ಹಲವು ಸಂಭ್ರಮಗಳಿಂ ಮನೆ ಕಟ್ಟಿದೀ ದೇವ ಪ
ನೆಲೆಗೆಡಿಸಿ ಅದನಿಂದು ಕೆಡಹುತಿರುವೀ ಅ.ಪ
ಪ್ರಾರಬ್ಧಕರ್ಮವೆಂತೆಂಬ ಹಳ್ಳವ ತೋಡಿ
ಆರು ಜನ ಕೆಲಸಗಾರರನಲ್ಲಿ ಕೂಡಿ
ಮೀರಿ ಮಾಯೆಯ ಭಾರಿ ಕಲ್ಕೆಸರುಗಳ ಹೂಡಿ
ಭಾರಿನೆಲಗಟ್ಟು ರಚಿಸಿದರೊಂದುಗೂಡಿ 1
ಎಲುವಿನ್ಹಂದರ ಹರಹಿ ಬಲಿದ ಮಾಂಸದ ಗೋಡೆಗಳ ಮೇಲೆ
ಚೆÀಲುವ ಚರ್ಮ ಹೊದ್ದಿಸಿ
ಜಲರಕ್ತ ಕಾಲ್ವೆಗಳ ಹರಿಸಿ | ಸ್ವಚ್ಛತೆಯಿರಿಸಿ
ಬಲುಉಸಿರುಬಲದಿಂದಲದ ಚಲನಗೊಳಿಸಿ 2
ಐದು ಇಂದ್ರಿಯಗಳೇ ದ್ವಾರ ಕಿಟಕಿಗಳಾಗೆ
ಐದುಬಗೆ ವಿಷಯಗಳು ಆಹಾರವಾಗೆ
ವೈದು ಯಮಪುರಿಗೆ ತಲ್ಪಿಸÀಲುಣಿಸನಿದನುಂಡು
ಐದಿದುದು ನರಕಕೂಪಕೆ ಜೀವದಂಡು 3
ಕ್ಷೇತ್ರಜ್ಞ ನೀನು ನಿನ್ನಯ ಕಣ್ಣಮುಂದಿಂತು
ಗಾತ್ರದಲಿ ವಾಸಿಪ ಜೀವನು ನಿನ್ನ ಮರೆತು
ಕ್ಷೇತ್ರಘಾತಕಕಾರ್ಯವೆಸಗುತಿರಲಂದಂದೆ
ನೇತ್ರ ಹಸ್ತಗಳ ಛೆÉೀದಿಸದೆ ಉಳುಹಿದೆಯೆಂತು 4
ಸರ್ವಸ್ವತಂತ್ರನೀ ಜೀವ ಪರತಂತ್ರನವ
ಗರ್ವ ಅಜ್ಞಾನ ಅಂಧತೆಗಳಲಿ ಸಿಲುಕಿ
ಸರ್ವ ದುಷ್ಕರ್ಮಗಳ ನಡೆಸಿ ಕೆಡಸಿಹನಿದನು
ಸರ್ವದಾ ಕ್ಷಮಿಸಿ ಪೊರೆ ರಘುರಾಮವಿಠಲ 5