ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುನಾಮ ಸ್ಮರಿಸಿರೊ ಶ್ರೀಗುರುನಾಮ ಸುರುಮುನಿಜರ ಪ್ರಿಯವಾದ ನಾಮ ದ್ರುವ ಬ್ರಹ್ಮ ವಿಷ್ಣುರುದ್ರರಿಗಿದೆ ನಿಜನಾಮ ಪ್ರೇಮದಿಂದ ಸ್ಮರಿಸುವರು ಇದೆ ನಾಮ ಸಮಸ್ತ ಲೋಕಕ್ಕೆ ಸಾರವಾದ ನಾಮ ನೇಮದಿಂದ ತಾರಿಸುವ ದಿವ್ಯನಾಮ 1 ಸಕಲಾಗಮ ಪೂಜಿತರಿದೆ ನಾಮ ಏಕೋಮಯವಾಗಿ ದೋರುವದಿದೆನಾಮ ಶುಕವಾಮ ದೇವರಿಗಿದೆ ನಿಜ ನಾಮ ಸುಖ ಸರ್ವರಿಗೆ ದೋರುವ ಗುರುನಾಮ 2 ಕರ್ಮಬಂಧನ ಛೇದಿಸುವದಿದೆ ನಾಮ ಕರ್ಮದೋರಿ ಕೊಡುವದೀ ಗುರುನಾಮ ಬ್ರಹ್ಮಾನಂದ ಸುಖದೊರುವಾನಂದ ನಾಮ ಧರ್ಮ ಜಾಗಿಸಿಕೊಡುವದೀ ಗುರುನಾಮ 3 ಅಜಮಿಳಗೆ ತಾರಿಸಿದಿದೇ ನಾಮ ಗಜಭಯ ಪರಿಹರಿಸಿದಿದೆ ನಾಮ ಸುಜನರಿಗೆ ಸುಪ್ರಸನ್ನವಾದ ನಾಮ ಮೂಜಗಕೆ ತಾಮುಖ್ಯವಾದ ಗುರುನಾಮ 4 ಅಹಲ್ಯ ಉದ್ಧರಣ ಮಾಡಿದುದಿದೆ ನಾಮ ಪ್ರಲ್ಹಾದÀನ ಪ್ರಾಣಗಾಯಿದಿದೆ ನಾಮ ಫಲುಗುಣ ತಾ ಪಕ್ಷವಾದದುದಿದೆ ನಾಮ ಒಲಿದು ಧ್ರುವಗಥಳವಿತ್ತ ಗುರುನಾಮ 5 ಅಗಣಿತ ಗುಣ ಪರಿಪೂರ್ಣವಾದ ನಾಮ ಸುಗಮ ಸುಪಥಸಾಧನ ಇದೆ ನಾಮ ಯೋಜನ ಸೇವಿಸುವ ನಿಜನಾಮ ನಿರ್ಗುಣಾನಂದವಾಗಿಹ್ಯ ಗುರುನಾಮ6 ಸೂರ್ಯಚಂದ್ರ ಸಮಸ್ತವಂದ್ಯ ಇದೆ ನಾಮ ಕಾರ್ಯಕಾರಣವಾಗಿಹ್ಯ ವಿದೆ ನಾಮ ತೂರ್ಯಾವಸ್ಥೆ ಯೊಳಗೆ ಸೂರಿಗೊಂಬು ನಾಮ ತರಳಮಹಿಪತಿ ತಾರಕ ಗುರುನಾಮ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು