ಯೋಗಿ ನಿತ್ಯಾನಂದ ಭೋಗಿನಾದದಿ ಮಲಗ್ಯಾನೆ ಯೋಗಿನಾದಂ ಝಣಂ ಝಣನಾದಂ ಭಿಣಿಂಭಿಣಿನಾದಸಲೆಯ ವೀಣಾನಾದವ ಕೇಳುತ ಪ
ಈಷಣತ್ರಯ ಪಾಪಾತ್ಮರಿರಾ ಎಬ್ಬಿಸಲು ಬ್ಯಾಡಿವಾಸನವೆಂಬ ಆಷ್ಟಕರ್ಮಿಗಳೇ ಒದರ ಬ್ಯಾಡಿಪಾಶವ ಹರಿವುತ ಪಂಚಕ್ಲೇಶದಈಸು ಉಳಿಯದಂತೆ ತರಿದಾಯಾಸದಿ 1
ಅಂತರ ಎಂಬ ಘಾತಕರಿರಾ ಅತ್ತ ಹೋಗಲು ಬ್ಯಾಡಿಭ್ರಾಂತುಯಂದೆಂಬ ಬ್ರಷ್ಟರಿರ ಜಗಳಾಡಲಿ ಬ್ಯಾಡಿಅಂತರಿಸದೆ ಆರು ಶತ್ರುವ ಛೇದಿಸಿಅಂತಿಂತೆನ್ನದೆ ಆಯಾಸದಿಂದಲಿ 2
ಸಂಕಲ್ಪವೆಂಬೋ ಖೋಡಿಗಳಿರಾ ಸದ್ದು ಮಾಡಲಿ ಬ್ಯಾಡಿಮಂಕು ಎಂದೆಂಬ ಮಾಂದ್ಯಗಳಿರ ಮುಂದಕ್ಕಡ್ಡಾಡಬೇಡಿಬಿಂಕದಹಂಕಾರ ಬೇರ ಕಿತ್ತುಓಂಕಾರ ಚಿದಾನಂದ ವಸ್ತು ಆಯಾಸದಿ 3