ಕದವ ತೆಗೆಯಲ್ಹ್ಯಾಂಗ ಮಧ್ಯರಾತ್ರಿಯಲಿ
ಚದುರ ನಿನ್ನ ಗುರ್ತು ಪೇಳು ಮೊದಲಿನಲಿ ಪ
ನೀರ ಪೊಕ್ಕು ವೇದವನ್ನು ತಂದಿಹೇನೇ
ಭಾರವನ್ನು ಬೆನ್ನಿನಲ್ಲಿ ಪೊತ್ತಿಹೇನೇ
ಕೋರೆಯ ಮ್ಯಾಲಿಳೆಯನ್ನಿಟ್ಟಿಹೇನೇ
ಕೋರೆದಾಡಿಯಿಂದ ದನುಜನಳ್ದಿಹೇನೇ 1
ದಾನಬೇಡಿ ಬಲಿಯನ್ನೊತ್ತಿಹೇನೇ
ಮಾನ್ಯವೆಂದು ತಾಯಶಿರ ಛೇದಿಸಿಹೇನೇ
ದಾನವನ ಪತ್ತುತಲೆಯರದಿಹೇನೇ
ದಾನಮಾಡಿ ದೇಹವನ್ನು ಮೆರದಿಹೇನೇ 2
ಬತ್ತಲ್ಯಾಗೆ ಬೌದ್ಧನೆನಿಸುವೇನೇ
ಕುದುರೆಯಾಗಿ ಧಕ ಧಕ ಕುಣಿಸುವೇನೇ
ಅಧüರಪಾನವನ್ನು ನಾ ಬಯಸಿಹೇನೇ
ಚದುರ ನರಸಿಂಹವಿಠಲನೆನಿಸುವೇನೇ 3