ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜÁ್ಞನಸುಧೆಯ ಪಾನಮಾಡಿ ಸ್ವಾನುಭವದಿ ಲೀನನಾದೆ ಹೀನ ಭವದ ತಾಪವೆನಗೆ ಬಾಧಿಸುತಿರೆ ಗುರು ನೀಡಿದ ಪ ಜೀವನ ಸುಖದುಃಖದಾ ಭಾವ ಜೋಲಿಗಳನು ಮರೆದು ದೇವ ನಾನೆ ಎಂದು ತಿಳಿದು ಪಾವನಾತ್ಮನೊಳಗೆ ಬೆರೆದು 1 ನಾನು ನೀನು ಎಂಬ ಭೇದ ಏನು ಮೋಜು ಮಾಯವಾಯ್ತು ಕಾಣದಾಯ್ತು ಜೀವಭಾವ ಜÁ್ಞನಬೋಧದಾ ಪ್ರಭಾವ2 ಭಾನ ಮರೆದು ದೇಹಮನದ ಜÁ್ಞನಗೀತೆಗಳನು ಪಾಡಿ ತಾನೆ ತಾನಾಗಿರುವ ಜÁ್ಞನಿ ಗುರುವಿನೊಳಗೆ ಕೂಡಿ 3 ಕಲ್ಪನಾವಿಲಾಸ ಪೋಗಿ ಅಲ್ಪನೆಂಬ ಮತಿಯ ನೀಗಿ ಅಲ್ಪನಾತೀತನಾದನಲ್ಪನಾದ ಶಂಕರನಾ 4
--------------
ಶಂಕರಭಟ್ಟ ಅಗ್ನಿಹೋತ್ರಿ