ಸಾಧಿಸಿದೇ ಖೂನ ಸದಾಸದ್ಗುರು ಕೃಪೆ ಜ್ಞಾನ
ಛೇದಿಸಲನುಮಾನ ಶೋಧಿಸ್ಯನುದಿನ
ಭೇದಿಸಿ ನೋಡಿ ಸದೋದಿತಾತ್ಮಙÁ್ಞನ 1
ಹೇಳಿ ಕುಡುವದಲ್ಲ ಕೇಳಿ ಕೊಂಬುವುದಲ್ಲ
ಹೇಳುವ ಮಾತಿನೊಳಿಲ್ಲ ಕೇಳುವ ಕಿವಿಯೊಳಿಲ್ಲ
ತಿಳಿವಿನೊಳಿಹ ನಿಜಗುಟ್ಟು ತಿಳಿದವಬಲ್ಲ 2
ಸೋಹ್ಯ ಸೂತ್ರದ ಖೂನ ದೇಹಾತೀತನು ಬಲ್ಲನೆ ಪೂರ್ಣ
ಗುಹ್ಯ ಗೊಪ್ಪದ ಧನ ಮಹಾನುಭವದ ಸ್ಥಾನ
ಮಹಿಪತಿ ಮನೋನ್ಮನಲೀಯ ನಿಧಾನ 3