ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಳೇಳು ಬಾಲಕನೆ ಅe್ಞÁನನಿದ್ರೆಯಿಂ ಏಳು ತಿಳಿವಿಕೆ ಎಂಬ ಎಚ್ಚರವ ಹೊಂದುತಲಿ ಪ ಹಾಳು ಮಾಯೆಯು ಎಂಬ ಮೇಲುಮುಸುಕನು ತೆಗೆದು ಕೀಳು ಬಾಳುವೆಯೆಂಬ ಹಾಸಿಗೆಯ ಸುತ್ತುತಲಿ ಕೇಳು ಕಿವಿದೆರದೇಕಚಿತ್ತದಿಂ ಶ್ರುತಿಯೆಂಬ ಕೋಳಿ ಕೂಗುತಲಿಹುದು `ತತ್ವಮಸಿ' ಎಂದು 1 ಬಿತ್ತರಿಸಿಹುದು ಮುಮುಕ್ಷುತ್ವ ಮುಂಬೆಳಗಾಗೆ ಚಿತ್ತವೆನ್ನುವ ಕಮಲವರಳಿಹುದು ನೋಡೀಗ ಸುತ್ತಲಡಿಗಿದ ಸುವಾಸನೆಯ ಮೂಸುತಲಿ ನೀ ಉತ್ತು ಮೋತ್ತುಮ ನಿಜಾನಂದವನು ಪಡೆವುದಕೆ 2 ಜÁ್ಞನನಿಂದಕರೆಂಬ ಗೂಗೆಗಳು ಅಡಗಿದವು ಕಾಣದಾದವು ಕುತರ್ಕಗಳೆಂಬ ತಾರೆಗಳು ಸ್ವಾನುಭವಸುಜÁ್ಞನಭಾನುವುದಯಿಸುತಿಹನು ಜÁ್ಞನಿಶಂಕರನ ಸದ್ಬೋಧವನೆ ಸ್ಮರಿಸುತಲಿ 3
--------------
ಶಂಕರಭಟ್ಟ ಅಗ್ನಿಹೋತ್ರಿ