ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಿಡೆ ಇನ್ನ್ಯಾತಕೆ ಹೊಡಿ ಹೊಡಿ ಡಂಗುರ ಪೊಡವಿ ತ್ರಯದಿ ಹರಿ ಅಧಿಕೆಂದು ಪ ಅಡಿಯ ದಾಸರ ಕರದ್ಹಿಡಿದು ಬಿಡದೆ ಬಲು ಸಡಗರದಾಳುವ ನಿಜಧಣಿಯೆಂದು ಅ.ಪ ನಂದಕಂದ ಗೋವಿಂದ ಮುಕ್ಕುಂದ ಭಕ್ತ ಬಂಧು ಎಂದು ಕೈತಾಳವಿಕ್ಕುತ ತಂದೆ ತನ್ನ ಪಾದನ್ಹೊಂದಿ ಭಜಿಪರ ಬಂಧ ಛಿಂದಿಪ ಪರದೈವವೆಂದು ನಲಿಯುತ 1 ಸ್ಮರಿಪ ಜನರ ಮಹದುರಿತಪರ್ವತವ ತರಿದು ಪೊರೆವ ಸಿರಿದೊರೆಯೆಂದೊದರುತ ನೆರಳುಯೆಂದು ಮೈಮರೆದು ಕೂಗುತ 2 ಶರಣಾಗತರ ತನ್ನ ಹರಣದಂತೆ ಕಾಯ್ವ ಕರ ಮೇಲಕೆತ್ತಿ ಮರೆಯ ಬಿದ್ದವರ ಪರಮ ಬಡತನವ ಭರದಿ ಕಳೆದನೆಂದು ಒರೆದು ಸಾರುತ 3 ಸಾಗರಶಾಯಿ ತನ್ನ ಬಾಗಿ ಬೇಡುವರ ಬೇಗ ಕ್ಷೇಮನೀಯ್ವ ಭಾಗ್ಯದರಸನೆಂದು ನೀಗದ ಕಷ್ಟದಿ ಕೂಗಲು ತಡೆಯದೆ ಸಾಗಿ ಬರುವ ಭವರೋಗವೈದ್ಯನೆಂದು 4 ಅಚ್ಯುತಗಿಂ ಭಕ್ತರಿಚ್ಛೆ ಪೂರೈಸಲು ಹೆಚ್ಚಿನವಿರಲ್ಲೆಂದು ಬಿಚ್ಚಿ ಹೇಳುತ ಇಚ್ಛಜಪಿತ ಮಹಸಚ್ಚಿದಾನಂದ ಸರ್ವಕ್ಹೆಚ್ಚು ಹೆಚ್ಚು ಶ್ರೀರಾಮನೆ ಎನ್ನುತ 5
--------------
ರಾಮದಾಸರು