ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆನಂದ ಆನಂದ ಪ್ರದವೋದಾಶರಧಿ ಧ್ಯಾನಾ ಪ ಭಕ್ತಿಯುಕ್ತನಾಗಿ ಮನದಿ ನಿತ್ಯಪಾಡೋ ರಾಮಚರಣ ಅ.ಪ ಕಾಲನಪುರ ಭಯವಿಲ್ಲವೋ | ವಾಲ್ಮೀಕಿಯು ಸಾಕ್ಷಿ ಇದಕೆ ಮೇಲುನಭದಿ ಮೆರೆವಾ ನೋಡೋ 1 ಶ್ರೀರಾಮನಾಮದಿಂದ ಮಾರುತಿಯು ಬ್ರಹ್ಮನೆ ನಿಪ ಮಾರಹರನು ತನ್ನ ಸತಿಯಾ ಸೇರಿ ಸತತ ಭಜಿಪ ಕೇಳೋ 2 ಹಿಂದೆ ಮಾಡಿದ ನಿನ್ನ ದುರಿತವೃಂದವೆಲ್ಲ | ಛೇದಿಸುವದು ಒಂದೆ ಭಾವದಿಂದ ಶಾಮಸುಂದರನ ನಾಮ ಪಾಡೋ 3
--------------
ಶಾಮಸುಂದರ ವಿಠಲ
ಸತ್ಸಂಗದಿಹುದು ನೇಮ ಧ್ರುವ ಸಾಧು ಸಮಾಗಮ ಸಮಾಗಮ ಛೇದಿಸುವದು ಭವಭ್ರಮ 1 ತರಣೋಪಾಯಿದು ಒಂದೆ ಇದು ಒಂದೆ ನಿರ್ಣೈಸದೆ ಮೊದಲಿಂದೆ 2 ಸಾಧನಿದೆ ಸ್ವಹಿತ ಇದೆ ಸ್ವಹಿತ ನವನೀತ 3 ಸರಿ ಈ ಸಾಧನಕಿಲ್ಲ ಸಾಧನಕಿಲ್ಲ ಗುರು ಶರಣಾಗತ ಬಲ್ಲ 4 ಸಾಧನದಿ ಸುವಸ್ತ ಸುವಸ್ತ ಸಾಧಿಸಿತು ಮಹಿಪತಿಗೆ ಸಾಭ್ಯಸ್ತ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಬಲ್ಲವರಿಗರಿದಲ್ಲ ಪ್ರಮೇಯವಲ್ಲಬೆಳ್ಳಿ-ಭಂಗಾರಲ್ಲ ಮೆಲುವದಲ್ಲ ಪಕಣ್ಣೆವೆಯನಿಕ್ಕದು ಮತ್ಸ್ಯಾವತಾರನಲ್ಲ |ಘನ್ನ ಕಠಿಣವುಕೂರ್ಮರೂಪಿಯಲ್ಲ ||ಮಣ್ಣು ತಿಂಬುವದು ಇಟ್ಟಲ್ಲೆ ವರಹನೂ ಅಲ್ಲ |ಇನ್ನು ಬಾಯ್ದೆರೆದಿಹುದು ನರಸಿಂಹನಲ್ಲ 1ಮದುವೆಯಾಗಿಲ್ಲವು ವಾಮನಾವತಾರಲ್ಲ |ವದಗಿ ಛೇದಿಸುವದು ಭಾರ್ಗವಲ್ಲ ||ಮುದದಿಂದ ಅನ್ನವುಣ್ಣದು ದಾಶರಥಿಯಲ್ಲ |ತುದಿ ಮೊದಲು ಕಪ್ಪು ಶ್ರೀ ಕೃಷ್ಣನಲ್ಲ 2ಬತ್ತಲೆ ಇರುವದು ಬುದ್ಧಾವತಾರಲ್ಲ |ಕತ್ತರಿಸುವುದು ಬಿಡದೆ ಕಲ್ಕಿಯಲ್ಲ ||ಸತ್ಯಸಂಕಲ್ಪಶ್ರೀ ಪ್ರಾಣೇಶ ವಿಠಲನ |ಭೃತ್ಯರೇ ಬಲ್ಲರೀ ಗೋಪ್ಯ ಸೊಲ್ಲ 3
--------------
ಪ್ರಾಣೇಶದಾಸರು