*
ಸೂರ್ಯ | ನಾರಾಯಣ ರಥ
ಸೂರ್ಯ ಪ.
ಸೂರ್ಯ ರಥವನು
ಭಾರಿ ವಸನಾಭರಣ ತೊಡುತಲಿ
ಮೂರುಲೋಕವ ಬೆಳಗು ಮಾಡುತ
ಭಾರಿ ತಮವನು ಛೇದಿಸುತ್ತ ಅ.ಪ.
ಸಪ್ತ ಹಯೆಗಳ್ ಕಟ್ಟುತ | ಚಕ್ರೇಕ ರಥಕೆ
ಸಪ್ತ ಋಷಿಗಳ್ ಪೊಗಳುತ | ಅರುಣ ಸಾರಥ್ಯ
ಸಪ್ತ ಜಿಹ್ವನ ತೆರದಿ ತೋರುತ
ಸಪ್ತ ಶರಧಿಯ ದಾಟಿ ಸಾರುತ
ಸಪ್ತಗಿರಿ ಮೇರು ಸುತ್ತುತಾ ರಥ
ಶುಭ ದಿವಸದಲ್ಲಿ 1
ವಾಲಖಿಲ್ಯರು ಎದುರಲಿ | ಅರವತ್ತು ಸಾವಿರ
ಓಲಗ ತೊಡುತಲಲ್ಲೀ | ಹಿಂದು ಮುಂದಿನಲಿ
ಗಾಲಿದಬ್ಬುವ ರಕ್ಕಸೊಬ್ಬನು
ವ್ಯಾಳನೊಬ್ಬನು ರಜ್ಜರೂಪಕೆ
ಮೇಲೆ ಯಕ್ಷಕಿನ್ನರರು ಸುತ್ತಲು
ಕರ್ಮ ಸಾಕ್ಷಿಯು 2
ಉತ್ತರಾಯಣ ಮಾಘದಿ | ಸ್ನಾನವಗೈದು
ಉತ್ತಮರಘ್ರ್ಯ ಕರದಿ | ಪಿಡಿಯುತ್ತ ಭರದಿ
ಉತ್ತಮ ಗಂಗಾದಿ ತೀರ್ಥದಿ
ಉದಿಸಿ ಬರುವಗೆ ಕೊಡುವ ಕತದಿ
ಚಿತ್ತ ನಿರ್ಮಲದಿಂದ ಕಾದಿರೆ
ಹತ್ತಿ ಛಾಯೆಯೆ ಸಹಿತ ರಥದಿ 3
ಜಗಚಕ್ಷುವೆನಿಸಿದನೂ | ಧರ್ಮಜಗೆ ವಲಿದು
ಮಿಗೆ ಅಕ್ಷಪ್ರದನಾದನೂ | ಸವಿತೃ ನಾಮಕನೂ
ಬಗೆ ಬಗೆಯ ಜೀವರುಗಳಯುವ
ತೆಗೆದು ಸೆಳೆಯುತ ದಿನದಿನದಲಿ
ನಿಗಮಗೋಚರ ನಾಜ್ಞೆಧಾರಕ
ಸುಗುಣರಿಗೆ ಸುಜ್ಞಾನವೀಯುತ 4
ಕಮಲ | ಗದೆಯ ಧರಿಸಿ
ಕಿಂಕರಾದ್ಯರ ನುತಿಗಳ | ಕೇಳುತ್ತ ಬಹಳ
ಶಂಖ ಚಕ್ರಾಂಕಿತನು ಶಿರಿಸಹ
ಶಂಕಿಸದೆ ತನ್ನ ಹೃದಯದಲ್ಲಿರೆ
ಬಿಂಕ ಗೋಪಾಲಕೃಷ್ಣವಿಠಲಗೆ
ಕಿಂಕರನು ತಾನÉಂದು ಪೊಗಳುತ 5