ಎಷ್ಟೆಂದು ಪೇಳುವೆನು ನಮ್ಮುಡುಪಿಯ
ಕೃಷ್ಣನÀ ಮಹಿಮೆಯನು
ಅಷ್ಟೋತ್ತರ ಶತಯೀರೆಂಟು ಸಾವಿರ
ಶ್ರೇಷ್ಠ ಮಹಿಷಿಯರ ಸೇವೆ ಕೈಗೊಂಬುದ ಪ.
ದ್ವಾರಕೆಯೊಳಗೆ ನೆಲೆ ತೋರುತಲಿದ್ದು
ಸ್ವಾರಿ ಹೊರಟ ಮೇಲೆ
ಕಾರುಣ್ಯನಿಧಿ ಕಡಲೊಳು ಬಂದು ಕಮಲಾಸ-
ನಾರೂಹನಾಗುವ ನರಯತಿಯನು ಕಂಡು
ಘೋರತರ ಸಂಸಾರಕೂಪವ
ಸೇರಿ ಬಳಲುವ ಸಕಲಸುಜನೋ-
ದ್ಧಾರ ಮಾಡುವೆನೆಂದು ಮೂರ್ತಿಯ
ತೋರುತಿಲ್ಲಿಹ ತ್ರಿಭುವನೇಶನ 1
ಪಾಪಿಷ್ಠ ಕಲಿಯಾಳುತ್ತಿರುವ
ಕಾಲದಲಿ ಸ್ತ್ರೀ
ರೂಪದಿಂದಲಿ ಪೂಜೆಯ ಕೊಳಲು ಸುಜ-
ನಾಪವಾದದ ಭೀತಿಯ ತಾನೆನಸಿ ಮನದಲಿ
ಕಾಪುರುಷನನು ಕಣ್ಣ ಕಟ್ಟಿ
ಮಹಾಪರಾಧಿಗಳೊಳಗೆ ಸೇರಿಸಿ
ಭೂಪತಿಗಳಲ್ಲಿರುವ ಯತಿವರ
ರೂಪರೊಡನಾಡುವ ಪರಾತ್ಮನ 2
ಪಾಂಡುಕುಮಾರರು ಪರಿಯಾರು ಕ್ರಮದಿಂದ
ಹೆಂಡತಿಯಾಳ್ದರೆಂದು ದೂಷಿಸುವರ
ಕಂಡು ತಾ ಮನಕೆ ತಂದು ಕಾರುಣ್ಯ ಸಿಂಧು
ಕುಂಡಲೀಂದ್ರ ಗಿರೀಂದ್ರ ನಿಜಪದ
ಪುಂಡರೀಕ ಛಾಯಗಳ ಮತಿ-
ವತ್ಸರ ದ್ವಯ
ಖಂಡನೆ ಕೈಕೊಂಡು ಮೆರಪನ 3