ವಾದಿರಾಜರ ಸ್ತೋತ್ರ
ಇದಿರ್ಯಾರೋ ಗುರುವೆ ಸಮರ್ಯಾರೋ ಶ್ರೀ ಹಯವದನ ಪದ ಪ್ರಿಯ ವಾದಿರಾಜ ಪ
ಸಿರಿನಿಲಯನ ಗುಣಗಳ ಸ್ಮರಿಸುತಗುರು ಮಧ್ವ ಮುನಿಪನ ಮಹಿಮೆಯ ಪೊಗಳುತನೆರೆದಿದ್ದ ಮಾಯ್ಮದ ಕರಿಗಳ ಶಿರವನುಭರದಿ ಛೇದಿಪ ಬಲಿ ವಿಬುಧ ಕೇಸರಿಯೆ 1
ಸಾರ ಸಜ್ಜನರಿಗೆ ತಿಳಿಯದೇಪರಿಪರಿ ಕುಸಮಯ ತಮ ಕವಿಯಲು ನೀಸರಸ ಭಾರತಿ ಮೊದಲಾದ ಗ್ರಂಥಗಳನುವಿರಚಿಸಿ ತಮ ಹರಿಸಿದ ದಿನಕರನೇ 2
ಸೋದೆಯ ಪುರದಲ್ಲಿರುವ ಹಯವದನನಮೋದದಿ ಭಜಿಸುತ ಈ ಧರೆಯೊಳ್ ಪೂರ್ಣಬೋಧ ತೀರ್ಥರ ಪಾದಸೇವಕರಿಗೆಆದರ ಮಾಳ್ಪ ಯತಿಕುಲ ಶಿರೋಮಣಿಯೇ 3
ಮುದ್ದು ಲಕ್ಷ್ಮೀಶ ವೆಂಕಟ ವಿಠ್ಠಲನಹೊದ್ದಿದ ಭಕ್ತರ ಸಂತಾಪ ಕಳೆಯುತ ಮಧ್ವಮುನಿಯ ಮತ ದುಗ್ಧವಾರಿಧಿಯೊಳುಉದ್ಭವಿಸಿದ ಪೂರ್ಣ ಶುದ್ಧ ಚಂದ್ರಮನೇ 4