ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಂದಿಪೆ ನಾ ಭಗವಾನ್ ಪೂರ್ಣಘನಾ ನೀ ಮುಕುತಿನಿದಾನಾ ಜÁ್ಞನಘನಾ ಆನಂದಘನಾ ನಿತ್ಯಾನಂದನು ನೀ ಚೈತನ್ಯ ಮೂಲಪದ ಮಾಯಾರಹಿತ ಸದಾ ಆ ನಿರ್ವಿಕಲ್ಪಾತ್ಮಾ ಸತ್ಯನು ನೀ ಹೇ ಸರ್ವಾಂತರ್ಯಾಮೀ ಪ್ರೇಮಘನಾ ಆನಂದ ಕಣ್ಣು ಮನಗಳಿಗೆ ನಿಲುಕದಲೇ ನೀ ಸಾಕ್ಷಿಸ್ವರೂಪಾ ಇವುಗಳಿಗೇ ಕಲ್ಪಿತವ್ಯೆ ಮಾಯಾಮೋಹಿತವೈ ಈ ಜಗವೆಲ್ಲಾ ನಿನ್ನೊಳ್ ಸತ್ಯಘನಾ ಆನಂದ ಎಂತು ಬಣ್ಣಿಸಲೈ ನಿನ್ನನು ನಾ ಈ ವಾಣಿಯಿಂ ದೂರಾ ನಿಜಸಾರಾ ಯೋಗಿವರಾ ಗುರು ಶ್ರೀ ಶಂಕರಾ ಹೇ ಸರ್ವಾತ್ಮಪೂರ್ಣಾನಂದಘನಾ ಆನಂದ
--------------
ಶಂಕರಭಟ್ಟ ಅಗ್ನಿಹೋತ್ರಿ