ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಾಮ ರಾಮ ರಾಮ ಎಂದು ಸ್ಮರಿಸೊ ನೀ ಮನಾ ಪ್ರೇಮದಿಂದ ಜಾನಕಿಪತಿಯ ಅನುದಿನಾ ಪ ಇಂದು ಶೇಖರ ವಂದ್ಯ ಗೋವಿಂದ ದೇವನಾ ಮಂದರಾದ್ರಿ ಗಿರಿಯನೆತ್ತಿದ ಮಹಾಮಹಿಮನ ಕಂದ ಕೂಗಲು ಕಂಬದಿ ಬಂದ ಕರುಣಾ ಸಾಗರನ ಚಂದದಿಂದ ಚಲನೆಯಿಲ್ಲದೆ ಚೆಲುವ ಕೃಷ್ಣನಾ 1 ಕುಲಸತಿಯ ಕುಚದಲ್ಲಿಟ್ಟ ಕೋಮಲಾಂಗನ ಒಲಿದು ಧ್ರುವಗೆ ಪಟ್ಟವನಿತ್ತ ವಾರಿಜನಾಭಾನಾ ಜಲದಿ ಬಂಧಿಸಿ ದೈತ್ಯರನ ಛೇದಿಸಿದಾತನಾ ಸುಲಭದಿಂದ ಹೃದಯದಲ್ಲಿ ಸ್ತುತಿಸೊ ನೀ ಇನ್ನಾ 2 ಸಿಂಧುಶಯನ ಶ್ರೀನಿವಾಸ ಸಕಲಕರ್ತನಾ ನಂದದಿಂದ ಹೆನ್ನ ವಿಠ್ಠಲ ಇಂದಿರೇಶನ ಪಾದ ದ್ವಂದ್ವ ಭಜಿಸಿ ಹರುಷದಿ ಮನಾ ಕುಂದುಯಿಲ್ಲದೆ ಕಾಯ್ವ ಭಾನುಕೋಟಿ ತೇಜನಾ 3
--------------
ಹೆನ್ನೆರಂಗದಾಸರು
ಶೇಷ ಗಿರಿಯ ವಾಸಈಶ ಜಗತ್ರಯ ಪೋಷಕ ಸರ್ವೇಶ ಭಾಸುರ ಕೀರ್ತಿ ಶೇಷ ಎನ್ನ ನೀ ಪೋಷಿಸುವುದು ಈಶ ಪ ವಕ್ಷಸ್ಥಳದಲಿ ವಾಸವಾಗಿಹ ಶ್ರೀ ಪರಬ್ರಹ್ಮ ನಾ ಪಕ್ಷಿವಾಹನ ಪರಮಪರುಷ ಅಕ್ಷಯ ಫಲದಾಯಕನಾ ರಕ್ಷಕ ದೀನ ಜನರ ಸರ್ವೋತ್ತಮನ ರಾಜೀವದಳನಯನ ಈಕ್ಷಣದಲೆನ್ನ ನಿನ್ನ ಕುಕ್ಷಿಯೊಳಗೆ ಇಟ್ಟು ರಕ್ಷಿಸೊ ಸಂಪನ್ನ 1 ವೇಣುನಾದ ವಿನೋದನಾದ ಸುಗಾನಲೋಲ ಹರಿಯೆ ದಾನವಾಂತಕ ದಜನುರಕ್ಷಕ ಸುಜ್ಞಾನಿಗಳ ಧೊರಿಯೆ ಮಾನವಾಧಿ ಪ ಮದನವಿಲಾಸ ಮಾಧವ ಮುಕುಂದಾ ನೀನೆ ದಯಮಾಡಿ ಸಲಹೊ ಆನಂದಾ ನಿಜನಿತ್ಯ ಗೋವಿಂದಾ 2 ವಾರಿಧಿ ಬಂಧಿಸಿ ದೈತ್ಯರ ಬಲವನೆಲ್ಲ ಮುರಿದಾ ಬಲವಂತಾ ರಾವಣನ ಭಂಗವ ಬಡಿಸಿ ತಲೆಗಳ ಛೇದಿಸಿದಾ ಸುಲಭದಿ ಅವನನುಜಗೆ ಪಟ್ಟವನಿತ್ತು ಸತಿಯನೆ ತಂದಾ ಜಲಧಿಶಯನ ಅಹೋಬಲ 'ಹೊನ್ನವಿಠ್ಠಲ’ ಚಲುವ ಸದಾನಂದಾ 3
--------------
ಹೆನ್ನೆರಂಗದಾಸರು
ಶ್ರೀ ಸತ್ಯ ಬೋಧರು ನಿಂದಿಸೋರಿಗೆ ನಿಂದೆಯನು ಕೊಡುವಾ ಕೊನೆಕಾಮರಿಗೆ [?] ಕೊನೆಯನು ಕೊಡುವಾ ಘನ ಮಹಿಮಾ ನಮ್ಮ ಸತ್ಯಬೋಧಗುರು ಅನುದಿನ ನೆನೆಯಲಭೀಷ್ಟವ ಕೊಡುವಾ ಪ ರಾಮದೇವಾರ್ಚನೆ ನೇಮದಿಂದಲಿ ಗೈದು ಕಾಮಿತ ಫಲಪ್ರದ ಬಲವೈಯ್ದಿದಾ ಶೀಮಿಶೀಮಿಯೊಳು ಕಾಮನೈಯ್ಯನ ಜನ ಕಾಮಪ್ರದಾನೆಂಬುದೆ ಸಾರಿದಾ ಧೀಮಾನ್ ಶ್ರೀಮಾನ್ ಕಾಮಿತೇಷ್ಟದಾ ಕಾಮನೆಂದು ತಾ ಪೊಗಳಿಸಿದಾ ವಾಮದೆ ವಗುರು ರಾಮಭಕುತನೆಂದು ಭೂಮಿಯೊಳ್ಡಂಗುರ ಹೊಡಿಸಿದಾ 1 ತತ್ವ ತಿಳಿದು ನೋಡಿ ಸತ್ಯ ಸತ್ಯ ಹರಿ ಮತ್ತುವನಿಗೆ ಭೃತ್ಯವಾದ ಸೂನು ಉತ್ತಮರೆಲ್ಲರು ಸತ್ಸಮಯವಂತೆ ಸತ್ಯ ಪ್ರಮಾಣವ ಪೇಳಿದನು ¸ತ್ಯಬೋಧ ರವಿ ಮಿಥ್ಯಾಗತ್ತಲೆಗೆ ತಾ ಕತ್ತರಿಯೆಂದರುಹಿದನು ¸ತ್ಯ ಬೋಧನೆಯನು ಸತ್ವರಿಂಗೆ ಮಾಡಿ ಮತ್ತವರುದ್ಧಾರ ಮಾಡಿದನು 2 ವರಸದ್ಗುಣಗಣ ನಿಲಯನೆನಿಸಿ ತಾ ವರ ಶಿಷ್ಟಾನ್ವಿತ ಮೇಣ್ ವಂದ್ಯನಾದ ಶಿರಿವರ ಪಾದಾನುಗ್ರಹ ಪಡೆದು ತಾ ಹರಿಜನಾರ್ತಿತಯ ಛೇದಿಸಿದಾ ದುರಿತ ತಮರಾಶಿಗಗ್ನಿಯೆನಿಸಿದಾ ಶರಣರ ಸಂಘ ಬೂದಿಗೈದಾ ನರಸಿಂಹವಿಠಲನ ಕರಣವ ಪಡೆದು ತಾ ಗುರುವರ ವರಪ್ರದನೆನಿಸಿದಾ 3
--------------
ನರಸಿಂಹವಿಠಲರು