ಇದೇ ಸಂಧಿಸಿ ಧರ್ಮ ಭೇದಸಿ ಗುರುವರ್ಮ
ಶೋಧಿಸಿ ನೋಡಲಿಕ್ಕೆ ಛೆÉೀದಿಸಿಹೋಗುದು ಭವಕರ್ಮ ಧ್ರುವ
ಕಾಣಾದ ಕಾಣಬ್ಯಾಡಿ ಕಾಣಿಸುವದು ನೋಡಿ
ಕಾಣಿಸಿ ಕಾಣಗೊಡದಿಹ್ಯದ ಖೂನ ನಿಜಮಾಡಿ 1
ದೋರದ ನೋಡಬ್ಯಾಡಿ ದೋರಿಸುವದು ನೋಡಿ
ದೋರಿಸಿದೋರಗುಡದಿಹುದ ಖೂನ ನಿಜಮಾಡಿ 2
ಕೇಳದ ಕೇಳಬ್ಯಾಡಿ ಕೇಳಿಸುವದ ನೋಡಿ
ಕೇಳಿಸಿ ಕೇಳೆಗೊಡದಿಹುದ ಖೂನ ನಿಜಮಾಡಿ 3
ಆಡದ ನೋಡಬ್ಯಾಡಿ ಅಡಿಸುವದ ನೋಡಿ
ಅಡಿಸಿ ಆಟ ನೋಡಗೂಡದ ಖೂನ ನಿಜಮಾಡಿ 4
ನುಡದ ನೋಡಬ್ಯಾಡಿ ನುಡಿಸುವದ ನೋಡಿ
ನುಡಿಸಿ ನುಡಿ ತಿಳಿಯಗುಡದ ಖೂನ ನಿಜಮಾಡಿ 5
ಮಾಡದ ನೋಡಬ್ಯಾಡ ಮಾಡಿಸೂವದ ನೋಡಿ
ಮಾಡಿಸಿ ಮಾಡದೋರಗುಡದ ಖೂನ ನಿಜಮಾಡಿ 6
ತಿಳುಹದ ನೋಡಬ್ಯಾಡಿ ತಿಳುಹಿಕುಡದ ನೋಡಿ
ತಿಳುವಿಸುವದ ತಿಳುವದೆ ಮಹಿಪತಿವಸ್ತ ನೋಡಿ7