ದಶವಿಧ ನಾದವು ಭಕ್ತರಿಗೆ ಕೇಳುತಿದೆದಶವಿಧ ನಾದವು ಭಕ್ತರಿಗೆ ಕೇಳುತಿದೆದುಶ್ಮಾನರು ಇಬ್ಬಗೆಯಾಗಲು ದೆಸೆ ಬಿರಿಯಲುಯೋಗಿಯ ಕಿವಿ ಎರಡರಲಿ ಪ
ಛಿಣಿ ಛಿಣಿ ಎಂಬ ಚಿನ್ನಿನ ನಾದವು ಚಿತ್ಕøತಿಯಾಗಿ ಚಿಮ್ಮತಿರೆಝಣಝಣವೆಂಬ ಝಿಲ್ಲಿಯ ನಾದವು ಝೇಂಕಾರದಿ ಝೇಂಕರಿಸುತಿದೆಎಣಿಕೆಯಿಲ್ಲದೆ ನಾಗಸ್ವರದ ಧ್ವನಿ ಎಡೆದೆರೆಪಿಲ್ಲದೆ ಕೂಗುತಿದೆಧಣಧಣ ಎನಿಪ ತಾಳನಾದವು ದಟ್ಟಣೆಯಾಗಿ ತುಂಬುತಿದೆ 1
ಮೃಣು ಮೃಣು ಎನಿಪ ಮೃದಂಗ ನಾದವುಮುಂಕಾಟ್ಟಾಗಿಯೆ ನುಡಿಯುತಿದೆತನನಾ ಎಂಬ ವೀಣಾಸ್ವರವು ತಂಪಾಗೆಲ್ಲವ ಮುಚ್ಚುತಿದೆಘನಘನ ಎನುತಲಿ ಶಂಖನಾದವುಘಮ್ಮೆನ್ನುತಲಿ ಭೋರೆನುತಲಿದೆಘಣಘಣ ಎನುತಲಿ ಘಂಟಾನಾದವುಘಂಟ್ಯಾಗಿಯೆ ಓಂ ಎನುತಲಿದೆ2
ಭೇರಿಯ ನಾದವು ಧಮಧಮ ಎನುತಲಿ ಬಹಳಾಗಿಯೆ ಭೋಂಕರಿಸುತಿದೆಘೋರದಿ ಮೇಘದ ನಾದವು ಘರ್ಜಿಸುತಿದೆ ಘುಡಿ ಘುಡಿಸುತಿದೆನೂರಾರು ಸಿಡಿಲಂತೆ ನೂಕು ನುಗ್ಗಡಿಸುತಿದೆವೀರ ಚಿದಾನಂದ ವಿಸ್ಮಯನಾಗಲು ವಿಚಿತ್ರದಿ ಬಾರಿಸುತಿದೆ3