ನೀರಜಾಕ್ಷ ನಿನ್ನೂರಿಗೆ ಪೋಗುವ ದಾರಿಯ ತೋರಯ್ಯ ಪ
ದಾರಿಯ ಕಾಣದೆ ಅ.ಪ
ಜನ್ಮಾಂತರ ಕೃತ ಕರ್ಮಗಳೆಂಬುವ ಹೆಮ್ಮರಗಳು ಬೆಳೆದು
ಧರ್ಮನಿರೋಧ ವಿಕರ್ಮದ ಬಳ್ಳಿಯು ಬಿಮ್ಮನೆ ಬಿಗಿವಡೆದು
ಕಂಟಕ ವೆಮ್ಮನು ಕಾಲಿಡಲಮ್ಮಗೊಡವು ಹರಿ1
ದಾರಿಯೊಳಡಸಿಹುದು
ರಾರು ಮಂದಿ ಮುಳಿದು
ಸಾರಿ ಸಾರಿ ಬಾಯಾರಿಸುತಿರ್ಪವು 2
ಯನು ದಾಂಟುವೊಡರಿದು
ಧನಕನಕಾದಿಗಳೆನಿಪ ಪಿಶಾಚಗಳನವರತವು ಬಿಡವು
ತನು ಸಂಬಂಧದ ಜನಗಳು ದುರ್ಮೃಗ
ವನು ಪೋಲುತ ನಮ್ಮನು ಬಾಧಿಸುತಿರುವರು 3
ಕ್ಷುದ್ರವಿಷಯಗಳುಛಿದ್ರವಹುಡುಕುವ
ವಧ್ರುವದೇಹದೊಳು
ಕದ್ರುಸುತರವೊಲುಪದ್ರವ ಗೈವ
ಭದ್ರದ ಭೀತಿಗಳೂ
ಪದ್ರವ ಜರೆಯೆಂಬುದ್ರಿಕ್ತಾಂಗನೆ 4
ಸುರನರವರರೊಳು ಶರಣೋಪಾಯವರ
ವರದವಿಠಲ ನಿಜ ಚರಣವ ನಂಬಿದೆ 5