ಲೋಭಿಯು ಬೇಡಲು ಲಾಭವೇನಿರುವುದು
ನಾಭಿಯು ಒಣಗುವುದು ಪ
ಲೋಭಿಗೆ ಧನದಿಂದ ಶೋಭೆಯುಂಟೆ ಮನ
ಕ್ಷೋಭೆಯಲ್ಲದೆ ಸತತ | ತನ್ನಯ ಮನಕ್ಷೋಭೆಯಲ್ಲದೆ ಸತತ ಅ.ಪ
ನೂರು ಛಿದ್ರಗಳಲ್ಲಿ ತೋರುತಿದ್ದರು ದೇಹ
ಕೋರನು ನವವಸನ | ಏನೆಂದು ಕೋರನು ನವವಸನ
ಮೂರು ಕಾಸಿಗೆರಡು ಮಾರುತಿದ್ದರು ಅದ
ದೂರದಿ ತ್ಯಜಿಸುವನು | ನೂತÀನವಸ್ತ್ರ ದೂರದಿ ತ್ಯಜಿಸುವನು 1
ಬಂಧು ಜನರು ತನ್ನ ಮಂದಿರಕ್ಕಿಳಿಯಲು
ನೊಂದುಕೊಳ್ಳುವ ಮನದಿ | ತತ್ತಳಿಸುತ ನೊಂದುಕೊಳ್ಳುವ ಮನದಿ
ತೊಂದರೆಗಳ ಪೊಂದಿಹೆನೆನ್ನುತ
ಮುಂದಕೆ ಸಾಗಿಸುವ | ಬಂದವರನು ಮುಂದಕೆ ಸಾಗಿಸುವ 2
ಮುಗ್ಗಿದ ಧವಸವು ಅಗ್ಗÀದಿ ಮಾರಲು
ಹಿಗ್ಗುತ ಕೊಳ್ಳುವನು | ಸೊಗಸಿನಲಿ ಹಿಗ್ಗುವನು
ಒಗ್ಗಿಹುದೆನ್ನುತ ನುಗ್ಗಿಸಿ ಉದರದಿ
ಸಗ್ಗದೆ ನಡೆಯುವನು | ಪರನುಡಿಗೆ ಸಗ್ಗದೆ ನಡೆಯುವನು 3
ಹಣದಲಿ ಲೋಭಕೆ ಕೊನೆ ಮೊದಲಿಲ್ಲದೆ
ಒಣಗಿಸುವನು ತನುವ | ಕಾರ್ಪಣ್ಯದಿ ಒಣಗಿಸುವನು ತನುವ
ಗೆಣೆಯನಿವನು ನಾಲ್ಕಾಣೆಯ ಕಂಡರೆ
ಕುಣಿಯುವನು ಮನದಲ್ಲಿ | ಎಣೆಯಿಲ್ಲದೆ ಕುಣಿಯುವ ಮನದಲ್ಲಿ4
ಕಿಕ್ಕಿರಿದರು ಧನ ಕಕ್ಕುಲತೆಯೊಳ್ ತನ್ನ
ಮಕ್ಕಳ ಸಲಹುವನು | ರಕ್ಕಸನಿವ ಮಕ್ಕಳ ಸಲಹುವನು
ಮಿಕ್ಕ ಧನವ ಬಲು ಅಕ್ಕರೆಯಿಂದ ಎವೆ
ಯಿಕ್ಕದೆ ನೋಡುವನು | ನೇತ್ರದಿ ಎವೆಯುಕ್ಕದೆ ನೋಡುವನು 5
ನುಡಿದರೆ ಸವಿಮಾತ ಒಡವೆ ವಸನಗಳಿ
ಗ್ಹಿಡಿವಳೆಂದರಿಯುತಲಿ | ಸಡಗರದಿ ಹಿಡಿವಳೆಂದರಿಯುತಲಿ
ಕರವ ಪಿಡಿವ ತನ್ನ ಮಡದಿಯ ಕಂಡರೆ
ಸಿಡಿಮಿಡಿಗÀುಟ್ಟುವನು | ನಿರ್ಘೃಣನಿವ ಸಿಡಿಸಿಡಿ ಗುಟ್ಟುವನು 6
ರಾಯರೆ ನಿಮ್ಮ ಸಹಾಯ ಹೊರತು
ಕಾಣೆನೆನಲು
ಕಾಯುವ ಧಣಿ ನಾರಾಯಣನೆನುತಲಿ
ನುಡಿಯುವನು 7
ಈ ಧನವೆ ದೊಡ್ಡ ಸಾಧನವೆನ್ನುವ
ಮೇಧಾವಿಯು ಇವನು | ಓದಲರಿಯದ ಮೇಧಾವಿಯು ಇವನು
ಪಾದ ಕಮಲದಲಿ
ಆದರವರಿಯನಿವ | ಎಂದೆಂದಿಗು ಆದರವರಿಯನಿವ 8
ಘನತೆಯು ಬೇಡವು ಜನತೆಯು ಬೇಡವು
ಧನವಿದ್ದರೆ ಸಾಕು | ಈ ನರನಿಗೆ ಧನವಿದ್ದರೆ ಸಾಕು
ಮನುಜ ಮುಟ್ಟದ ಗುಬ್ಬಿಯನನುಕರಿಸುತ ಜೀ
ವನವನು ಕಳೆಯುವನು | ಕ್ಲೇಶದಿ ಜೀವನವನು ಕಳೆಯುವನು9
ಗಳಿಸಿದವನ ಧನ ಬಳಸಿದವನಿಗೆಂಬ
ಮುಳುಗಿ ಮುಳುಗುತಿರುವ | ಕ್ಲೇಶಗಳಲಿ ಮುಳುಗು ಮುಳುಗುತ್ತಿರುವ 10
ಭುಜಗಶಯನ ಹರಿ ಸುಜನರು ತನ್ನನು
ಅಜನೆಂದು ಕರೆಯುತಿರೆ | ಸೃಷ್ಟೀಶನ ಅಜನೆಂದು ಕರೆಯುತಿರೆ
ತ್ಯಜಿಸದೆ ಹೆಸರನು ಅಜಗಳ ಸ್ತನದಂತೆ
ಸೃಜಿಸಿದನೀ ಜನರ | ಪ್ರಸನ್ನ ಹರಿ ಸೃಜಿಸಿದನೀ ಜನರ 11