ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಾಮ ರಾಮ ರಾಮ ಎಂದು ಸ್ಮರಿಸೊ ನೀ ಮನಾ ಪ್ರೇಮದಿಂದ ಜಾನಕಿಪತಿಯ ಅನುದಿನಾ ಪ ಇಂದು ಶೇಖರ ವಂದ್ಯ ಗೋವಿಂದ ದೇವನಾ ಮಂದರಾದ್ರಿ ಗಿರಿಯನೆತ್ತಿದ ಮಹಾಮಹಿಮನ ಕಂದ ಕೂಗಲು ಕಂಬದಿ ಬಂದ ಕರುಣಾ ಸಾಗರನ ಚಂದದಿಂದ ಚಲನೆಯಿಲ್ಲದೆ ಚೆಲುವ ಕೃಷ್ಣನಾ 1 ಕುಲಸತಿಯ ಕುಚದಲ್ಲಿಟ್ಟ ಕೋಮಲಾಂಗನ ಒಲಿದು ಧ್ರುವಗೆ ಪಟ್ಟವನಿತ್ತ ವಾರಿಜನಾಭಾನಾ ಜಲದಿ ಬಂಧಿಸಿ ದೈತ್ಯರನ ಛೇದಿಸಿದಾತನಾ ಸುಲಭದಿಂದ ಹೃದಯದಲ್ಲಿ ಸ್ತುತಿಸೊ ನೀ ಇನ್ನಾ 2 ಸಿಂಧುಶಯನ ಶ್ರೀನಿವಾಸ ಸಕಲಕರ್ತನಾ ನಂದದಿಂದ ಹೆನ್ನ ವಿಠ್ಠಲ ಇಂದಿರೇಶನ ಪಾದ ದ್ವಂದ್ವ ಭಜಿಸಿ ಹರುಷದಿ ಮನಾ ಕುಂದುಯಿಲ್ಲದೆ ಕಾಯ್ವ ಭಾನುಕೋಟಿ ತೇಜನಾ 3
--------------
ಹೆನ್ನೆರಂಗದಾಸರು