ಒಟ್ಟು 144 ಕಡೆಗಳಲ್ಲಿ , 9 ದಾಸರು , 96 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜೈ ಭೀಮ ಜರೆಸುತನ್ವೈರಿ ಜೈ ಭೀಮ ಜಯ ಜಯ ಜಯ ಮುಖ್ಯಪ್ರಾಣ ಸೋಮ ಕುಲದೊಳುದ್ಭವಿಸಿ ಗೀರ್ವಾಣ ಬಲು ಬಲುಮೆಯಿಂದಲಿ ದುರ್ವಾದಿಗಳನ್ನೆ ಮೂತಿಂದ್ವೊತ್ತಿ ಸಲಹೆನ್ನ ಶ್ರೀಮ- ದಾನಂದತೀರ್ಥಮುನಿ ಪ ರೋಮ ರೋಮಕೆ ಕೋಟಿಲಿಂಗ ಜಗತ್ಪ್ರಾಣಿಗಳಿಗೆ ಅಂತರಂಗ ಲಂಕೆನಾಳ್ವೋ ಭೂಪತಿಗತಿ ಭಂಗಬಡಿಸಿ ಕ್ಷೋಣಿಸುತೆಗೆ ಉಂಗುರಿಟ್ಟು ರಾಮರಲ್ಲೆ ಪ್ರೇಮ- ವಾರ್ತೆಯ ತಂದ ಪ್ರಾ- ಣೇಶ ದಯವಾಗೊ 1 ಮಧುವೈರಿ ಮಾತುಳನಾಗೆ ಬಂದು ಮಗಧ ಮುತ್ತಿಗೆ ಹಾಕೆ ಬ್ಯಾಗ ವೃಕೋದರ ಛಲವ್ಹಿಡಿದು ತಾ ಹೋಗೆ ಅಲ್ಲೆ ದ್ವಿಜನ್ವೇಷಧರಿಸ್ವಾಸುದೇವ ವಾಸವಿ ಕೂಡಿ ಮಗಧರಾಜನ ಮ- ರ್ಮಗಳಿಂದ ಸೀಳಿದ್ಯೊ 2 ಹಾಟಕಾಂಬರನಲ್ಲಿ ಭಕ್ತರೆಂದು ಅರಿಯದೆ ಅಂತಕನ ಪುತ್ರ(ನ) ಜೂಜಿನಾಟ(ದಿ) ಸೋಲಿಸಿ ಸೆಳೆಯೆ ವಸ್ತ್ರ ಕೃಷ್ಣೆ ನೋಟದಿ ಭಸ್ಮ ವಿಚಿತ್ರ ಸವ್ಯಸಾಚಿ ಸಹಿತವಾಗ್ವಿರಾಟ- ವರ್ಗದಿ ಸತಿಗೆ ಕಾಟ ಕಳೆದ್ಯಮ- ಪುರಿಗೆ ದಾಟಿಸ್ದ್ಯೋ ಕೀಚಕನ 3 ಕಳೆದÀು ಅಲ್ಲಜÁ್ಞತವಾಸ ಬಂದು ಖಳರೊಳಗಧಿಕ ದುಶ್ಶಾಸ(ನ) ಅವನ ಕರುಳ ಬಗೆಯಲತಿ ರೋಷ ಕಾಲಕ್ಕೊದಗಲು ನರಹರಿ ಆ- ವೇಶ ಕಂಡು ಸುರರಸುರರ ಸೈನ್ಯ ಜರಿದು ಹಿಂದಕೆ ನಿಲ್ಲೆ ರಣಧೀರ- ಗೆಣೆಯಿಲ್ಲ ಪರಮ ಪರಾಕ್ರಮ 4 ಸಕಲ ಜೀವರಿಗಾಧಾರಕನೊ ಭಾರತಿ ಪ್ರಾರಂಭಕ್ವೊಂದಿತನೊ ಮಧ್ವಮತ ಶಾಸ್ತ್ರಗಳ ಉದ್ಧಾರಕÀನೊ ತ್ರಿಗುಣ ಜೀವನು ಸಾರಪ್ರೇರಕನು ವಾಯು ಸಕಲ ಸುರರೊಡೆಯ ಭೀಮೇಶ ಕೃಷ್ಣನಲ್ಲಿ ಭಕುತಿ ಜÁ್ಞನವ ದಿವ್ಯ ಮುಕುತಿ ಮಾರ್ಗವ ತೋರಿದಿ 5
--------------
ಹರಪನಹಳ್ಳಿಭೀಮವ್ವ
ಅಜÁ್ಞನಿ ಜೀವನಿಗೆ ಅಭಿಮಾನ ಬಹಳ ಸುಜÁ್ಞನಿಯಾ ನುಡಿಯ ಲಕ್ಷಿಸನು ಕೇಳಾ ಪ ಬುದ್ಧಿ ಮನದೇಹಗಳು ತಾನೆಂದು ತಿಳಿಯುತಲಿ ಇದ್ದುದನು ಮರೆತು ತಾ ಜಾಣನೆನಿಸುವನು ಒದ್ದಾಡುತಿದ್ದರೂ ಅಭಿಮಾನವನೆ ಹÉೂತ್ತು ಗುದ್ದಾಡುತಲಿ ತಾನು ಸುಖವ ಹುಡುಕುವನು 1 ಸಟಿಯಾದ ಸಂಸಾರ ದಿಟವೆಂದು ನಂಬುತಲಿ ಸೆಟೆದಾಡುತಿರುವೆಯೋ ತಿಳಿದು ನೋಡಾ ಹಟವ ಹಿಡಿಯಲು ಬೇಡ ತೋರ್ಪುದೇ ದಿಟವೆಂದು ನಟನೆಯಾ ಮಾತಲ್ಲವೆನೆ ಕೇಳನವನು 2 ಅರಿ ನೀನು ನಿನ್ನ ಅರಿವಿನಾ ಹೊರತು ನೀ ಸುಖ ಪೊಂದಲಾರೆ ಆರು ಸುಖಪಡೆದಿಲ್ಲ ಅಜÁ್ಞನದಿಂದೆನಲು ಇರಲಿ ಹೋಗೆಂದೆನುತ ಮೋರೆ ಹೊರಳಿಸುವಾ 3 ಬಾಳುವೆಯು ನಿಜವೆಂದು ನಂಬಲಿವನಾ ಗೋಳು ಗಾಳಿಯನೆ ಗುದ್ದಿ ಮೈ ನೊಯ್ಸಿಕೊಂಡಂತೆ ಕೇಳು ಚಿತ್ರದೊಳಿರುವ ಬೆಂಕಿ ತಾ ದಿಟವೆಂದು ಮೇಲೆ ನೀರೆರೆದಂತೆ ಎನೆ ಕೇಳನವನು 4 ಗೊಡ್ಡು ಮಾತೆಂದು ತಾ ಜÁ್ಞನಕೆರವಾಗುತಲಿ ದಡ್ಡತನವನೆ ತೋರಿ ದುಃಖಿಯಾಗುವನು ಶುದ್ಧಜÁ್ಞನವನಂಬಿ ತನ್ನ ತಾ ತಿಳಿಯದಲೆಬುದ್ಧ ಶಂಕರನುಕ್ತಿಗೆರವಾಗುತಿಹನು 5
--------------
ಶಂಕರಭಟ್ಟ ಅಗ್ನಿಹೋತ್ರಿ
ಅಂತರಂಗದ ಸುಖ ಹೇಳುವುದಲ್ಲಾ ಸಂತೋಷವೆಂಬುದು ಶಿವನೊಬ್ಬ ಬಲ್ಲ ಪ ಗುರುಕೊಟ್ಟ ಮಂತ್ರದ ಪರರ್ಯಾರು ಅರಿಯದಂದದಲಿ ಈ ಪ್ರಾಣ ಪರಮನೊಳಾಡುವುದು ಆತನ ದಿವ್ಯ ಚರಣನೋಡುವುದು ಆಂತರ್ಯದ ಸ್ವಾನುಭವ ಅರಿಯದ ಜನರಿಗೆ 1 ಧ್ಯಾನಿಸಿ ನೋಡಲು ದೃಢವಿಡಿದಾಡಲು ಜÁ್ಞನ ದೀಪದ ಜ್ಯೋತಿ ಗಗನ ವೇರಿದ ಪ್ರತಿ ಭಾನುವುದಿಸಿದಂದದಿ ಪ್ರಕಾಶಮಾನ ಸದಾನಂದದಿ ಅಂತರ್ಯದ ಸ್ವಾನುಭವ ಅರಿಯದ ಜನರಿಗೆ 2 ಮೂರ್ತಿ ಪರಮನಾಗಿಹ ಅರ್ಥಿ ಎರಕವಾಗಿಹ ಲಕ್ಷಾ ಎಣಿಕೆ ಇಲ್ಲದ ಮೋಕ್ಷಾ ಶರಧಿಯೊಳಾಡುವುದು ಶಕ್ತಿಯ ಮರ್ಮ ವರಕೃಪಮಾಡುವುದು ವಿಮಲಾನಂದ ಗುರುಕಟಾಕ್ಷದ ಬಗೆ ಅರಿಯದ ಜನರಿಗೆ 3
--------------
ಭಟಕಳ ಅಪ್ಪಯ್ಯ
ಆನಂದಮಯನಾದೆ ನಾನು ದಿವ್ಯ ಜÁ್ಞನಾಮೃತವನುಂಡು ಪೇಳಲಿನ್ನೇನು ಪ ಶರೀರ ಭ್ರಾಂತಿಗಳನೆಲ್ಲ ಕಳೆದು ಕರ್ಮ ದುರಿತ ಸಂಸಾರ ಆಶಾಪಾಶವಳಿದು ನರನೊಳಗೆ ನರನಾಗಿ ಸುಳಿದು ಸರ್ವ ಪರಿಪೂರ್ಣ ಭರಿತ ತಾನೆಂಬುದು ತಿಳಿದು 1 ಗುರುಕಟಾಕ್ಷದ ನೆಲೆ ನೋಡಿ ತಿರುಗಿ ಬರುವ ಹೋಗುವ ಭ್ರಮೆಗಳನೀಡಾಡಿ ಶರಣರ ಸ್ತೋಮದಿ ಕೂಡಿ ಭವ ಶರಧಿಯ ದಾಟಿ ಹಂಸಾತ್ಮಕನೊಳಾಡಿ ಆನಂದ 2 ಗುರುಚರಣಗಳ ಧ್ಯಾನಿಸುತಾ ಒಡನೆ ಎರಕವಾದಂತೆ ಬೇರೂರಿತು ಚಿತ್ತಾ ವರವಿಮಲಾನಂದ ಗುರುದತ್ತಾತ್ತೇಯನ ಕರುಣಾಸಮುದ್ರದೊಳ್ಬೆರೆದು ನಲಿವುತ್ತಾ ಆನಂದ 3
--------------
ಭಟಕಳ ಅಪ್ಪಯ್ಯ
ಆರ್ತಭಾವ ಸುಳಾದಿ ಧ್ರುವತಾಳ ವೊಂದು ತೋರೆನಗರವಿಂದನಯನ ಮಂದಾಕಿನಿಯ ಪಡೆದ ಮುದ್ದು ಚರಣ ಸುಂದರಾಂಗ ತೋರೆನಗೆ ಸುರೇಂದ್ರನಾಥ ಕಂದರ್ಪಪಿತನ ಕಾಲಂದಿಗೆ ರುಳಿ ಗೆಜ್ಜೆ ಚೆಂದುಳ್ಳ ಪದ್ಮರೇಖೆಯಿಂದೊಪ್ಪುವೊ ಇಂದಿರೆ ಕರಕಮಲದಿಂದ ಪೂಜಿತನಾದ ಚಂದ್ರವದನ ನಿನ್ನ ಚೆಲುವ ಪಾದ ಇಂದ್ರಾದಿ ಹರ ನಾರಂದ ಸುರಬ್ರಹ್ಮಾದಿ ವಂದ್ಯ ನಿನಗೆ ಕೋಟಿ ನಮೋ ನಮೋ ಎಂದು ಬೇಡುವೆ ದಯಾಸಿಂಧು ಎನಿಸಿದಾತ ಕಂದನಂದದಿ ನೋಡಿ ಸಲಹೋ ಎನ್ನ ಮಂದಬುದ್ಧಿಯ ಮಹಾಮದಡ ಪಾಮರ ಭವ ಬಂಧನದೊಳು ಸಿಲುಕಿ ನೊಂದೆನಯ್ಯ ಸಂದೇಹ ಮಾಡದೆ ಸಲಹದಿದ್ದರೆ ನಿನ್ನ ಹೊಂದಿ ಬಾಳುವುದೆಂತೊ ಮುಂದರಿಯೆ ಬಿಂದು ಮಾತ್ರದಿ ನಾಮಾಮೃತವ ಭೀಮೇಶಕೃಷ್ಣ ತಂದು ನೀಡೆನಿಗೆ ಇಂದೀವರಾಕ್ಷ 1 ಮಠ್ಯತಾಳ ಯುಗಳ ಪಾದಕೆ ಕೈಯ ಮುಗಿದು ಬೇಡುವೆನಯ್ಯ ಜಗದುದರನೆ ನಿನ್ನ ಜಾಣತನವ ಬಿಟ್ಟು ಅಗಣಿತಗುಣಮಹಿಮ ಅಂತರಾತ್ಮಕ ದೇವ ಬಗೆಬಗೆಯಲಿ ಸಲಹೋ ಭಕ್ತವತ್ಸಲ ನಿನ್ನ ಮಗುವೆಂದೆನ್ನ ಕಾಯೊ ಮಂದರೋದ್ಧರ ದೇವ ನಿಗಮಗೋಚರ ಸ್ವಾಮಿ ನಿಂತು ನೋಡುತ ಎನ್ನ ಚಿಗುರುದೋಷದಕುಡಿಯ ಚಿವುಟಿ ಹಾಕುತ ನಿನ್ನ ಸುಗುಣಗಳನೆ ಬಿಟ್ಟೆನ್ನವಗುಣವೆಣಿಸಿದರೆ ಇಗೋ ನಿನಗಪಕೀರ್ತಿ ಈಗ ಒಪ್ಪಿಸುವೆನು ಬಿಗಿದ ಭವಪಾಶ ಬಿಚ್ಚಿ ಭೀಮೇಶಕೃಷ್ಣ ತೆಗೆಯದೆ ನಿನ್ಹೊರತೀ ಜಗದೊಳಗುಂಟೇನಯ್ಯ 2 ವಚನ ಸಕಲ ಸ್ನಾನವು ನೇಮ ಹೋಮ ಜಪಂಗಳು ಸಕಲ ಪುಣ್ಯಕ್ಷೇತ್ರ ಮೂರ್ತಿನಾಮಂಗಳು ಸಕಲ ಪುರಾಣ ವೇದಾದಿಗ್ರಂಥಗಳು ಸಕಲ ಕಾರ್ಯವು ಸರ್ವೇಷ್ಟ ಫಲಂಗಳು ಸಾಯುಜ್ಯ ಪದವಿಗಳು ಲಕುಮೀಶ ಇವು ನಿನ್ನ ನಖಶಿಖ ಪರಿಯಂತ್ರ ಸಾರಥಿ ಸಮದೃಷ್ಟಿಲಿ ನೋಡಲು ಸಕಲಸಿದ್ಧ್ದಿಯು ಸರಿಯಾಗಿ ಕೈಗೂಡೋದು ಶಕಟಸುರಾಂತಕ ಕಕುಲಾತಿ ಮಾಡದೆ ಬಕನ್ವೈರಿಯೆನ್ನ ಭಾರವ ನೀ ವಹಿಸಲಿ ಬೇಕೊ ಇಕೋ ನಿನ್ನ ಚರಣಕ್ಕೆ ಈ ದೇಹ ಅರ್ಪಿಸುವೆ ಗೋಕುಲಾವಾಸ ನಿನ್ನ ಪಾದಕೆ ನಮಸ್ಕರಿಸುವೆ ಮುಕುತಿದಾಯಕ ಮುದ್ದು ಭೀಮೇಶಕೃಷ್ಣನೆ ಭಕುತಿಜÁ್ಞನದಲಿಡೊ ಭಯಹಾರಿ ಎನ್ನ 3 ಗೋಪಸುತನೆ ನಿನ್ನ ಗುರುವಿನ್ವಲ್ಲಭೆ ಮಹ ದಪರಾಧವೆಣಿಸದೆ ನೀ ಕರುಣದಲೆ ಸಾಂ- ದೀಪಗೆ ಸುತರನಿಟ್ಟ ಪಯಾಂಬುಧಿವಾಸ ಕೋಪದಿ ಬಯ್ದ್ದಾ ಶಿಶುಪಾಲಗೊಲಿದೆಯೊ ಶ್ರೀಪತಿ ಶರಣೆಂದಾ ದ್ರೌಪದಿ ಕಾಯ್ದಂತೆ ಕಾಪಾಡೊ ಈ ಭವಕೂಪದೊಳಗೆ ಬಿದ್ದೆ ನೀ ಪಿಡಿಕೈಯ ದಯಾಪರಮೂರುತಿ ಆಪತ್ತು ಬಾಂಧವ ಈ ದೇಹವೃಕ್ಷದಲಿ ದ್ವಾ- ಸೂಪರಣನಂತೆ ದೂರೇನೋ ಎನ್ನ ಸ- ಮೀಪದಲ್ಲಿದ್ದು ಸ್ವರೂಪ ತೋರದಲೆ ಸಂ- ತಾಪ ಬಡಿಸದಿರೆಂದಾಪನಿತು ಪೇಳ್ವೆ ಭೂಪಾಲ ಭೀಮೇಶಕೃಷ್ಣ ನಿನ್ನ ಪಾದ ನಾ ಪೊಂದಿದೆನೊ ದೊರೆ ನೀ ಪೊರೆಯೆಂದು 4 ಜತೆ ಏಸೇಸು ಕಾಲಕೆ ಬ್ಯಾಸರದೆ ಭೀಮೇಶಕೃಷ್ಣ ಲೇಸು ನೀಡೆನಗೆ ಸದಾ ಸುಮಂಗಳವ 5
--------------
ಹರಪನಹಳ್ಳಿಭೀಮವ್ವ
ಆಲಿಸು ಮನುಜಾ ಮಾಯಾಕಾರ್ಯಕೆ ಮೋಸಹೋಗಲು ಬೇಡಾ ವಿಚಾರಿಸು ತೋರಿಕೆಯು ಪುಸಿಯಹುದು ಈ ಪ ಜಗದೊಳು ತೋರುವ ಅಘಟಿತಘಟನೆ ಮಿಗಿಲೆನಿಸುತಲಿಹುದೋ ಗಡಾ ಅಘಟಿತಘಟನೆಯೆ ಜÁ್ಞನವದೆಂದು ಬಗೆಯುತ ನೀ ಕೆಡಬೇಡ 1 ಸಿದ್ಧಿಯ ಫಲವದು ಅಘಟಿತಘಟನೆ ಬುದ್ಧಿವಂತನೆ ತಿಳಿ ನೀ ಶುದ್ಧ ಚೈತನ್ಯದಿ ಮಾಯೆಯದಿಲ್ಲೈ ಸಿಧ್ದಿ ಮಾಯೆಯ ಮಗಳು 2 ಜÁ್ಞನಸಿದ್ಧಿಗಳ ಭೇದವನರಿಯುತ ಜÁ್ಞನಿಯಾಗೆಲೊ ಮನುಜಾ ನಾನಾಪರಿಯಿಂ ಪೇಳಿದನಿದನಾ ಜÁ್ಞನಿ ಶಂಕರಗುರುರಾಯಾ 3
--------------
ಶಂಕರಭಟ್ಟ ಅಗ್ನಿಹೋತ್ರಿ
ಇದÉೀ ಸೌಖ್ಯ ತಾಣ ತಿಳೀ ನೀನೆ ಜಾಣಾ ಪ ಶರೀರಾದಿ ಸಂಘಾತವೆಲ್ಲ ವಿಕಾರಿ ಬರೀ ತೋರಿಕೆ ಸ್ವಪ್ನವೇ ಕೇಳ್ ವಿಚಾರಿ ಅರೀ ನೀ ಸ್ವರೂಪಾ ಶರೀರಾದಿ ಭಿನ್ನ 1 ಸದಾ ನಿರ್ವಿಕಾರ ಪರಾನಂದಸಾರ ಜಾಗರ ಸ್ವಪ್ನ ನಿದ್ರಾದಿ ದೂರ ಅದೇ ನೀ ಇದೇ ಕೇಳ್ ಸ್ವರೂಪಾತ್ಮಜÁ್ಞನ 2 ತಿಳೀ ನಿನ್ನ ನೀ ಈ ವಿಚಾರಾಕ್ಷಿಯಿಂದೆ ಇದೇ ಮೋಕ್ಷವೆಂದ ಸ್ವರೂಪಾನಂದ ಇದೇ ಶಂಕರಾರ್ಯಾ ನಿಜಾನಂದವೆಂದ 3
--------------
ಶಂಕರಭಟ್ಟ ಅಗ್ನಿಹೋತ್ರಿ
ಇದೇ ನೋಡು ನಿನ್ನ ನಿಜವಾದ ಸ್ವರೂಪ ಜೀವ ಇದೇ ಸಕಲ ಜಗದ ಕಾರಣಾ ಬ್ರಹ್ಮ ಪೂರಣ ಪ ಅನಿಸುವಿಕೆಯು ಇಲ್ಲದಿರುವಾ ತೋರಿಕಿಲ್ಲದಾ ಬರಿ ಇರವಿದೇ ಮನಸಿಲ್ಲದೆ ಬೆಳಗುತಿರುವ ನಿದ್ರೆಹೊದ್ದದಾ ಬರಿ ಅರಿವಿದೆ ಘನ ನಿರಾಕಾರವೇ 1 ವಿಷಯಜನಿತ ದುಃಖಸುಖದ ಸುಳಿವು ತೋರದ ಘನಾನಂದವೇ ಶೇಷ ಮಾತ್ರನಾಗಿ ಸದಾ ಶಾಂತಿರೂಪದ ನಿರ್ವಿಕಾರ ನೀ ಹಸನಾಗಿ ತಿಳಿದುಕೊಳ್ಳು ಬೋಧವಾ ನೀನದೆ ಎಂಬುದ ಈ ಸತ್ಯಸ್ವರೂಪವೇ 2 ಸ್ವರೂಪಾತ್ಮ ಮಾತ್ರ ಪರಮಸತ್ಯನಾಗಿಹ ನಿತ್ಯನಾಗಿಹ ಬರೀ ತೋರಿ ಅಡಗುತಿರುವ ಜಗವು ಭ್ರಾಮಕಾ ಮಿಥ್ಯಾಭಾಸಕ ಗುರುವರ್ಯ ಶಂಕರಾತ್ಮಬೋಧನಾವೇದಾಂತಸಾರವಾ ಪರಮಾತ್ಮ ಜÁ್ಞನವಾ 3
--------------
ಶಂಕರಭಟ್ಟ ಅಗ್ನಿಹೋತ್ರಿ
ಇದೇ ಪರಮಾರ್ಥ ಪ್ರಾಪ್ತಿಗೆ ಸೋಪಾನ ತಿಳಿ ಇದರಲ್ಲಿ ಬೇಡಿನ್ನು ಅನುಮಾನ ಇದೇ ಬಕುತಿಮಾರ್ಗವೇ ಸುಲಭ ಸೋಪಾನ ತಿಳಿ ವೈರಾಗ್ಯಜÁ್ಞನಾದಿಗಳ ತಾಣಾ ಪ ಸಂಸಾರದೊಳಗಿರ್ದ ಜೀವಂಗೆ ಸುಖದುಃಖದಿ ಬಳಲುವ ಮನುಜಂಗೆ ಕಂಸಾರಿ ಶ್ರೀ ಕೃಷ್ಣನಾಮವೊಂದೇ ಪಾಪ ಸಂಹಾರಿ ಪರಶಿವನಾಮವೊಂದೇ ಈ ಸಂಸಾರ ದಾಂಟುವಾ ನಿಜತಾಣಾ1 ನಿಷ್ಕಾಮ ಮನದಿಂದ ಭಜಿಸಲ್ಕೆ ಬಹು ದುಷ್ಕರ್ಮ ಫಲವೆಲ್ಲ ತೊಲಗಲ್ಕೆ ಶ್ರೇಷ್ಠ ವೈರಾಗ್ಯವು ನೆಲೆಸಲ್ಕೆ ಬಲು ಜಿಜÁ್ಞಸೆ ಮನದಲ್ಲಿ ಜನಿಸಲ್ಕೆ ಈ ಪರಮಾತ್ಮಧ್ಯಾನ ಮಹಾಸಾಧನಾ 2 ಆತ್ಮಜÁ್ಞನದ ಬೋಧನೆಗೊಂಡು ಪರಮಾತ್ಮನ ರೂಪವೆ ತಾನೆಂದೂ ಬರಿ ತೋರ್ಕೆ ಜಗವೆಲ್ಲ ಪುಸಿ ಎಂದೂ ಪರಮಾತ್ಮನೆ ನಿತ್ಯನು ನಿಜವೆಂದೂ ಪರಜÁ್ಞನವ ನೀಡಲ್ಕೆ ಈ ಸಾಧನ 3 ಪರಮಾರ್ಥನುಭವಿಗಳ ಸಂಗ ನೆರೆದೊರಕುತಲಿರುತಿರೆ ಭವಭಂಗ ವರ ಭಕ್ತಿ ಮಾರ್ಗದಿ ದೊರಕುವದೆಂದ ಇದೆ ಪರಮಾರ್ಥ ಪ್ರಾಪ್ತಿಗೆ ಮೂಲವೆಂದ ಇದೆ ಗುರುಶಂಕರಾನಂದಕೃಪೆಯಿಂದ 4
--------------
ಶಂಕರಭಟ್ಟ ಅಗ್ನಿಹೋತ್ರಿ
ಇದೇ ಪೂರ್ಣಪದಾ ತಿಳಿ ಜೀವಾ ಆತ್ಮಸ್ವರೂಪಾ ನೋಡು ನೀ ಈ ಜಗಕೆಲ್ಲ ಆಧಾರಾ ಪರಮಪದವದೇ ನೊಡು ನೀ ಪ ತೋರುವೀ ಜೀವರಾಧಾರ ತೋರದಾ ಪೂರ್ಣಾಜÁ್ಞನರೂಪ ಅದೇ ಕಲ್ಪನೆರಹಿತ ಅದ್ವೈತ ಪರಮಪದವದೇ ನೋಡು ನೀ 1 ಮನವಾಣಿಗೆ ಸಿಗದ ಆ ಸ್ಥಿತಿ ಪೂರ್ಣಾ ಪರಮಾತ್ಮನೈ ಅದೇ ನೀನಿಹೆ ಜೀವಾ ತಿಳಿಯಿದನಾ ಗುರು ಶಂಕರನಾ ಬೋಧನಾ 2
--------------
ಶಂಕರಭಟ್ಟ ಅಗ್ನಿಹೋತ್ರಿ
ಇದ್ದರೆ ಹೀಗೆ ಇರಬೇಕು ಇಲ್ಲದಿದ್ದರೆ ಕಾಯವ ಬಿಡಬೇಕು ಶುದ್ಧ ಚಿತ್ತವಾಗಿ ಹೃದಯದೊಳಿದ್ದ ವಸ್ತುವನ್ನು ನಿನ್ನ ಬುದ್ಧಿಯಿಂದ ನೀನೆ ತಿಳಿಯುತ್ತಿದ್ದು ಜೀವನ್ಮುಕ್ತನಾಗಿ ಪ ಕಲ್ಲು ಮರಳು ಕಾಷ್ಠತರುಗಳಲ್ಲಿ ಗಿರಿಗಳಲ್ಲಿ ಚರಿಸುವ ಹುಲ್ಲೆ ಕರಡಿ ವ್ಯಾಘ್ರ ಸಿಂಹದಲ್ಲಿ ಪಕ್ಷಿ ನಾನಾಮೃಗ ಗಳಲ್ಲಿ ವಸ್ತುವೊಬ್ಬನಲ್ಲದಿಲ್ಲವೆಂದು ಭಾವಿಸುತ್ತ 1 ದ್ರಷ್ಟವಾಗಿ ತೋರ್ಪುದೆಲ್ಲ ನಷ್ಟವಾಗಿ ಪೋಪುದೆಂದು ದಿಟ್ಟನಾಗಿ ತಿಳಿದುಜÁ್ಞನ ದೃಷ್ಟಿಯಿಂದಲೆ ದುಷ್ಟಜನರ ಸಂಗವನ್ನು ಬಿಟ್ಟು ಅರಿಗಳರುವರನ್ನು ಕುಟ್ಟಿ ಕೆಡಹಿ ಆಶಪಾಶವೆಂಬ ಹಗ್ಗವನ್ನು ಹರಿದು 2 ಗೇರು ಹಣ್ಣಿನ ಬೀಜ ಹೊರಸಾರಿ ಇರ್ದವೊಲು ಸಂ ಸಾರವೆಂಬ ವಾರಿಧಿಯೊಳು ಕಾಲಗಳೆಯುತ ನೀರ ಮೇಲಕಿದ್ದ ನಳಿನದಂತೆ ಹೊರಗೆ ಬಿದ್ದು ಬಕನ ಚಾರು ಚರಣ ಸ್ಮರಣೆಯಿಂದ 3
--------------
ಕವಿ ಪರಮದೇವದಾಸರು
ಈ ದೇಹಾಭಿಮಾನವÉೀ ಸಂಸಾರಮೂಲವಯ್ಯ ಕೇಳೀಗಲೇ ಜÁ್ಞನದಿಂದಾ ನೀ ದೂಡನಿನ್ನಭಿಮಾನ ವಿಷಯಾಭಿಲÁಷಾ ಮನದಲ್ಲಿ ಮೂಡಿ ಜೀವಂಗೆ ಗುಣದಲ್ಲಿ ಅನುರಾಗ ಕೂಡಿ ಇದೇ ಭೋಗನೇ ಮುಂದೆ ಸುಖದುಃಖವಾಗಿ ಜನುಮಕ್ಕೆ ಮೂಲಾದಿದೇ ವಾಸನಾಳಿ ಇದೇ ವಾಸನಾಳಿ ಇದೇ ಬಾಳುವೆ ಇದೇ ಬಾಳುನೆ ಇದೇ ಬಾಳು ದೇಹಾಭಿಮಾನಾಸ್ಪದಾ ಮೂಲ ಕೇಳಿಗಲೇ ಜÁ್ಞನದಿಂದ 1 ಮನದೇಹಗಳು ನಿನ್ನ ನಿಜರೂಪವಲ್ಲ ಇವುತೋರಿ ಬಯಲಾಗುತಿಹವಾಗಿವೆಲ್ಲ ನಿಜರೂಪವಲ್ಲ ಇದರಾಚೆಗಿಹ ಶುದ್ಧ ಚೈತನ್ಯ ನಾನೇ ಅದೇನಾನಿಹೆ ಅದೇ ನಾನಿಹೆ ಅದೇ ಸತ್ಯನೆಂದಾಗ ಹರಿವುದು ದೇಹಾಭಿಮಾನ ನೋಡುನೀ ಜÁ್ಞನದಿಂದ 2 ಈ ರೀತಿ ಸುವಿಚಾರವನು ಮಾಡಿಕÉೂಂಡು ನಿಜನನ್ನು ಕಂಡು ಸ್ವರೂಪಾತ್ಮನೋಳು ನಾನು ನೆಲೆ ನಿಂತು ಕೊಂಡು ಇದೆಲ್ಲ ಈ ಸಂಸಾರ ಕನಸೆಂದು ಕಂಡು ಪರಮಾತ್ಮನನೆ ವೃತ್ತಿಯೊಳು ತುಂಬಿಕೊಡು ಆನಂದ ಉಂಡು ಬಿಡೋ ಚಿಂತೆಯ ಬಿಡೋ ಚಿಂತೆಯಾ ಬಿಡೋ ಬಾಳ ಚಿಂತೆಯಾ ಶ್ರೀ ಶಂಕರಾಚಾರ್ಯರಿ ಬÉೂೀಧದ ಜÁ್ಞನದಿಂದ 3
--------------
ಶಂಕರಭಟ್ಟ ಅಗ್ನಿಹೋತ್ರಿ
ಈ ವಿಬುಧರ ಸಂಗವೆ ಮಹಾಪ್ರಮೋದ ದುರ್ಲಭ ಜÁ್ಞನಿಯ ನಿಜಾತ್ಮಬೋಧ ಭಾಗ್ಯವಿದೇ ಬಹುಜನ್ಮದ ಪುಣ್ಯ ಯೋಗ್ಯರಬೋಧಾ ದೊರಕುವುದಣ್ಣ ಬೋಗ್ಯದಿ ಲಂಪಟನಾದವಗಿನ ಅಗ್ಗದಿ ಸಿಗುವದೆ ಸಜ್ಜನರನ್ನಾ ಸ್ವರ್ಗದಿ ಸಿಗದಿಹ ಸಂತರ ಬೋಧ ದುರ್ಲಭ ಜÁ್ಞನಿಯ ನಿಜಾತ್ಮಬೋಧ 1 ಉಪದೇಶದಿ ಈ ಭವವನು ಕಡಿವಾ ಬಾಧೆಯ ಸುಡುವಾ ಮುಕುತಿಯ ಕೊಡುವಾ ಹೃದಯದೊಳಿರುವಾ ಆತ್ಮಸ್ವರೂಪ ಜÁ್ಞನದಿ ತಿಳುಹಿನಿ ಮೋದವ ಕೊಡುವಾ ಸ್ವಾನು ಭವಾನಂದಾನ್ವಿತರೂಪ ಸನ್ನುತ ಶಂಕರಗುರುಸ್ವರೂಪ2
--------------
ಶಂಕರಭಟ್ಟ ಅಗ್ನಿಹೋತ್ರಿ
ಎನ್ನ ಮೋಹನ ತುಪಾಕಿಯನು ಪಿಡಿದು ಹಸ್ತದಲಿ ಚೆನ್ನಾಗಿ ಶೃಂಗರಿಸುವೆ ಪ ಭಿನ್ನಭಾವನೆಯ ಕಳಿದುಳಿದು ಕೋವಿಗೆ ಮತ್ತೆ ಇನ್ನು ಜೋಡಿಲ್ಲವೆಂದು ಇಂದುಅ.ಪ. ಪ್ರೇಮರಸವೆಂಬ ಜಲದಲಿ ತೊಳೆದು ಶುಚಿಮಾಡಿ ನೇಮವೆಂದೆಂಬ ನಿರ್ಮಲವಾಗಿಹ ಆಮಹಾಕನಕ ರಜತದ ಭೂಷಣವ ತೊಡಿಸಿ ಕಾಮವನು ಸುಟ್ಟು ಮಸಿಮಾಡಿ ತುಂಬುವೆನದಕೆ ಎನ್ನೆ 1 ಹಮ್ಮಮತೆಯೆಂಬ ಗುಂಡನು ಅದರಮೇಲಿರಿಸಿ ಒಮ್ಮನಸು ಎಂಬ ಗಜದಿಂದ ಜಡಿದು ಒಮ್ಮೆ ಗುರುವಾಕ್ಯರಂಜಿಕೆಯ ಕಿವಿಯೊಳಗರದು ಬಿಮ್ಮನೇ ಬಿಗಿದು ಈಕ್ಷಿಸಿ ನೋಡುವೆ ಎನ್ನ 2 ಮೆರೆವ ಸುಜÁ್ಞನ ಜ್ಯೋತಿಯ ಬತ್ತಿಯನು ಕೊಳಿಸಿ ಭರದಿ ಬರುತಿಹ ಅಷ್ಟಮದ ಕರಿಗಳಾ ತರಿದಾರು ವೈರಿವರ್ಗಕೆ ಕೆಡಹಿ ಗುರಿಯಿಂದ ಗುರುವಿಮಲಾನಂದ ರಸಭರಿತನಾಗಿರುವಂಥ 3
--------------
ಭಟಕಳ ಅಪ್ಪಯ್ಯ
ಎಂಬ ನಾಮವನು ಉಚ್ಚರಿಸೆ ಸಾರುವರು ಭಕುತರಾದವರು ವೈಕುಂಠವನು ಆರಾದರೇನು ಮರೆಯದೆ ಹರಿಯಧ್ಯಾನಿಸಲು ಸಿರಿಯರಸ ಕಾಯ್ದು ಕೊಂಬ ಪ ಅರಸಕೇಳೈ ಬಳೀಕ ಪಾಂಡ್ಯದೇಶದೊಳೋರ್ವ ಪತಿ ಪೆಸರು ಇಂದ್ರ ದ್ಯುಮ್ನಧರಾತ್ಮ ಹರಿ ಪರಾಯಣನೆನಿಸಿ ನಿರುತಸತ್ಯ ಸುಶೀಲ ಕರಿತುರಗದಾಸೇಯ ತೊರೆದು ವಿರತನಾಗಿಯೆ ಪುರವ ಪೊರಟು ಸುಸ್ಥಿರನಾಗಿ ಬರವಾಯ್ತ ಗಸ್ತ ಶಿಷ್ಯವೆರಸಿ 1 ಸದಮಳಾತ್ಮರನ ಚಿಂತೆಯಿಂದ ಭೂಪೇಳದಿರೆ ಮದಮುಖನ ತಪವ ನೋಡುವೆನೆನುತ ಮುನಿ ಮುನಿದು ತದುಬಿಗರ್ಜಿಸಿ ಶಾಪವೀಯಗಜವಾಗೆನುತ ಸದು ಹೃದಯನೆದ್ದು ಬಳಿಕ ಪಾದಕ್ಕೆ ವಂದಿಸಿ ಶಾಪ ವೆಂದು ಬಿಗುಗಡೆಯೆನಲು ಸಾದರದಿಂ ಮುನಿಪನೆಲ ನೆಗಳು ಪಿಡಿಯೆಗತಿನಿನ ಗೆಂದು ಹೋದ ಮುನಿಪತಿ ಇತ್ತಲು 2 ಇಂತು ಭೂಮೀಶ ಶಾಪವ ತಾಳ್ದು ಬಿಸುಸುಯ್ದು ಕಂತು ಜನಕನೆ ಬಲ್ಲನೆಂತು ಗೆಲಿದಪೆನ್‍ನುತ ದಂತಿ ಮುಖವಾಗಿ ಭೂಕಾಂತೆಯೊಳು ಜನಿಸಿ ಸುರ ಸಂತತಿಗಳಲ್ಲು ಮಾ ಇಂತೆಸೆದನು 3 ತರುನಿಕರ ಚೂತಾಮಲಕ ಸುರಹೊನ್ನೆ ಪುನ್ನಾಗ ಮೆರೆವಬಿಲ್ವಶ್ವತ್ಥಮಾ ಕಿರುಗಿಡುವಿನೊಳಗೆ ಚರಿಸುವ ಕರಡಿ ಸೀಳ್ನಾಯಿ ಭೇರುಂಡ ಮುಂತಿರುತಿರಲು ಗರುಡ ಗಂಧರ್ವ ಚಾರಣರು ಸುರಕಿನ್ನರರು ಇರುತಿಹರು ಕಿಂಪುರುಷರು 4 ತ್ರಿಜಗದೊಳಗೆಣೆ ಗಾಣೆ ಭುಜಗಶಯನನೆ ಬಲ್ಲ ಗಜರಾಜ ಬೆಳೆದು ಕುಜನರ ಮಾರ್ಗವಂ ಪಿಡಿದು ಅಜಸೃಷ್ಟಿ ಬಿರಿಯೆ ಒದರಿ ನಿಜಪುತ್ರ ಮಿತ್ರಸ್ತ್ರೀಜನ ಸಹಿತಲೊಡಗೊಂಡು ಬುಜ್ಜಸತ್ವದಿಂದ ವನವನು ಮುರಿದು ಸಂಹರಿಸಿ ಭೂಜಲವ ನರಸಿ ಬಂದ 5 ಗಂಡು ಹೆಣ್ಣಾನೆಗಳ ತಂಡ ಸಹಿತಲೆ ಬಂದು ಕಂಡು ಜಲವನು ಈಂಟಿಗುಂಡಿ ಮಡುವನುಸಾರಿ ಚಂಡಿಗೊಳಿಸುತ ಧರಣಿಯ ಅಂಡೆಲೆವ ಮದದ ಸ್ತ್ರೀಯರ ಕೂಡಿ ನೆಗಳು ಖತಿಗೊಂಡು ಮಡುವಿನೊಳಗೆಳೆಯಲು 6 ನೆಗಳು ಸುತ್ತಲಿಹ ಕರಿಘಟೆಗಳೇನಿದದ್ಬುತವೆಂದು ಮತ್ತೆ ಸತ್ವದಲೆಳೆಯೆ ತೆತ್ತಿಗನು ಬಾರದಿರೆ ತಮ್ಮಗುತ್ತಿಗುಳಿದಿಹ ಹಸ್ತಿ ಇತ್ತ ಗಜರಾಜ ಕಾದುತಿರಲು ಹಲಕಾಲ ಬತ್ತಿ ಅಸುಗುಂದಿ ಚಿತ್ತದಿ ತಿಳಿದು ಧ್ಯಾನಿಸುತ ಮತ್ತಾರು ಕಾಯ್ವರೆನುತ 7 ಇಕ್ಕರ್ತರಿಂತು ಕಾದುತ್ತಿರಲು ಕರಿವರನ ಸೊಕ್ಕು ಮುರಿದುದು ತಮವುಚೊಕ್ಕಿ ಮುಖವನು ನಭಕೆ ಸೊಕ್ಕಿದುದುನೆಗಳು ಬಳಿಕ ಮುಕ್ಕುರು ದಿವ್ಯಸಾಗರ ವರುಷ ಪರಿಯಂತ ಸಿಕ್ಕಿ ನಗಳೊಳು ಕಾದಿ ಕುಕ್ಕುರಿಸಿ ನೀರಿನೊಳು ದಿಕ್ಕನೊಡುತ್ತ ಕಕ್ಕನೆ ಕರಗಿ ಜÁ್ಞನದಲಿ ಭಕ್ತವತ್ಸಲನ ನೆನೆದ 8 ರಕ್ಷಿಸೆನ್ನನು ಬಿಡದೆ ಪಕ್ಷಿವಾಹನಗಮನ ಸೇವ್ಯ ಕುಕ್ಷಿಯೊಳಗಿಂಬಿಟ್ಟು ರಕ್ಷಿಸುವೆ ಭಜಕರನು ಮೋಕ್ಷದಾಯಕನೆ ಕಾಯೋ ಲಕ್ಷ್ಮೀಶ ಕೇಶವ ಉಪೇಕ್ಷಿಸದೆ ನೀ ಬಂದು ಭಕ್ಷಿಸುವ ನೆಗಳನೀ ಶಿಕ್ಷಿಸಲು ಬೇಕು ಅಕ್ಷಿಯನು ಇಟ್ಟುಬಂದು 9 ಸರಸಿರುಹದಳನಯನ ಮೂರ್ತಿ ಪರಿ ಹರಿಸೋ ಕ್ಷೀರಾಬ್ಧಿ ಶಯನನೆಂದು ಪರಿ ಪರಿಯ ಸ್ತುತಿಸಲಾಕ್ಷಣ ಮಹಿಮ ಧ್ವನಿಗೇಳ್ದು ನಾಗಿಕರದಿ ಚಕ್ರವ ಕೊಂಡು ಭರದಿ ಭಕುತನ ಕಂಡು ಕರಿರಾಜಗಭಯವಿತ್ತ 10 ಸಿರಿ ಮೊಗದ ನಳಿನಾಯತೇಕ್ಷಣದ ತೊಳಪ ಕದಪಿನ ಮಿಸುಪ ನವರತ್ನ ಕುಂಡಲದ ಕೌಸ್ತುಭ ಹಾರದುರಸ್ಥಳದ ಹೊಳೆವ ಮಣಿಮಕುಟ ನೇಳಿವದಂತಪಂಕ್ತಿಯ ಚಾರು ಕೋರವಿಸೆ ಕಂಡ 11 ಮೇಲೆ ಕೈವಾರಿಸುವ ಸುರರ ದುಂದುಭಿ ಮೊಳಗೆ ಹೊಳೆಯ ಎತ್ತಿದ ತೋರ ಸತ್ತಿಗೆಯ ತೋರಣದ ಸಾಲುಗಳ ಸಂದಣಿಯ ಸಂಭ್ರಮದ ಜಾಲವನು ಕಂಡುಗಜವು ಪಾಲಿಸೈ ಗೋವಿಂದನಾಥ ಬಂಧು ತ್ರಾಹಿ ಭವಾಬ್ಧಿಸಾರ ತ್ರಾಹಿ ಪಾಲಿಸೈ ತ್ರಾಹಿ ಎನುತ 12 ಗಡಗಡನೆ ನಡುಗತಿರೆ ಕಡಲಶಯನನು ಕಂಡು ಕಡುಕೃಪೆಯೊಳೈ ತಂದು ಮಡುವ ಧುಮುಕಿಯ ಗಜವ ಪಿಡಿದಾಗ ವಾಮಕರದಿಂದಳೆಯನೆಗಳು ಸಹತಡಿಗೆ ಬರಲಾಗಕಂಡು ಘುಡು ಘುಡಿಸಿ ಕೋಪದಿಂ ತುಡುಕಿ ಚಕ್ರವತೆಗೆದು ಪಿಡಿದು ನೆಗಳನು ಕಡಿಯೆ ಒಡನಾಗ ನಿಜರೂಪ ಬಿಡುಗಡೆಯಾಯಿತೆಂದು ನಡೆದು 13 ಹರಿ ಬಳಿಕ ಕರಿವರಗೆ ವಿಶ್ವರೂಪವತೋರಿ ತರಣಿಕೋಟಿ ಸಹಸ್ರತೇಜದಿಲ ರಂಜಿಸಿಯೆ ಪರಿದುಹರಿವೋಲೆಸೆದನು ಬಳಲಿದೆಯಾ ಎಂದು ಕರುಣಾಕಟಾಕ್ಷದಿಂ ಕರಿವರನ ಸಹಿತ ವಾಸ ದೆಡೆಗೆ 14 ಅವನುದಯ ಕಾಲದೊಳೆದ್ದು ಪೇಳುವನು ಆವರಿದ ಭಕ್ತಿ ಭಾವದಲಿದನು ಕೇಳುವರು ಪಾವನರು ಪುಣ್ಯಾತ್ಮರು ಕೋವಿದರು ಧರಗೆ ಗಜರಾಜೇಂದ್ರ ಮೋಕ್ಷವನು ಸಾವದಾನ ದಲಿದನು ನೇಮದಲಿ ಕೇಳ್ವವರ ನೆನೆದವರ ಕಾಯ್ವನೆಂದು 15
--------------
ಕವಿ ಪರಮದೇವದಾಸರು