಿಸುತಲಿ ಪಾಲಿಸು ಗುರುಶಂಕರನೆ 2
--------------
ಶಂಕರಭಟ್ಟ ಅಗ್ನಿಹೋತ್ರಿ
ಮಂಗಲಂ ಗುರುರಾಜಗೆ ಮಂಗಲ ಪರಮಾನಂದಸ್ವರೂಪಗೆ ಪ ಜೀವÀಪರಮರೈಕ್ಯವ ತಿಳುಹಿಸುವಾ ದೇವನೆ ನೀನೆನ್ನುತ ಬೋಧಿಸುವಾ ಸಾವು ಸಂಕಟಗಳ ಮೂಲವ ಕಡಿಯುವಾ ಪಾವನಾತ್ಮ ಘನಜÁ್ಞನರೂಪಗೆ 1 ಶೋಧಿಸಿ ದೇಹತ್ರಯಗಳ ಕಳಹಿ ಬಾಧರಹಿತ ಪರಮಾತ್ಮನ ಅರಿವನು ಬೋಧಿಸಿ ಅನುಭವದಲಿ ನೆಲೆಸಿದಗೆ 2 ತೋರಿಕೆ ಅನಿಸಿಕೆ ಎನಿಸುವ ದ್ವೈತವ ಧೀರತನದಿ ಸುಳ್ಳೆಂದು ತಿಳಿಸುವಾ ನಾರಾಯಣಗುರುವರನ ಕೃಪಾಪ್ರಿಯ ಪೂರಣಬ್ರಹ್ಮಸ್ವರೂಪ ಶಂಕರಗೆ 3
--------------
ಶಂಕರಭಟ್ಟ ಅಗ್ನಿಹೋತ್ರಿ
ವಾಣಿ ಮಂಗಳಂ ದೇವಿ ಪ ಗೀರ್ವಾಣಿ ಕಮಲಪಾಣಿ ಭ್ರಮರವೇಣಿ ಕೀರವಾಣಿ ಅ.ಪ. ಇಂದುವದನೆ ದೇವಿ ಚಂದ್ರಧವಳ ಸುಂದರಾಂಗಿ ಕುಂದರದನೆ ಮಂದಗಮನೆ 1 ವೀಣಾ ಪಾಣಿ ದೇವಿ ಶೋಣ ಬಿಂದು ದಶನ ವಸನೆ ಏಣನಯನೆ ಧವಳ ವಸನೆ 2 ಅಂಬುಜಾಕ್ಷಿ ದೇವಿ ಕುಂಭ ಸಂಭವಾದಿ ವಿನುತೆ ಕಂಬುಕಂಠಿ ಶಂಭು ಸೋದರಿ 3 ಶಾರದಾಂಬೆ ದೇವಿ ಅಂಬರೋಪಮಾನ ಮಧ್ಯೆ ಜಂಭವೈರಿ ಗೀಯಮಾನೆ 4 ಜÁ್ಞನರೂಪೆ ದೇವಿ ಮೌನಿ ಹೃದಯ ಕಮಲಹಂಸೆ ಧೇನುನಗರ ಸನ್ನಿವಾಸೆ 5
--------------
ಬೇಟೆರಾಯ ದೀಕ್ಷಿತರು