ನಂಬಿದೆ ಕುಮಾರ ತವ ಪಾದಾಂಬುಜವ ಧೀರಾ ಪ
ಶ್ರೀ ಶಂಭು ಸುಕುಮಾರ ಅ.ಪ
ಯೋಗಿಜನವಂದ್ಯ ಸದ್ಗುಣ ಸಾಗರಾನಂದ ನಿರುಪಮ ರಾಗ ಲೋಭವ ತ್ಯಾಗಗೈದಿಹ ಶ್ರೀ ಗಿರಿಜೆಕಂದಾ 1
ಶಕ್ತಿ ಮೊದಲಾದ ಆಯುಧ ಹಸ್ತದೊಳು ಪಿಡಿದಾ ನಿರ್ಮಲ ಚಿತ್ತ ಶ್ರೀಧರ ಮಿತ್ರ ಪರಮ ಪವಿತ್ರ ಖಳ ಛೇದಾ 2
ವಾಸವಾರ್ಚಿತನೇ ಸರ್ವದಾ ದಾಸ ರಕ್ಷಕನೇ ರವಿಶತ ಭಾಸ ಚಂಪಕನಾಸ ಪಾವಂಜೇಶ ಷಟ್ಶಿರನೇ 3