ಮೂಲ ದೇಹದಿ ಪಾಳ್ಯ ಬಿಡುತಿದೆ
ನಾಳೆ ನಾಡದೋ ಕಾಣೆ ತಮಪುರವಿದು
ಕಾಲ ಬರುತಿದೆ ಪ
ಬಂದು ಬಂದವರೆ ಮುಕ್ತಿಗೆಯಿಕ್ಕಿ ರವಿ
ನಂದನ ನಾಳುಪದ್ರವನಿಕ್ಕಿ
ಹಿಂದು ಮುಂದಕು ಛಾವಣೆಯಿಕ್ಕಿಪುರದ
ಮಂದಿಯ ಕಾವಲನಿಕ್ಕಿ 1
ಪುರದೊಳಗೇನು ಬೀಯಗಳಿಲ್ಲ ಮುಂದೆ
ಬರುವ ಮಾರ್ಗವ ಕಟ್ಟಿದರೆಲ್ಲ
ಕರಣವೃತ್ತಿಗಳು ತಗ್ಗಿತು ಎಲ್ಲ ಕೋಟೆ
ಜರಿದು ಹೋಯಿತು ಸುತ್ತಲು ಎಲ್ಲ 2
ಕಾಲು ಕೈಗಳ ಧಾತು ತಪ್ಪಿತು ನುಡಿದ
ನಾಲಗೆ ಹಿಂದಕೆ ಸರಿಯಿತು
ಕಣ್ಣಾಲಿಯೊಳಗೆ ನೀರು ಉಕ್ಕಿತು ವಸ್ತು
ಗಾಳಿಯೊಳಗೆ ಮಾಯವಾಯಿತು 3
ಮಡದಿ ಮಕ್ಕಳಿಗೆಲ್ಲ ಹೊಡೆದಾಟ ಬಲಕೆ
ಎಡಕೆ ಹೊರಳದಿರಿ ಎನುವಾಟ ಕಿಚ್ಚಿ
ಯೊಡನೆ ಗೂಡನು ಸುಡುವಾಟ ಕೆಲವು
ಕಡೆಯವರೆಲ್ಲ ತೆರಳುವಾಟ 4
ಹೇಳದ ಯಮದೂತರಿಗಂದು ಕಡು
ಖೂಳ ಪಾಪಿಗಳೆಳತಹುದೆಂದು ಲಕ್ಷ್ಮೀ
ಲೋಲ ನಾಳು ಗಳಮುಟ್ಟದಿರೆಂದು
ತನ್ನಾಳಿಗೆ ಕಟ್ಟು ಮಾಡಿದನಂದು 5