ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಂಗ ಬಾರೈಯ್ಯ ದೇವೋತ್ತುಂಗ ದಯಾಂತರಂಗ | ಅಂಗಜನಯ್ಯ ನರಶಿಂಗಾ ಸಾರಸಾಪಾಂಗ || ಮಂಗಳ ಮಹಿಮಾ ವಿಹಂಗ ಘೋರ ಭವಭಂಗರಹಿತ ರಣರಂಗ ವಿಜಯ || ಸನ್ನುತ ಶೃಂಗಾರಾಂಗ ರಮಾಂಗನಾಸಂಗ ಪ ಶತಕೋಟಿ ಭಾಸ್ಕರ ಯುತತೇಜ ಮರುತಾಂತರ್ಗತ | ಹರಿಮೃದು ಭಾಷಣ | ಕೌಸ್ತು ಭಾಭರಣ | ಜಿತದಿತಿಸುತಬಾಲ | ಶ್ರಿತಭಕ್ತ ಮಂದಾರ | ಪತಿತ ಪಾವನ ಶ್ರೀರಾಮ ಪಟ್ಟಾಭಿರಾಮ | ಅತುಲಿತ ಚರಿತ ಕಾಮಿತ ಫಲದಾಯಕ | ಶತ ಧೃತಿ ಜನಕಾಚ್ಯುತ ಸರ್ವೋತ್ತಮ | ಸತತವು ನೀನೇ ಗತಿಯೆಂದೆನುತಲಿ | ಹಿತದಿ ನಾನು ನಿಮ್ಮ ಸ್ತುತಿಸುತಲಿರುವೆನು 1 ನಂದನಂದನ ವೇಣುನಾದ ವಿನೋದ ಜಗದ್ವಂದ್ಯ ಶ್ರೀವತ್ಸಲಾಂಛನ ವಾಸುಕಿಶಯನ | ಮಂದಹಾಸ ಮುಚುಕುಂದವರದ ರಾಕೇಂದುವದನ | ಗೋವಿಂದ ಇಂದಿರಾನಂದ ಸಿಂಧು ಗಂಭೀರಾ | ಮುಕುಂದ ಧರಣೀಧರ ಕುಂದರದನ ಕಾಳಿಂದಿರಮಣ ಗಜೇಂದ್ರನ ಸಲಹಿದ ಛೆಂದದೆನ್ನ ಮೊರೆಯಿಂದಿಗೆ ಲಾಲಿಸೊ ಪರಮಾತ್ಮ ಸರಸಿಚೋದರ ಸಕಲಾಣುರೇಣು ಪರಿಪೂರ್ಣ 2 ನಿರುಪಮಧೀರ ಶರಣಾಗತ ರಕ್ಷಣ ಮಧುಸೂದನ ಸುರವರ ಪೂಜಿತ ಚರಣಾಂಭೋರುಹ ಕೃಪಾಕಾರ ಹರುಷದಲಿ 3
--------------
ಹೆನ್ನೆರಂಗದಾಸರು