ಒಟ್ಟು 20 ಕಡೆಗಳಲ್ಲಿ , 4 ದಾಸರು , 16 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಜÁ್ಞನಿ ಜೀವನಿಗೆ ಅಭಿಮಾನ ಬಹಳ ಸುಜÁ್ಞನಿಯಾ ನುಡಿಯ ಲಕ್ಷಿಸನು ಕೇಳಾ ಪ ಬುದ್ಧಿ ಮನದೇಹಗಳು ತಾನೆಂದು ತಿಳಿಯುತಲಿ ಇದ್ದುದನು ಮರೆತು ತಾ ಜಾಣನೆನಿಸುವನು ಒದ್ದಾಡುತಿದ್ದರೂ ಅಭಿಮಾನವನೆ ಹÉೂತ್ತು ಗುದ್ದಾಡುತಲಿ ತಾನು ಸುಖವ ಹುಡುಕುವನು 1 ಸಟಿಯಾದ ಸಂಸಾರ ದಿಟವೆಂದು ನಂಬುತಲಿ ಸೆಟೆದಾಡುತಿರುವೆಯೋ ತಿಳಿದು ನೋಡಾ ಹಟವ ಹಿಡಿಯಲು ಬೇಡ ತೋರ್ಪುದೇ ದಿಟವೆಂದು ನಟನೆಯಾ ಮಾತಲ್ಲವೆನೆ ಕೇಳನವನು 2 ಅರಿ ನೀನು ನಿನ್ನ ಅರಿವಿನಾ ಹೊರತು ನೀ ಸುಖ ಪೊಂದಲಾರೆ ಆರು ಸುಖಪಡೆದಿಲ್ಲ ಅಜÁ್ಞನದಿಂದೆನಲು ಇರಲಿ ಹೋಗೆಂದೆನುತ ಮೋರೆ ಹೊರಳಿಸುವಾ 3 ಬಾಳುವೆಯು ನಿಜವೆಂದು ನಂಬಲಿವನಾ ಗೋಳು ಗಾಳಿಯನೆ ಗುದ್ದಿ ಮೈ ನೊಯ್ಸಿಕೊಂಡಂತೆ ಕೇಳು ಚಿತ್ರದೊಳಿರುವ ಬೆಂಕಿ ತಾ ದಿಟವೆಂದು ಮೇಲೆ ನೀರೆರೆದಂತೆ ಎನೆ ಕೇಳನವನು 4 ಗೊಡ್ಡು ಮಾತೆಂದು ತಾ ಜÁ್ಞನಕೆರವಾಗುತಲಿ ದಡ್ಡತನವನೆ ತೋರಿ ದುಃಖಿಯಾಗುವನು ಶುದ್ಧಜÁ್ಞನವನಂಬಿ ತನ್ನ ತಾ ತಿಳಿಯದಲೆಬುದ್ಧ ಶಂಕರನುಕ್ತಿಗೆರವಾಗುತಿಹನು 5
--------------
ಶಂಕರಭಟ್ಟ ಅಗ್ನಿಹೋತ್ರಿ
ಆರ್ತಭಾವ ಸುಳಾದಿ ಧ್ರುವತಾಳ ವೊಂದು ತೋರೆನಗರವಿಂದನಯನ ಮಂದಾಕಿನಿಯ ಪಡೆದ ಮುದ್ದು ಚರಣ ಸುಂದರಾಂಗ ತೋರೆನಗೆ ಸುರೇಂದ್ರನಾಥ ಕಂದರ್ಪಪಿತನ ಕಾಲಂದಿಗೆ ರುಳಿ ಗೆಜ್ಜೆ ಚೆಂದುಳ್ಳ ಪದ್ಮರೇಖೆಯಿಂದೊಪ್ಪುವೊ ಇಂದಿರೆ ಕರಕಮಲದಿಂದ ಪೂಜಿತನಾದ ಚಂದ್ರವದನ ನಿನ್ನ ಚೆಲುವ ಪಾದ ಇಂದ್ರಾದಿ ಹರ ನಾರಂದ ಸುರಬ್ರಹ್ಮಾದಿ ವಂದ್ಯ ನಿನಗೆ ಕೋಟಿ ನಮೋ ನಮೋ ಎಂದು ಬೇಡುವೆ ದಯಾಸಿಂಧು ಎನಿಸಿದಾತ ಕಂದನಂದದಿ ನೋಡಿ ಸಲಹೋ ಎನ್ನ ಮಂದಬುದ್ಧಿಯ ಮಹಾಮದಡ ಪಾಮರ ಭವ ಬಂಧನದೊಳು ಸಿಲುಕಿ ನೊಂದೆನಯ್ಯ ಸಂದೇಹ ಮಾಡದೆ ಸಲಹದಿದ್ದರೆ ನಿನ್ನ ಹೊಂದಿ ಬಾಳುವುದೆಂತೊ ಮುಂದರಿಯೆ ಬಿಂದು ಮಾತ್ರದಿ ನಾಮಾಮೃತವ ಭೀಮೇಶಕೃಷ್ಣ ತಂದು ನೀಡೆನಿಗೆ ಇಂದೀವರಾಕ್ಷ 1 ಮಠ್ಯತಾಳ ಯುಗಳ ಪಾದಕೆ ಕೈಯ ಮುಗಿದು ಬೇಡುವೆನಯ್ಯ ಜಗದುದರನೆ ನಿನ್ನ ಜಾಣತನವ ಬಿಟ್ಟು ಅಗಣಿತಗುಣಮಹಿಮ ಅಂತರಾತ್ಮಕ ದೇವ ಬಗೆಬಗೆಯಲಿ ಸಲಹೋ ಭಕ್ತವತ್ಸಲ ನಿನ್ನ ಮಗುವೆಂದೆನ್ನ ಕಾಯೊ ಮಂದರೋದ್ಧರ ದೇವ ನಿಗಮಗೋಚರ ಸ್ವಾಮಿ ನಿಂತು ನೋಡುತ ಎನ್ನ ಚಿಗುರುದೋಷದಕುಡಿಯ ಚಿವುಟಿ ಹಾಕುತ ನಿನ್ನ ಸುಗುಣಗಳನೆ ಬಿಟ್ಟೆನ್ನವಗುಣವೆಣಿಸಿದರೆ ಇಗೋ ನಿನಗಪಕೀರ್ತಿ ಈಗ ಒಪ್ಪಿಸುವೆನು ಬಿಗಿದ ಭವಪಾಶ ಬಿಚ್ಚಿ ಭೀಮೇಶಕೃಷ್ಣ ತೆಗೆಯದೆ ನಿನ್ಹೊರತೀ ಜಗದೊಳಗುಂಟೇನಯ್ಯ 2 ವಚನ ಸಕಲ ಸ್ನಾನವು ನೇಮ ಹೋಮ ಜಪಂಗಳು ಸಕಲ ಪುಣ್ಯಕ್ಷೇತ್ರ ಮೂರ್ತಿನಾಮಂಗಳು ಸಕಲ ಪುರಾಣ ವೇದಾದಿಗ್ರಂಥಗಳು ಸಕಲ ಕಾರ್ಯವು ಸರ್ವೇಷ್ಟ ಫಲಂಗಳು ಸಾಯುಜ್ಯ ಪದವಿಗಳು ಲಕುಮೀಶ ಇವು ನಿನ್ನ ನಖಶಿಖ ಪರಿಯಂತ್ರ ಸಾರಥಿ ಸಮದೃಷ್ಟಿಲಿ ನೋಡಲು ಸಕಲಸಿದ್ಧ್ದಿಯು ಸರಿಯಾಗಿ ಕೈಗೂಡೋದು ಶಕಟಸುರಾಂತಕ ಕಕುಲಾತಿ ಮಾಡದೆ ಬಕನ್ವೈರಿಯೆನ್ನ ಭಾರವ ನೀ ವಹಿಸಲಿ ಬೇಕೊ ಇಕೋ ನಿನ್ನ ಚರಣಕ್ಕೆ ಈ ದೇಹ ಅರ್ಪಿಸುವೆ ಗೋಕುಲಾವಾಸ ನಿನ್ನ ಪಾದಕೆ ನಮಸ್ಕರಿಸುವೆ ಮುಕುತಿದಾಯಕ ಮುದ್ದು ಭೀಮೇಶಕೃಷ್ಣನೆ ಭಕುತಿಜÁ್ಞನದಲಿಡೊ ಭಯಹಾರಿ ಎನ್ನ 3 ಗೋಪಸುತನೆ ನಿನ್ನ ಗುರುವಿನ್ವಲ್ಲಭೆ ಮಹ ದಪರಾಧವೆಣಿಸದೆ ನೀ ಕರುಣದಲೆ ಸಾಂ- ದೀಪಗೆ ಸುತರನಿಟ್ಟ ಪಯಾಂಬುಧಿವಾಸ ಕೋಪದಿ ಬಯ್ದ್ದಾ ಶಿಶುಪಾಲಗೊಲಿದೆಯೊ ಶ್ರೀಪತಿ ಶರಣೆಂದಾ ದ್ರೌಪದಿ ಕಾಯ್ದಂತೆ ಕಾಪಾಡೊ ಈ ಭವಕೂಪದೊಳಗೆ ಬಿದ್ದೆ ನೀ ಪಿಡಿಕೈಯ ದಯಾಪರಮೂರುತಿ ಆಪತ್ತು ಬಾಂಧವ ಈ ದೇಹವೃಕ್ಷದಲಿ ದ್ವಾ- ಸೂಪರಣನಂತೆ ದೂರೇನೋ ಎನ್ನ ಸ- ಮೀಪದಲ್ಲಿದ್ದು ಸ್ವರೂಪ ತೋರದಲೆ ಸಂ- ತಾಪ ಬಡಿಸದಿರೆಂದಾಪನಿತು ಪೇಳ್ವೆ ಭೂಪಾಲ ಭೀಮೇಶಕೃಷ್ಣ ನಿನ್ನ ಪಾದ ನಾ ಪೊಂದಿದೆನೊ ದೊರೆ ನೀ ಪೊರೆಯೆಂದು 4 ಜತೆ ಏಸೇಸು ಕಾಲಕೆ ಬ್ಯಾಸರದೆ ಭೀಮೇಶಕೃಷ್ಣ ಲೇಸು ನೀಡೆನಗೆ ಸದಾ ಸುಮಂಗಳವ 5
--------------
ಹರಪನಹಳ್ಳಿಭೀಮವ್ವ
ಇದೇ ಪರಮಾರ್ಥ ಪ್ರಾಪ್ತಿಗೆ ಸೋಪಾನ ತಿಳಿ ಇದರಲ್ಲಿ ಬೇಡಿನ್ನು ಅನುಮಾನ ಇದೇ ಬಕುತಿಮಾರ್ಗವೇ ಸುಲಭ ಸೋಪಾನ ತಿಳಿ ವೈರಾಗ್ಯಜÁ್ಞನಾದಿಗಳ ತಾಣಾ ಪ ಸಂಸಾರದೊಳಗಿರ್ದ ಜೀವಂಗೆ ಸುಖದುಃಖದಿ ಬಳಲುವ ಮನುಜಂಗೆ ಕಂಸಾರಿ ಶ್ರೀ ಕೃಷ್ಣನಾಮವೊಂದೇ ಪಾಪ ಸಂಹಾರಿ ಪರಶಿವನಾಮವೊಂದೇ ಈ ಸಂಸಾರ ದಾಂಟುವಾ ನಿಜತಾಣಾ1 ನಿಷ್ಕಾಮ ಮನದಿಂದ ಭಜಿಸಲ್ಕೆ ಬಹು ದುಷ್ಕರ್ಮ ಫಲವೆಲ್ಲ ತೊಲಗಲ್ಕೆ ಶ್ರೇಷ್ಠ ವೈರಾಗ್ಯವು ನೆಲೆಸಲ್ಕೆ ಬಲು ಜಿಜÁ್ಞಸೆ ಮನದಲ್ಲಿ ಜನಿಸಲ್ಕೆ ಈ ಪರಮಾತ್ಮಧ್ಯಾನ ಮಹಾಸಾಧನಾ 2 ಆತ್ಮಜÁ್ಞನದ ಬೋಧನೆಗೊಂಡು ಪರಮಾತ್ಮನ ರೂಪವೆ ತಾನೆಂದೂ ಬರಿ ತೋರ್ಕೆ ಜಗವೆಲ್ಲ ಪುಸಿ ಎಂದೂ ಪರಮಾತ್ಮನೆ ನಿತ್ಯನು ನಿಜವೆಂದೂ ಪರಜÁ್ಞನವ ನೀಡಲ್ಕೆ ಈ ಸಾಧನ 3 ಪರಮಾರ್ಥನುಭವಿಗಳ ಸಂಗ ನೆರೆದೊರಕುತಲಿರುತಿರೆ ಭವಭಂಗ ವರ ಭಕ್ತಿ ಮಾರ್ಗದಿ ದೊರಕುವದೆಂದ ಇದೆ ಪರಮಾರ್ಥ ಪ್ರಾಪ್ತಿಗೆ ಮೂಲವೆಂದ ಇದೆ ಗುರುಶಂಕರಾನಂದಕೃಪೆಯಿಂದ 4
--------------
ಶಂಕರಭಟ್ಟ ಅಗ್ನಿಹೋತ್ರಿ
ಈ ದೇಹಾಭಿಮಾನವÉೀ ಸಂಸಾರಮೂಲವಯ್ಯ ಕೇಳೀಗಲೇ ಜÁ್ಞನದಿಂದಾ ನೀ ದೂಡನಿನ್ನಭಿಮಾನ ವಿಷಯಾಭಿಲÁಷಾ ಮನದಲ್ಲಿ ಮೂಡಿ ಜೀವಂಗೆ ಗುಣದಲ್ಲಿ ಅನುರಾಗ ಕೂಡಿ ಇದೇ ಭೋಗನೇ ಮುಂದೆ ಸುಖದುಃಖವಾಗಿ ಜನುಮಕ್ಕೆ ಮೂಲಾದಿದೇ ವಾಸನಾಳಿ ಇದೇ ವಾಸನಾಳಿ ಇದೇ ಬಾಳುವೆ ಇದೇ ಬಾಳುನೆ ಇದೇ ಬಾಳು ದೇಹಾಭಿಮಾನಾಸ್ಪದಾ ಮೂಲ ಕೇಳಿಗಲೇ ಜÁ್ಞನದಿಂದ 1 ಮನದೇಹಗಳು ನಿನ್ನ ನಿಜರೂಪವಲ್ಲ ಇವುತೋರಿ ಬಯಲಾಗುತಿಹವಾಗಿವೆಲ್ಲ ನಿಜರೂಪವಲ್ಲ ಇದರಾಚೆಗಿಹ ಶುದ್ಧ ಚೈತನ್ಯ ನಾನೇ ಅದೇನಾನಿಹೆ ಅದೇ ನಾನಿಹೆ ಅದೇ ಸತ್ಯನೆಂದಾಗ ಹರಿವುದು ದೇಹಾಭಿಮಾನ ನೋಡುನೀ ಜÁ್ಞನದಿಂದ 2 ಈ ರೀತಿ ಸುವಿಚಾರವನು ಮಾಡಿಕÉೂಂಡು ನಿಜನನ್ನು ಕಂಡು ಸ್ವರೂಪಾತ್ಮನೋಳು ನಾನು ನೆಲೆ ನಿಂತು ಕೊಂಡು ಇದೆಲ್ಲ ಈ ಸಂಸಾರ ಕನಸೆಂದು ಕಂಡು ಪರಮಾತ್ಮನನೆ ವೃತ್ತಿಯೊಳು ತುಂಬಿಕೊಡು ಆನಂದ ಉಂಡು ಬಿಡೋ ಚಿಂತೆಯ ಬಿಡೋ ಚಿಂತೆಯಾ ಬಿಡೋ ಬಾಳ ಚಿಂತೆಯಾ ಶ್ರೀ ಶಂಕರಾಚಾರ್ಯರಿ ಬÉೂೀಧದ ಜÁ್ಞನದಿಂದ 3
--------------
ಶಂಕರಭಟ್ಟ ಅಗ್ನಿಹೋತ್ರಿ
ಈ ವಿಬುಧರ ಸಂಗವೆ ಮಹಾಪ್ರಮೋದ ದುರ್ಲಭ ಜÁ್ಞನಿಯ ನಿಜಾತ್ಮಬೋಧ ಭಾಗ್ಯವಿದೇ ಬಹುಜನ್ಮದ ಪುಣ್ಯ ಯೋಗ್ಯರಬೋಧಾ ದೊರಕುವುದಣ್ಣ ಬೋಗ್ಯದಿ ಲಂಪಟನಾದವಗಿನ ಅಗ್ಗದಿ ಸಿಗುವದೆ ಸಜ್ಜನರನ್ನಾ ಸ್ವರ್ಗದಿ ಸಿಗದಿಹ ಸಂತರ ಬೋಧ ದುರ್ಲಭ ಜÁ್ಞನಿಯ ನಿಜಾತ್ಮಬೋಧ 1 ಉಪದೇಶದಿ ಈ ಭವವನು ಕಡಿವಾ ಬಾಧೆಯ ಸುಡುವಾ ಮುಕುತಿಯ ಕೊಡುವಾ ಹೃದಯದೊಳಿರುವಾ ಆತ್ಮಸ್ವರೂಪ ಜÁ್ಞನದಿ ತಿಳುಹಿನಿ ಮೋದವ ಕೊಡುವಾ ಸ್ವಾನು ಭವಾನಂದಾನ್ವಿತರೂಪ ಸನ್ನುತ ಶಂಕರಗುರುಸ್ವರೂಪ2
--------------
ಶಂಕರಭಟ್ಟ ಅಗ್ನಿಹೋತ್ರಿ
ಎಂಬ ನಾಮವನು ಉಚ್ಚರಿಸೆ ಸಾರುವರು ಭಕುತರಾದವರು ವೈಕುಂಠವನು ಆರಾದರೇನು ಮರೆಯದೆ ಹರಿಯಧ್ಯಾನಿಸಲು ಸಿರಿಯರಸ ಕಾಯ್ದು ಕೊಂಬ ಪ ಅರಸಕೇಳೈ ಬಳೀಕ ಪಾಂಡ್ಯದೇಶದೊಳೋರ್ವ ಪತಿ ಪೆಸರು ಇಂದ್ರ ದ್ಯುಮ್ನಧರಾತ್ಮ ಹರಿ ಪರಾಯಣನೆನಿಸಿ ನಿರುತಸತ್ಯ ಸುಶೀಲ ಕರಿತುರಗದಾಸೇಯ ತೊರೆದು ವಿರತನಾಗಿಯೆ ಪುರವ ಪೊರಟು ಸುಸ್ಥಿರನಾಗಿ ಬರವಾಯ್ತ ಗಸ್ತ ಶಿಷ್ಯವೆರಸಿ 1 ಸದಮಳಾತ್ಮರನ ಚಿಂತೆಯಿಂದ ಭೂಪೇಳದಿರೆ ಮದಮುಖನ ತಪವ ನೋಡುವೆನೆನುತ ಮುನಿ ಮುನಿದು ತದುಬಿಗರ್ಜಿಸಿ ಶಾಪವೀಯಗಜವಾಗೆನುತ ಸದು ಹೃದಯನೆದ್ದು ಬಳಿಕ ಪಾದಕ್ಕೆ ವಂದಿಸಿ ಶಾಪ ವೆಂದು ಬಿಗುಗಡೆಯೆನಲು ಸಾದರದಿಂ ಮುನಿಪನೆಲ ನೆಗಳು ಪಿಡಿಯೆಗತಿನಿನ ಗೆಂದು ಹೋದ ಮುನಿಪತಿ ಇತ್ತಲು 2 ಇಂತು ಭೂಮೀಶ ಶಾಪವ ತಾಳ್ದು ಬಿಸುಸುಯ್ದು ಕಂತು ಜನಕನೆ ಬಲ್ಲನೆಂತು ಗೆಲಿದಪೆನ್‍ನುತ ದಂತಿ ಮುಖವಾಗಿ ಭೂಕಾಂತೆಯೊಳು ಜನಿಸಿ ಸುರ ಸಂತತಿಗಳಲ್ಲು ಮಾ ಇಂತೆಸೆದನು 3 ತರುನಿಕರ ಚೂತಾಮಲಕ ಸುರಹೊನ್ನೆ ಪುನ್ನಾಗ ಮೆರೆವಬಿಲ್ವಶ್ವತ್ಥಮಾ ಕಿರುಗಿಡುವಿನೊಳಗೆ ಚರಿಸುವ ಕರಡಿ ಸೀಳ್ನಾಯಿ ಭೇರುಂಡ ಮುಂತಿರುತಿರಲು ಗರುಡ ಗಂಧರ್ವ ಚಾರಣರು ಸುರಕಿನ್ನರರು ಇರುತಿಹರು ಕಿಂಪುರುಷರು 4 ತ್ರಿಜಗದೊಳಗೆಣೆ ಗಾಣೆ ಭುಜಗಶಯನನೆ ಬಲ್ಲ ಗಜರಾಜ ಬೆಳೆದು ಕುಜನರ ಮಾರ್ಗವಂ ಪಿಡಿದು ಅಜಸೃಷ್ಟಿ ಬಿರಿಯೆ ಒದರಿ ನಿಜಪುತ್ರ ಮಿತ್ರಸ್ತ್ರೀಜನ ಸಹಿತಲೊಡಗೊಂಡು ಬುಜ್ಜಸತ್ವದಿಂದ ವನವನು ಮುರಿದು ಸಂಹರಿಸಿ ಭೂಜಲವ ನರಸಿ ಬಂದ 5 ಗಂಡು ಹೆಣ್ಣಾನೆಗಳ ತಂಡ ಸಹಿತಲೆ ಬಂದು ಕಂಡು ಜಲವನು ಈಂಟಿಗುಂಡಿ ಮಡುವನುಸಾರಿ ಚಂಡಿಗೊಳಿಸುತ ಧರಣಿಯ ಅಂಡೆಲೆವ ಮದದ ಸ್ತ್ರೀಯರ ಕೂಡಿ ನೆಗಳು ಖತಿಗೊಂಡು ಮಡುವಿನೊಳಗೆಳೆಯಲು 6 ನೆಗಳು ಸುತ್ತಲಿಹ ಕರಿಘಟೆಗಳೇನಿದದ್ಬುತವೆಂದು ಮತ್ತೆ ಸತ್ವದಲೆಳೆಯೆ ತೆತ್ತಿಗನು ಬಾರದಿರೆ ತಮ್ಮಗುತ್ತಿಗುಳಿದಿಹ ಹಸ್ತಿ ಇತ್ತ ಗಜರಾಜ ಕಾದುತಿರಲು ಹಲಕಾಲ ಬತ್ತಿ ಅಸುಗುಂದಿ ಚಿತ್ತದಿ ತಿಳಿದು ಧ್ಯಾನಿಸುತ ಮತ್ತಾರು ಕಾಯ್ವರೆನುತ 7 ಇಕ್ಕರ್ತರಿಂತು ಕಾದುತ್ತಿರಲು ಕರಿವರನ ಸೊಕ್ಕು ಮುರಿದುದು ತಮವುಚೊಕ್ಕಿ ಮುಖವನು ನಭಕೆ ಸೊಕ್ಕಿದುದುನೆಗಳು ಬಳಿಕ ಮುಕ್ಕುರು ದಿವ್ಯಸಾಗರ ವರುಷ ಪರಿಯಂತ ಸಿಕ್ಕಿ ನಗಳೊಳು ಕಾದಿ ಕುಕ್ಕುರಿಸಿ ನೀರಿನೊಳು ದಿಕ್ಕನೊಡುತ್ತ ಕಕ್ಕನೆ ಕರಗಿ ಜÁ್ಞನದಲಿ ಭಕ್ತವತ್ಸಲನ ನೆನೆದ 8 ರಕ್ಷಿಸೆನ್ನನು ಬಿಡದೆ ಪಕ್ಷಿವಾಹನಗಮನ ಸೇವ್ಯ ಕುಕ್ಷಿಯೊಳಗಿಂಬಿಟ್ಟು ರಕ್ಷಿಸುವೆ ಭಜಕರನು ಮೋಕ್ಷದಾಯಕನೆ ಕಾಯೋ ಲಕ್ಷ್ಮೀಶ ಕೇಶವ ಉಪೇಕ್ಷಿಸದೆ ನೀ ಬಂದು ಭಕ್ಷಿಸುವ ನೆಗಳನೀ ಶಿಕ್ಷಿಸಲು ಬೇಕು ಅಕ್ಷಿಯನು ಇಟ್ಟುಬಂದು 9 ಸರಸಿರುಹದಳನಯನ ಮೂರ್ತಿ ಪರಿ ಹರಿಸೋ ಕ್ಷೀರಾಬ್ಧಿ ಶಯನನೆಂದು ಪರಿ ಪರಿಯ ಸ್ತುತಿಸಲಾಕ್ಷಣ ಮಹಿಮ ಧ್ವನಿಗೇಳ್ದು ನಾಗಿಕರದಿ ಚಕ್ರವ ಕೊಂಡು ಭರದಿ ಭಕುತನ ಕಂಡು ಕರಿರಾಜಗಭಯವಿತ್ತ 10 ಸಿರಿ ಮೊಗದ ನಳಿನಾಯತೇಕ್ಷಣದ ತೊಳಪ ಕದಪಿನ ಮಿಸುಪ ನವರತ್ನ ಕುಂಡಲದ ಕೌಸ್ತುಭ ಹಾರದುರಸ್ಥಳದ ಹೊಳೆವ ಮಣಿಮಕುಟ ನೇಳಿವದಂತಪಂಕ್ತಿಯ ಚಾರು ಕೋರವಿಸೆ ಕಂಡ 11 ಮೇಲೆ ಕೈವಾರಿಸುವ ಸುರರ ದುಂದುಭಿ ಮೊಳಗೆ ಹೊಳೆಯ ಎತ್ತಿದ ತೋರ ಸತ್ತಿಗೆಯ ತೋರಣದ ಸಾಲುಗಳ ಸಂದಣಿಯ ಸಂಭ್ರಮದ ಜಾಲವನು ಕಂಡುಗಜವು ಪಾಲಿಸೈ ಗೋವಿಂದನಾಥ ಬಂಧು ತ್ರಾಹಿ ಭವಾಬ್ಧಿಸಾರ ತ್ರಾಹಿ ಪಾಲಿಸೈ ತ್ರಾಹಿ ಎನುತ 12 ಗಡಗಡನೆ ನಡುಗತಿರೆ ಕಡಲಶಯನನು ಕಂಡು ಕಡುಕೃಪೆಯೊಳೈ ತಂದು ಮಡುವ ಧುಮುಕಿಯ ಗಜವ ಪಿಡಿದಾಗ ವಾಮಕರದಿಂದಳೆಯನೆಗಳು ಸಹತಡಿಗೆ ಬರಲಾಗಕಂಡು ಘುಡು ಘುಡಿಸಿ ಕೋಪದಿಂ ತುಡುಕಿ ಚಕ್ರವತೆಗೆದು ಪಿಡಿದು ನೆಗಳನು ಕಡಿಯೆ ಒಡನಾಗ ನಿಜರೂಪ ಬಿಡುಗಡೆಯಾಯಿತೆಂದು ನಡೆದು 13 ಹರಿ ಬಳಿಕ ಕರಿವರಗೆ ವಿಶ್ವರೂಪವತೋರಿ ತರಣಿಕೋಟಿ ಸಹಸ್ರತೇಜದಿಲ ರಂಜಿಸಿಯೆ ಪರಿದುಹರಿವೋಲೆಸೆದನು ಬಳಲಿದೆಯಾ ಎಂದು ಕರುಣಾಕಟಾಕ್ಷದಿಂ ಕರಿವರನ ಸಹಿತ ವಾಸ ದೆಡೆಗೆ 14 ಅವನುದಯ ಕಾಲದೊಳೆದ್ದು ಪೇಳುವನು ಆವರಿದ ಭಕ್ತಿ ಭಾವದಲಿದನು ಕೇಳುವರು ಪಾವನರು ಪುಣ್ಯಾತ್ಮರು ಕೋವಿದರು ಧರಗೆ ಗಜರಾಜೇಂದ್ರ ಮೋಕ್ಷವನು ಸಾವದಾನ ದಲಿದನು ನೇಮದಲಿ ಕೇಳ್ವವರ ನೆನೆದವರ ಕಾಯ್ವನೆಂದು 15
--------------
ಕವಿ ಪರಮದೇವದಾಸರು
ದೇವತಾಗುರುಸ್ತುತಿ ಆಶೀರ್ವದಿಸು ಗುರುರಾಜ ನಾ ಶೀರ್ಷವನೆ ಬಾಗುತ ನಮಿಸುವೆ ಜÁ್ಞನದಾತ ಕರುಣಿಸು ತಾತಾ ಆತ್ಮಾನುಭವಾ ಪಡೆವ ವರವಾ ಜÁ್ಞನನಿಧಿಯ ಬೇಡುವೆ ನಿನ್ನೋಳ್ ಮನದಿ ಜÁ್ಞನವು ಹೊಳೆಯುವತೆರನಾ ದೇವನಾನೆಂದರಿವತೆರದಿ ಜೀವಭಾವ ಮರೆವತೆರದಿ ಭಾವದಿ ನೀನೆ ನೆಲೆಸುವ ತೆರದಿ ಸಾವಿನಂಜಿಕೆ ಸರಿಯುವತೆರನಾ ಅನುಭವನಿಧಿಯೆ ಚಿನುಮಯರೂಪಾ ಮನವು ನಿನ್ನೋಳ್ ಮುಳುಗುವ ತೆರದಿ ಆ ನಾರಾಯಣ ಶಿಷ್ಯ ಶಿಖಾಮಣಿ
--------------
ಶಂಕರಭಟ್ಟ ಅಗ್ನಿಹೋತ್ರಿ
ದೇವನಾ ದರುಶನಾ ಜೀವನಾ ಪಾವನಾ ಗುರುವಿನಾ ಪ್ರವಚನಾ ಸಾವಿನಾ ನಾಶನಾ ಪ ಸ್ವಾತ್ಮದ ಜÁ್ಞನೋದಯ ಜಗದಿ ಪೂರ್ಣ ನಿರ್ಭಯ ಬ್ರಹ್ಮಪದದ ತನುಮಯ ತಾನೇ ಶುದ್ಧ ಚಿನುಮಯ 1 ಜÁ್ಞನದ ಪೂರ್ಣಾನುಭವ ನಿರ್ವಿಕಲ್ಪ ಸ್ಥಿತಿಯೆ ಶಿವಾ ದುರುಳ ಭವ ಗುರುವಿತ್ತಾತ್ಮಾನುಭವ 2 ಜೀವನ್ಮುಕುತಿ ಆನಂದ ತಿಳಿಯೆ ನೀನೆ ಮುಕುಂದ ಅರಿತು ನೋಡು ಇದನೆಂದ ಗುರುಶಂಕರನಾ ಕಂದಾ 3
--------------
ಶಂಕರಭಟ್ಟ ಅಗ್ನಿಹೋತ್ರಿ
ನಂಬಿ ಕೆಟ್ಟವರಿಲ್ಲವೊ ಸದ್ಗುರುವಿನ ನಂಬಿ ಕೆಟ್ಟವರಿಲ್ಲವೊ ನಂಬದೆ ಗುರುವಿನ ಜÁ್ಞನದ ಬೋಧವ ಹುಂಬತನವ ಮಾಡಿ ಕೆಟ್ಟರೆ ಕೆಡಲಯ್ಯ ಪ ಕೇಳಬೇಡೆಲೊ ದುಃಖವಾ ಏಳು ಎಚ್ಚರಗೊಳ್ಳು ಕೀಳುತನವ ಬಿಡು ಹೇಳಿಕೊಡುವೆನೆಂಬ ಗುರುವಿನ ನುಡಿಯನು 1 ದೇಹಬುದ್ಧಿಯ ಬಿಡಿಸಿ ವಿವೇಕದಿ ದೇವಬುದ್ದಿಯನಿರಿಸಿ ಸೋಹವೆಂಬುವ ಮಹಾಮಂತ್ರವ ಬೋಧಿಸಿ ಮೋಹವನೋಡಿಸಿ ಕಾಯುವ ಗುರುವಿನ 2 ಸಂಚಿತ ಮೊದಲಾದ ಕರ್ಮವ ನೀಗಿಸಿ ಹಂಚಿಕೆಯಿಂದಲಿ ಮುಕ್ತನ ಮಾಡುವ ಪಂಚಕಸಾಕ್ಷಿ ಶ್ರೀಗುರುವಿನ ಬೋಧವ 3 ಸ್ವಾನುಭವನೀಡುವಾ ಏನೊಂದು ಬಯಸದೆ ಜÁ್ಞನದಾನವ ಮಾಳ್ಪ ಜÁ್ಞನಿ ಶಂಕರಗುರುರಾಯನ ನುಡಿಯನು 4
--------------
ಶಂಕರಭಟ್ಟ ಅಗ್ನಿಹೋತ್ರಿ
ನಾರಾಯಣ ನಿಮ್ಮ ನಾಮ ನಾಲಿಗೆಲಿರಲಿ ನಾರಾಯಣ ಘೋರಪಾತಕವೆಲ್ಲ ಹಾರಿ ಹೋಗುವುದಯ್ಯ ನಾರಾಯಣ 1 ಸಾರ್ಯವಾಗುವುದು ಶ್ರೀಹರಿಯ ಪುರ ಅವರಿಗೆ ನಾರಾಯಣ ಮಾರಜನಕನÀ ಮೊದಲೆ ಮರೆಯದಿರೊ ಮನವೆ ನಾರಾಯಣ 2 ಎಷ್ಟೆಷ್ಟು ದುರಿತಗಳು ನಷ್ಟವಾಗಿ ಹೋಗುವುವು ನಾರಾಯಣ ಎಷ್ಟು ನಾಮವ ಬಿಡದೆ ನೆನೆಕಂಡ್ಯ ಮನವೆ ನಾರಾಯಣ 3 ಅಂತ್ಯಜಸ್ತ್ರೀ ಕೂಡಿ ಭ್ರಾಂತನಾಗ್ಯಜಮಿಳನು ನಾರಾಯಣ ಕಂತುನಯ್ಯನ ಮರೆತು ಕಾಲವನು ಕಳೆಯಲು ನಾರಾಯಣ 4 ಅಂತ್ಯಕಾಲಕೆ ಹರಿಯ ಸ್ಮರಣೆ ಜಿಹ್ವೆಗೆ ಬರಲು ನಾರಾಯಣ ಲಕ್ಷ್ಮೀ- ಕಾಂತ ಕರುಣಿಸಿ ಅವಗೆ ಕರೆದÀು ಮುಕ್ತಿಯ ಕೊಟ್ಟ ನಾರಾಯಣ5 ಲಕ್ಕುಮೀರಮಣನೆ ಸಕಲಗುಣಪರಿಪೂರ್ಣ ನಾರಾಯಣ ಮುಖ್ಯ ನೀ ಎನ ಮನದಿ ಹೊಕ್ಕರ್ಹೊಗಳುವೆನಯ್ಯ ನಾರಾಯಣ 6 ಘೋರ ವೇದವ ಕದ್ದು ನೀರೊಳಗಡಗಲು ನಾರಾಯಣ ಭೇದಿಸವನಕೊಂದು ವೇದವನು ತಂದಿಟ್ಟ ನಾರಾಯಣ 7 ಶ್ರುತಿಯ ಸುತಗೆ ಕೊಟ್ಟಿ ಸ್ತುತ್ಯನಾಗಜನಿಂದ ನಾರಾಯಣ ಮಚ್ಛರೂಪವ ಧರಿಸಿದಚ್ಯುತಗೆ ಶರಣೆಂಬೆ ನಾರಾಯಣ 8 ದೇವದೈತ್ಯರು ಕೂಡಿ ಸಾಗರವ ಕಡೆಯಲು ನಾರಾಯಣ ವಾಸುಕಿ ಸುತ್ತೆ ನಾರಾಯಣ 9 ಆಗ ಸುರರಸುರರಿಬ್ಭಾಗವಾಗಿ ನಿಂತು ನಾರಾಯಣ ಭಾಳ ತುಚ್ಛದಿ ಬಲಬಿಟ್ಟು ಬಾಯಿಂದೆಳೆಯೆ ನಾರಾಯಣ 10 ವಾಸುಕಿ ಬಿಡಲು ಅಸುರಜನ ಮಡಿದ್ಹೋಗೆ ನಾರಾಯಣ ಕುಸಿದು ಹೋಗಲು ಗಿರಿ ಕೂರ್ಮರೂಪಾದಿ ನಾರಾಯಣ11 ಅಮೃತ ದೈತ್ಯರು ಕೊಂಡೋಡಲು ನಾರಾಯಣ ಸೃಷ್ಟಿ ಆದಿಕರ್ತ ಶ್ರೀ (ಸ್ತ್ರೀ?) ರೂಪವನು ಧರಿಸಿದ ನಾರಾಯಣ 12 ಮುಂಚೆ ಮೋಹವ ಮಾಡಿ ವಂಚಿಸಿ ದೈತ್ಯರನೆ ನಾರಾಯಣ ಹಂಚಿ ಸುರರಿಗೆ ಅಮೃತಪಾನ ಮಾಡಿಸಿದಯ್ಯ ನಾರಾಯಣ 13 ದಿತಿಯ ಸುತನು ಬಂದು ಪೃಥಿವಿಯನೆ ಸುತ್ತೊಯ್ಯೆ ನಾರಾಯಣ ಅತಿಬ್ಯಾಗದಿಂದ ರಸಾತಳ ಭೇದಿಸಿ ನಾರಾಯಣ 14 ಕ್ರೂರ ಹಿರಣ್ಯಾಕ್ಷನ್ನ ಕೋರೆದಾಡೆಲಿ ಸೀಳಿ ನಾರಾಯಣ ವರಾಹ ನಾರಾಯಣ 15 ಬ್ರಹ್ಮನಿಂದ್ವರ ಪಡೆದು ಹಮ್ಮಿಂದ ಕÉೂಬ್ಬ್ಯಸುರ ನಾರಾಯಣ ದುರ್ಮತಿಯಿಂದ್ಹರಿಯ ದೂಷಿಸುತಲಿದ್ದ ನಾರಾಯಣ16 ಮತಿಹೀನ ತನ ಸುತಗೆ ಮತಿಯ ಹಿಡಿಸುವೆನೆಂದ ನಾರಾಯಣ ಪಾರ್ವತೀಪತಿ ನಾಮವನು ಹಿತದಿಂದ ಬರೆಯೆಂದ ನಾರಾಯಣ 17 ಹರಿ ಹರಿ ಹರಿಯೆಂದು ಬರೆಯಾ(ಯಲಾ?) ಬಾಲಕನೋಡಿ ನಾರಾಯಣ ಉರಿಯ ಹೊಗಿಸುವೆನೆಂದ ಉಗ್ರಕೋಪಗಳಿಂದ ನಾರಾಯಣ18 ಮೆಟ್ಟಿ ಸಾಗೀಯಿಂದೆ ಬೆಟ್ಟದಿಂದಲಿ ಕೆಡೆವೆ ನಾರಾಯಣ ಕಟ್ಟಿ ಶರಧಿಯಲ್ಲÁ್ಹಕಿ ವಿಷ್ಣುಭಕ್ತನು ಬರಲು ನಾರಾಯಣ19 ಪ್ರಹ್ಲಾದ ನಿನ್ನೊಡೆಯ ಎಲ್ಹಾನೆ ತೋರೆನಗೆ ನಾರಾಯಣ ಮಲ್ಲಮರ್ದನ ಸ್ವಾಮಿ ಇಲ್ಲದೇ ಸ್ಥಳವುಂಟೆ ನಾರಾಯಣ20 ಪೃಥ್ವಿಪರ್ವತದಲ್ಲಿ ಸಪ್ತದ್ವೀಪಗಳಲ್ಲಿ ನಾರಾಯಣ ಸುತ್ತೇಳು ಸಾಗರದಿ ವ್ಯಾಪ್ತನಾಗ್ಹರಿಯಿರುವ ನಾರಾಯಣ21 ಅಣುರೇಣು ತೃಣದಲ್ಲಿ ಇರುವ ಆಕಾಶದಲಿ ನಾರಾಯಣ ರವಿ ಸೋಮ ತಾರಾಮಂಡಲದಲ್ಲಿ ತಾನಿರುವ ನಾರಾಯಣ 22 ಹದಿನಾಲ್ಕು ಲೋಕದಲಿ ಹರಿ ವಿಶ್ವವ್ಯಾಪಕನು ನಾರಾಯಣ ಸರ್ವದಿಕ್ಕುಗಳಲ್ಲಿ ಸನ್ನಿಹಿತನಾಗಿರುವ ನಾರಾಯಣ 23 ಆರಣಿಯೊಳಗಗ್ನಿಯಂದದಿ ಜನಕೆ ತೋರದಿರೆ ನಾರಾಯಣ ಜನನ ಮರಣಿಲ್ಲ ಜಗಜನ್ಮಾದಿಕಾರಣಗೆ ನಾರಾಯಣ 24 ನೀನರಿಯೆ ನಿನ್ನಲ್ಲೆ ಜೀವರಾಶಿಗಳಲ್ಲೆ ನಾರಾಯಣ ಈ ಜಗತ್ತಿಗೊಬ್ಬ ಇದ್ದಾನೆ ಎನ್ನೊಡೆಯ ನಾರಾಯಣ25 ಮಂದಭಾಗ್ಯನೆಯೆನ್ನ ಮಾತು ನಿಜವೆಂದು ತಿಳಿ ನಾರಾಯಣ ಈ ಸ್ತಂಭದಲ್ಲಿದ್ದಾನೆ ಮಂದರೋದ್ಧರ ಸ್ವಾಮಿ ನಾರಾಯಣ26 ಬಂದು ಭರದಿಂದಸುರ ಕಂಬ ಕಾಲಿಂದೊದೆಯೆ ನಾರಾಯಣ ತುಂಬಿತಾ ಘನಘೋಷದಿಂದ ಘುಡಿಘುಡಿಸುತಲಿ ನಾರಾಯಣ27 ಸಿಡಿಲು ಗರ್ಜಿಸಿದಂತೆ ಖಡಿ ಖಡಿ ಕೋಪದಲಿ ನಾರಾಯಣ ಕಿಡಿಗಳ್ಹಾರುತ ಕಂಬವೊಡೆದು ರೋಷದಿ ಬಂದ ನಾರಾಯಣ 28 ಖಳನ ಸೆಳೆದಪ್ಪಳಿಸಿ ದುರುಳನುದರವ ಬಗೆದÀು ನಾರಾಯಣ ಕರುಳ ವನಮಾಲೆ ತನ ಕೊರಳಲ್ಲಿ ಧರಿಸಿದ ನಾರಾಯಣ29 ತಲ್ಲಣಿಸಿ ಸುರರಾಗ ಮಲ್ಲಿಗೆಮಳೆ ಕರೆಯೆ ನಾರಾಯಣ ಪ್ರಹ್ಲಾದಸಹಿತ ಶ್ರೀದೇವಿ ಮುಂದಕೆ ಬರಲು ನಾರಾಯಣ30 ಕರದಿ ಕಂಗಳ ಮುಚ್ಚಿ ಸಿರಿಯ ತೋಳಿಂದಪ್ಪಿ ನಾರಾಯಣ ತೊಡೆಯನÉೀರಿಸಿ ತನ್ನ ತರುಣಿಗಭಯವನಿಟ್ಟ ನಾರಾಯಣ 31 ಸ್ತೋತ್ರವನು ಮಾಡಲಜ ಬಿಟ್ಟುಗ್ರಕÉೂೀಪವನು ನಾರಾಯಣ ಕೊಟ್ಟ ಪ್ರಹ್ಲಾದ(ಗ್ವ)ರಗಳ ಲಕ್ಷ್ಮೀನರಸಿಂಹ ನಾರಾಯಣ32 ಅಜÁ್ಞನದಿಂದ ತಾ ಯಜ್ಞ ಮಾಡುತಲಿರಲು ನಾರಾಯಣ33 ಅದಿತಿಯಲ್ಲವತರಿಸೆ ಅತಿಬ್ಯಾಗ ಕಶ್ಯಪರು ನಾರಾಯಣ ಸುತಗೆ ಉಪನಯನ ಭಾಳ್ಹಿತದಿಂದ ಮಾಡಲು ನಾರಾಯಣ 34 ಯಜÉೂೀಪವೀತ ಕೈಪು ಕೃಷ್ಣಾಂಜಿನ ಧರಿಸಿ ನಾರಾಯಣ ಶೀಘ್ರದಿಂದ ವಟು ವಾಮನ್ಯಜಶಾಲೆಗೆ ಬರಲು ನಾರಾಯಣ35 ಬಲಿಯ ಯಜ್ಞದಿ ಬಂದು ಭಾಳ ಪೂಜಿತನಾಗಿ ನಾರಾಯಣ ಛಲವಿಟ್ಟು ಮನದೊಳಗೆ ಬಲಿಯ ಯಾಚನೆ ಮಾಡೆ ನಾರಾಯಣ 36 ನಾ ಕೊಡುವೆ ಬೇಡು ಬೇಕಾದಷ್ಟು ಅರ್ಥವನು ನಾರಾಯಣ ಸಾಕಾಗದೇನಯ್ಯ ಸಲ್ಲ ಧನದಾಸ್ಯೆನಗೆ ನಾರಾಯಣ 37 ದೃಢಮನಸಿನಲಿ ಭೂಮಿ ಕೊಡು ಮೂರು ಪಾದವನು ನಾರಾಯಣ ಕೊಡುವೆನೆಂದಾಕ್ಷಣದಿ ಎರಡು ಚರಣವ ತೊಳೆದ ನಾರಾಯಣ38 ಒಂದು ಪಾದದಲಿ ಭೂಮಂಡಲವ ವ್ಯಾಪಿಸಿ ನಾರಾಯಣ ಪಾದ ನಾರಾಯಣ 39 ಕಂಡು ಕಮಲಜನು ಕಮಂಡಲೋದಕ(ದಿ) ತೊಳೆಯ ನಾರಾಯಣ ಉಂಗುಷ್ಠ ನಖದಿ ಉತ್ಪನ್ನಳಾದಳು ಗಂಗೆ ನಾರಾಯಣ40 ರಕ್ಕಸಾಂತಕನು ತ್ರಿವಿಕ್ರಮ ರೂಪಾಗಿ ನಾರಾಯಣ ಆಕ್ರಮಿಸಿಕೊಂಡ ಹದಿನಾಲ್ಕು ಲೋಕವ ಸ್ವಾಮಿ ನಾರಾಯಣ41 ಕೊಟ್ಟ ವಚನವ ತಪ್ಪಿ ಭ್ರಷ್ಟÀನಾಗದೆ ಭೂಮಿ ನಾರಾಯಣ ಕೊಟ್ಟರಿನ್ನೀಪಾದಯಿಟ್ಟು ಬಿಡುವೇನೆಂದ ನಾರಾಯಣ 42 ಕಟ್ಟಿ ಪಾಶದಲಿ ಕಂಗೆಟ್ಟಾಗ ಬಲಿರಾಯ ನಾರಾಯಣ ಕೆಟ್ಟೆನೆನ್ನದಲೆ ಮನಮುಟ್ಟಿ ಸ್ತೋತ್ರವ ಮಾಡೆ ನಾರಾಯಣ43 ದುಷ್ಟಜನ ಮರ್ದಕನು ಸೃಷ್ಟಿಸ್ಥಿತಿಲಯ ಕರ್ತೃ ನಾರಾಯಣ ಸೃಷ್ಟಿಗೊಡೆಯಗೆ ದಾನಕೊಟ್ಟರೆಂಬುವರುಂಟೆ ನಾರಾಯಣ 44 ಬಂಧನ ಬಿಡಿಸಿ ಬಲಿರಾಯಗ್ವರಗ¼
--------------
ಹರಪನಹಳ್ಳಿಭೀಮವ್ವ
ಬೋಧಾ ಜÁ್ಞನದಾ ಬೋಧ ಮೋದಾ ಶಾಂತಿಯಾ ಸ್ವಾದಾ ಪ ಸ್ವರೂಪದಾ ಸುಖಸ್ಪದಾ ಪ್ರಶಾಂತ ಗುರುಬೋಧಾ ಬೋಧ ಅ.ಪ. ಸುಲಭಸಾಧ್ಯ ಸುವಿಚಾರಾ ವೇದಾಂತಶಾಸ್ತ್ರದ ಸಾರಾ ತಾನೇ ಪರಮಾತ್ಮನು ಎನುವಾ ಸ್ವಾನುಭವಾಮೃತಜಲಧಾರಾ ಘೋರಾ ಸಂಸ್ಕøತಿಯ ಪಾರಾ 1 ಜೀವಭಾವವ ಮರೆಯಿಸುತಿರುವಾ ಸಾವ ನೀಗುವಾ ಮಂತ್ರವಾ ಸಾರಿ ಪೇಳ್ವ ಶಂಕರಾರ್ಯ ಮೋದಾ ಶಾಂತಿಯಾ ಸ್ವಾದಾ 2
--------------
ಶಂಕರಭಟ್ಟ ಅಗ್ನಿಹೋತ್ರಿ
ಭವಾಬ್ಧಿ ದಾಂಟಿಸಿದಿ ಸದ್ಗುರುನಾಥಾ ನೀನೇ ಸ್ವರೂಪಾವಬೋಧ ನೀಡಿದಿ ತಾತಾ ಜÁ್ಞನಾಸಿಯಿಂದ ಕಡಿದೈ ಸಂಸಾರಪಾಶವ ನಾನಾತ್ಮವಳಿದು ಕಳೆದೈ ಅಜÁ್ಞನದೋಷವಾ ನಾನೆನ್ನ ರೂಪ ತಿಳಿದೆ ಪ್ರಭೋ ಶ್ರೀಗುರುದೇವಾ ನಾನೇಂ ಪೇಳ್ವೆ ನಿನ್ನ ದಿವ್ಯ ಬೋಧಪ್ರಭಾವಾ ಈ ವಿಶ್ವವೆಲ್ಲ ಕನಸಿನಂತೆ ಎನಗೆ ತೊರ್ಪುದೈ ಆವಾಗ ಬೋಧವಾಯ್ತು ನಾನರಿತೆ ಸತ್ಯವಾ
--------------
ಶಂಕರಭಟ್ಟ ಅಗ್ನಿಹೋತ್ರಿ
ವಂದೇ ವಂದೇ ವಂದೇ ನಾರಾಯಣ ಗುರುದೇವಾ ವಂದೇ ವಂದೇ ವಂದೇ ಪರಿಪೂರ್ಣ ಬ್ರಹ್ಮರೂಪ ಪರಮಾತ್ಮ ಜÁ್ಞನದೀಪ ತಾಪ ಪರಿಹರಿಪ ಜÁ್ಞನಿ ಭೂಪ ಶಿರವಿಡುವೆ ಚರಣಯುಗದೀ ಗುರುದೇವ ಎನ್ನಮನದಿ ಪರತತ್ವ ತಿಳಿವ ತೆರದಿ ಕರುಣಿಪುದು ನೀನೇ ಮುದದಿ ಜÁಗರಣ ಕನಸು ನಿದ್ರಾ ಆಗುಗಳನರಿಯುತಿರ್ದಾ ಈ ಗತಿಗಳೆಲ್ಲ ಮೀರ್ದಾ ಆ ಘನವೆ ನಿರ್ವಿಕಲ್ಪ ಅದೇ ನೀನು ಎಂದು ಪೇಳ್ದೀ ಇದು ಎಲ್ಲ ಮಿಥ್ಯವೆಂದಿ ಇದೊ ಮರಣಭಯವ ಕಳೆದಿ ನಿಜಬೋಧವಚನ ಬಲದಿ ಮರೆದಿರ್ದ ತತ್ವವಿದನು ಪರತತ್ವ ಶೋಧಕರನು ಬೊಧಿಸುತ ನೀ ನಿಜವನು ತೋರಿಸುತ ಕಾಯುವವನು ವರಜÁ್ಞನ ಜಗದಲೆಲ್ಲಾ ಮರೆದಾಡಿ ತಮವನೆಲ್ಲಾ ಪರಿಹರಿಸಲೆಂದು ನೀನೇ ಗುರುಶಂಕರನಿಗೆ ಪೇಳ್ದೀ ವಂದೇ ಶಂಕರಾ ಗುರುದೇವಾ ವಂದೇ ಶಂಕರ ಗುರುದೇವಾ ಪಾವನಚರಣಾ ತೋರೈ ಕರುಣಾ ಜÁ್ಞನಾಂಬುಧಿ ಪೂರ್ಣಾ ವಂದೇ
--------------
ಶಂಕರಭಟ್ಟ ಅಗ್ನಿಹೋತ್ರಿ
ಶ್ರೀ ಗುರುವೇ ಮಹಾಮಹಿಮಾ ಪೂರ್ಣಾತ್ಮಸುಖಧಾಮಾ ಬಾಗಿ ನಮಿಪೆ ಪ್ರಶಾಂತಕಾಮಾ ಬೇಗ ನೀ ಬೋಧಿಸೈ ಅನುಭಾವಪೂರ್ಣ ಜÁ್ಞನದಾ ದಾರಿಯಾ ತೋರು ನೀ ದಯೆದೋರು ಜÁ್ಞನ ನಿಧಿಯೇ ವಂದಿಪೆ ಬೋಧಿಸೈ ಸಂಸಾರ ಘೋರವಾರಿಧಿ ದಾಂಟಿಪಾ ಧೀರ ನೀ ನಿಜರೂಪನಿಷ್ಠ ವಿಭುವೇ ವಂದಿಪೆ ಬೋಧಿಸೈ ಗುರುಸಾರ್ವಭೌಮ ನಿನ್ನ ಈ ಪಾದವಾ ನಂಬಿದೆ
--------------
ಶಂಕರಭಟ್ಟ ಅಗ್ನಿಹೋತ್ರಿ
ಶ್ರೀ ಗ್ರಂಥಮಾಲಿಕ ಮಧ್ವಸ್ತೋತ್ರ ಜಯ ಮಧ್ವ ಮುನಿರಾಯ ನಿನ್ನ ಚಾರು ತೋಯಜಾಂಘ್ರಿಯಲಿ ನಾ ಶರಣು ಅಹ ಮಾಯೇಶನಿಗೆ ಪ್ರಿಯ ಮುಖ್ಯಪ್ರಾಣನೇ ಎನ್ನ ಕರ್ಮ ದೋಷ ಮನ್ನಿಸಿ ಕಾಯೋ ಪ ಭಾವಿ ವಿರಂಚಿ ಮಹೋಜ ಜಯಾ - ದೇವಿ ಸಂಕರ್ಷಣ ತನೂಜ ಸೂತ್ರ ಸಂವಿದ್ ಬಲಾದಿ ಸುಭ್ರಾಜ ಶ್ರಧ್ಧಾ - ದೇವಿ ಹೃದಬ್ಜವಿರಾಜ ಅಹ ಇನಶಶಿ ಋಷಿಕುಲ ತಿಲಕ ಶ್ರೀವರನಂಘ್ರಿ ವನರುಹ ನಿಷ್ಠ ಹನುಮಭೀಮ ಮಧ್ವ 1 ಜಯತು ಶ್ರೀಹರಿ ರಾಮಚಂದ್ರ ಭಕ್ತ ಜಯದ ಮೋದದ ಅರ್ತಿಹಂತ ಕೃಷ್ಣ ಜಯತು ಕಾರುಣ್ಯ ಸಮುದ್ರ ಭಕ್ತ ಜಯದ ಕ್ಷೇಮದ e್ಞÁನ ಸುಖದ ಅಹ ರಾಮವಚನ ಕಾರ್ಯರತ ಹನುಮಗೆ ನಮೋ ನಮೋ ಕುರುಕುಲ ಹರ ಭೀಮ ಕೃಷ್ಣೇಷ್ಟಗೆ 2 ಜಯತು ಶ್ರೀಹರಿ ವೇದವ್ಯಾಸ ಭಕ್ತ ಜಯದ ಹೃತ್ತಿಮಿರ ನಿರಾಸ ಮಾಳ್ಪ ಸೂರ್ಯ ಸ್ವಕಾಂತಿ ಪ್ರಕಾಶ ಮಧ್ವ - ರಾಯಗೆ ನಿಜಗುರು ಶ್ರೀಶ ಅಹ ವೈದಿಕಶಾಸ್ತ್ರದಿಂದಲೇ ವೇದ್ಯ ಶ್ರೀಶನ ಹಿತದಿ ನಮಗೆ ತೋರ್ಪಾನಂದ ಮುನಿಗೆ ನಮೋ 3 ಅಸುರರು ಪುಟ್ಟಿ ಭೂಮಿಯಲಿ ಸಾಧು ಭೂಸುರರೆಂದು ತೋರುತಲಿ ವೇದ ಶಾಸ್ತ್ರಕ್ಕೆ ಅಪಾರ್ಥ ಪೇಳಿ ಮೋಹ ವಶವಾಗೆ ಸುಜನರಲ್ಲಿ ಅಹ ಶ್ರೀಶನಾಜೆÉ್ಞ ಯತಾಳಿ ಮಧ್ವಾಭಿದಾನದಿ ಮೋಸ ದುರ್ಮತ ಧ್ವಾಂತ ಭಾಸ್ಕರನುದಿಸಿದಿ 4 ಮಧ್ಯಗೇಹರ ಮನೆಯಲ್ಲಿ ಮುಖ್ಯ ವಾಯುವೇ ಶಿಶುರೂಪ ತಾಳಿ ಬಲ ಸಂನ್ಯಾಸ ಸುಪ್ರಮೋದದಲಿ ಅಹ ಮಧ್ಯಗೇಹರ ಪುರುಷೋತ್ತಮತೀರ್ಥರ ಭಾಗ್ಯಕ್ಕೆ ಎಣೆವುಂಟೇ ಮೂರ್ಲೋಕದೊಳಗೆ 5 ಪುರುಷೋತ್ತಮಾಚ್ಚ್ಯುತಪ್ರೇಕ್ಷ ತೀರ್ಥ ಗುರುಗಳ ಸೇವಿಸಿ ಮೋಕ್ಷ ಮೋದ ಉರುಗುಣಸಿಂಧು ನಿರ್ದೋಷನಾದ ಶಿರಿವರನು ಕಮಲಾಕ್ಷ ಅಹ ಭಾರಿ ಪ್ರಸಾದವ ದಯದಿ ಬೀರಲ್ಲೇವೆ ದೊರೆಯುವದೆಂದು ಬೋಧಿಸಿದೆಯೋ ಮಧ್ವ 6 ಶ್ರೀಶ ವೇದವ್ಯಾಸನಲ್ಲಿ ಗೀತಾ ಭಾಷ್ಯ ಸಮರ್ಪಿಸಿ ಅಲ್ಯಿಲ್ಲಿ ಉಪ - ದೇಶಕೊಂಡು ಮತ್ತಿಲ್ಲಿ ಬಂದು ವ್ಯಾಸನಭಿಪ್ರಾಯದಲ್ಲಿ ಅಹ ಸರಿಯಾದ ತತ್ವಬೋಧಕ ಗ್ರಂಥಗಳ ಮಾಡಿ ಬೀರಿದ ಅಧಿಕಾರಿಗಳಿಗೆ ನೀ ದಯದಿ ಮೂಲಗ್ರಂಥಗಳು ಮೂವತ್ತು ಏಳು 7 ಳಾಳುಕ ಪ್ರಿಯತಮವಾದ್ದು ಭಕ್ತಿ ಪರ - ಕೈವಲ್ಯ ತೋರುವುದು ಅಹ ಪುನರಪಿ ಬದರಿಗೆ ಪೋಗಿ ಶ್ರೀಶನ ಕಂಡು ಧನ್ಯ ಮನದಿ ಬಂದು ಶಾಸ್ತ್ರ ಬೋಧಿಸಿದಿ 8 ಸೂತ್ರ ಭಾಷ್ಯಗೀತಾ ತಾತ್ಪರ್ಯ ಸೂತ್ರಾಣುಭಾಷ್ಯ ವಿಷ್ಣು ತತ್ವನಿರ್ಣಯಾ ಋಗ್ಭಾಷ್ಯ ತತ್ವೋ - ಭಾಗವತ ತಾತ್ಪರ್ಯ ಅಹ ನಿರ್ಣಯ ಶ್ರೀಮಹಾಭಾರತ ತಾತ್ಪರ್ಯ ಕರ್ಮ ನಿರ್ಣಯ 9 ಸನ್ನ್ಯಾಯ ವಿವರಣ ತಂತ್ರಸಾರ ಅನುವ್ಯಾಖ್ಯಾನವು ಸದಾಚಾರ ಸ್ಮøತಿ ಅನುತ್ತಮ ದ್ವಾದಶಸ್ತೋತ್ರ ಯತಿ ಪ್ರಣವ ಕಲ್ಪದಿ ಪ್ರಣವಸಾರ ಅಹ ಉಪನಿಷದ್ಭ್ಬಾಷ್ಯವು ಹತ್ತು ಉತ್ಕøಷ್ಟವು ಷಟ್ಟ್ರಶ್ನಕಾಠಕ ಬೃºದಾರಣ್ಯಾಖ್ಯ 10 ಮನನ ಮಾಡಲು ಐತರೇಯ ಪುನಃ ಶ್ರವಣ ಮಾಡಲು ತೈತಿರೀಯ ಸಂ - ಚಿಂತಿಸಲು ಈಶಾವಾಸ್ಯ ಬಹು ಘನವಿದ್ಯಾಯುತವು ಛಾಂದೋಗ್ಯ ಅಹ ಅರ್ಥವಣಮಾಂಡೂಕ್ಯ ತಲವ ಕಾರೋಕ್ತವು ಸತತ ಸಂಸ್ಮರಣೀಯ ಜÁ್ಞನದಾಯಕವು11 ಕೃಷ್ಣಾಮೃತ ಮಹಾರ್ಣದಿ ಬಾಲ ಕೃಷ್ಣ ಜಯಂತಿ ನಿರ್ಣಯದಿ ಭಕ್ತಿ e್ಞÁನ ಸಾಧನವ ಬೋಧಿಸಿ ನರ - ಸಿಂಹನ ನಖಸ್ತುತಿ ಮುದದಿ ಅಹ ಪಠಿಸೆ ಭದ್ರದ ಕಥಾಲಕ್ಷಣದಲಿ ವಾದ ಮಾಡುವ ಬಗೆ ತೋರ್ದಿಯೈನೃಹರಿಯ ನಮಿಸಿ 12 ಅವಿದ್ಯಾ ಆವೃತವು ಬ್ರಹ್ಮ ಅದ್ಯಸ್ಥ ಜಗತೆಂಬ ಮತವ ತರಿದು ಮಾಯಾವಾದ ಖಂಡನವ ಮಾಡಿ ನ್ಯಾಯ ಪ್ರಮಾಣ ಲಕ್ಷಣವ ಅಹ ನುಡಿದು ಪ್ರಪಂಚ ಮಿಥ್ಯಾತ್ವಾನುಮಾನ ಖಂ - ಡನವ ಉಪಾಧಿಖಂಡನ ಸಹಗೈದಿ 13 ಪಂಚಭೇದ ಸತ್ಯ ಹರಿಯೇ ಸರ್ವೋತ್ತಮ ಸುಹೃದ ಶಿರಿ ವರನೇ ಸ್ವತಂತ್ರ ಪ್ರಮೋದ ಸ್ವಾಮಿ ಸೃಷ್ಟಾ ಪಾತಾ ಅತ್ತಾತ್ರಾಹ ಅಹ ತತ್ವ ವಿವೇಕವು ತತ್ವ ಸಂಖ್ಯಾನವು ನಿತ್ಯ ಸುಪಠನೀಯ ಹರಿ ಸರ್ವೋತ್ಕøಷ್ಟ 14 ನೀನಿಂತು ನುಡಿಸಿದೀ ನುಡಿಯು ನಿನ್ನ ಸನ್ನಿಧಾನದಿ ಸಮರ್ಪಣೆಯು ನಾನು ಏನೂ ಓದದ ಮಂದಮತಿಯು ನೀನು ಪೂರ್ಣಪ್ರಜ್ಞನು ಜೀವೋತ್ತಮನು ಅಹ ಎನ್ನ ಕೊರತೆಗಳ ನೀಗಿಸಿ ಹೃಸ್ಥಶ್ರೀ 'ಪ್ರಸನ್ನ ಶ್ರೀನಿವಾಸ' ನ್ನೊ ಲಿಸೋ ಎನಗೆ ಜೀಯ 15
--------------
ಪ್ರಸನ್ನ ಶ್ರೀನಿವಾಸದಾಸರು