ಮಂಗಳ ಮೂರ್ಜಗದೊಡೆಯನಿಗೇ | ಶುಭಮಂಗಳ ಸ್ಪ್ಟಷ್ಟ್ಯಾದಿ ಕರ್ತನಿಗೇ ಪ
ಮಂಗಳ ರವಿಕುಲ ತಿಲಕನಿಗೇ | ಶುಭಮಂಗಳ ಹನುಮನ ಒಡೆಯನಿಗೇ ||ಮಂಗಳ ಭೀಮನ ಸಲಹಿದಗೇ | ಶುಭಮಂಗಳ ಮಧ್ವ ಹೃದಾಂಬುಜ ರವಿಗೇ 1
ಮಂಗಳ ದಶಗ್ರೀವ ಛೇದಕಗೇ | ಶುಭಮಂಗಳ ಕೌರವ ಹಂತಕಗೇಮಂಗಳ ವ್ಯಾಸರ ಸೇವಕನೆನೆ | ನಮ್ಮಮಂಗಳ ದಶಮತಿ ಪೋಷಕಗೇ 2
ಮಂಗಳ ಸೀತೆಯ ತೋಷಕಗೇ | ಶುಭಮಂಗಳ ರುಕ್ಮಿಣಿ ಅರಸನಿಗೇಮಂಗಳ ಮಧ್ವರ ಪೊರೆದವಗೇ | ಶುಭಮಂಗಳ ಗುರು ಗೋವಿಂದ ವಿಠಲಗೇ 3