ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪ್ರೆಮಾಂಬುಧಿ ಶುಭದಾಯಕ ಜಯ ಜಯ 1 ಪ್ರಹ್ಲಾದಾವರ ಜಾತನೆ ಜಯಯ ಶಲ್ಯ ನೃಪಾಲಕ ಯೋಧನೆ ಜಯ ಜಯ 2 ಪುರುಹೂತಾರ್ಯ ಪೋತನೆ ಜಯ ಜಯ ಮರುತ ಪದಾರ್ಹರ ಪ್ರೀತನೆ ಜಯ ಜಯ 3 ನರಸಿಂಹಾರ್ಯರ ಪುತ್ರನೆ ಜಯ ಜಯ ಗುರುವರದೇಂದ್ರರ ಛಾತ್ರನೆ ಜಯ ಜಯ 4 ತುರುರಕ್ಷಕ ವಿಜಯಾರ್ಯರ ಜಯ ಜಯ ಕರುಣ ಪೂರ್ಣ ಪಡೆದಾತನೆ ಜಯ ಜಯ 5 ಪಂಕಜವೈರಿಯ ಭಾಗದಿ ಜಯ ಜಯ ಅಂಕಿತ ಪಡೆದ ಅಕಳಂಕನೆ ಜಯ ಜಯ 6 ಪಂಢರಿನಾಥನ ಮೂರುತಿ ಜಯ ಜಯ ಕಂಡು ಕೊಂಡಾಡಿದ ಧೀರನೆ ಜಯ ಜಯ 7 ರಂಗವಲಿದ ದಾಸ್ತೋತಮ ಜಯ ಜಯ ತುಂಗ ಮಹಿಮ ಶುಭಾಂಗನೆ ಜಯ ಜಯ 8 ನತಜನ ತತಿ ಮಂದಾರನೆ ಜಯ ಜಯ ಕೃತ ಹರಿಕಥಾಸುಧೆ ಸಾರವ ಜಯ ಜಯ 9 ಮೂಕರ ಮುಖದಿಂ ಕರುಣದಿ ಜಯ ಜಯ ವಾಕು ಪೇಳಿಸಿದ ಗುಣನಿಧಿ ಜಯ ಜಯ 10 ಮಾನವಿ ಮಂದಿರ ಮಾನಿತ ಜಯ ಜಯ ಕ್ಷೋಣಿ ವಿಬುಧ ಗಣ ಸೇವಿತ ಜಯ ಜಯ 11 ಕುಂಭಿಣಿನಾಥ ದಾಸಾಗ್ರಣಿ ಜಯ ಜಯ ನಂಬಿದೆ ನಿನ್ನ ಪದಾಂಬುಜ ಜಯ ಜಯ 12 ಸಾಧು ವರಿಯ ಪ್ರಹ್ಲಾದನೆ ಜಯ ಜಯ ಭೇದಜ್ಞಾನ ಸುಬೋಧಕ ಜಯ ಜಯ 13 ಭೂಸುರ ಕುಮುದಕೆ ಭೇಶನೆ ಜಯ ಜಯ ಭಾಸುರ ಸ್ತಂಭ ನಿವಾಸನೆ ಜಯ ಜಯ 14 ಪವನಾಗಮ ಪ್ರವೀಣನೆ ಜಯ ಜಯ ಸನ್ನುತ ಮಹಿಮನೆ ಜಯ ಜಯ 15 ತಂದೆ ನಮಗೆ ನೀನೆಂದಿಗು ಜಯ ಜಯ ಕುಂದು ಕ್ಷಮಿಸಿ ದ್ವಿಜ ವಂದ್ಯನೆ ಜಯ ಜಯ 16 ಕಂಸಾರಿಯ ಪ್ರೀಯ ಸಾಂಶನೆ ಜಯ ಜಯ ಭವ ಹಿಂಸೆಯ ಜಯ ಜಯ 17 ನಿನ್ನ ತಾಣ ಸುಕ್ಷೇತ್ರವು ಜಯ ಜಯ ನಿನ್ನ ಕವನ ಶೃತ್ಯರ್ಥವು ಜಯ ಜಯ 18 ಕಲುಷ ಕುಲಾದ್ರಿಗೆ ಕುಲಿಶನೆ ಜಯ ಜಯ ವಲಿದು ಕರಪಿಡಿದು ಸಲಹೈ ಜಯ ಜಯ 19 ಆರ್ತರಿಷ್ಟಾರ್ಥವ ಸಲಿಸಲು ಜಯ ಜಯ ಸ್ವಾರ್ಥರಹಿತರಿಗೆ ಕೀರ್ತಿಯು ಜಯ ಜಯ 20 ಎನ್ನವವ ಚನವಿದಲ್ಲವು ಜಯ ಜಯ ನಿನ್ನನು ಭವಕಿದು ಬಂದದು ಜಯ ಜಯ 21 ಮಂದ ಬುದ್ಧಿಯಲಿ ನಿಮ್ಮನು ಜಯ ಜುಯ ನಿಂದಿಪ ಮನುಜ ದಿವಾಂಧನು ಜಯ ಜಯ 22 ಧರ್ಮದ ಮಾರ್ಗವ ತೋರಿಸು ಜಯ ಜಯ ಕರ್ಮಜ ದೇವನೆ ಕೈಪಿಡಿ ಜಯ ಜಯ 23 ಅನಿಲ ಮತಾಂಬುಧಿ ಮೀನನೆ ಜಯ ಜಯ ಪ್ರಣತಾಮರಮಣಿಧೇನುವೆ ಜಯ ಜಯ 24
--------------
ಶಾಮಸುಂದರ ವಿಠಲ
ಸುವ್ವಿಮಟ್ಟು ಶರಣು ರಾಘವೇಂದ್ರ ಗುರುವೆ ಶರಣು ವ್ಯಾಸರಾಜ ಪ್ರಭವೆ ಶರಣು ನಾರಸಿಂಹ ಭಕ್ತ ಶರಣು ಶರಣು ಶಂಕು ಕರ್ಣನೆ ಪ ನಿರುತ ನಿಮ್ಮ ಚರಣ ಕಮಲ ಗೆರಗಿ ಎರಗಿ ಬೇಡಿ ಕೊಂಬೆ ದುರಿತ ರಾಶಿ ಭರದಿ ಹರಿಯ ಕರುಣ ಕೊಡಿಸು ಕರುಣಿಯೆ ಅ.ಪ ವಿಧಿಯ ಶಾಪ ಧರಿಸಿ ಮುದದಿ ಉದಿಸಿ ಬಂದು ದೈತ್ಯ ಕುಲದಿ ಹೃದಯ ಗತನೆ ವಿಶ್ವವ್ಯಾಪ್ತ ಪದುಮನಾಭನೆಂದು ತೋರ್ದೆಹೋ ಬುಧರ ಮಕುಟ ಭಕ್ತಿ ಶರಧಿ ಮದನ ತೇಜ ಬೋಧ ಮಧ್ವ ಚೇಲ ತ್ರಿದಶ ಮಾನ್ಯ ಪ್ರಹ್ಲಾದ ಬಾಹ್ಲೀಕ 1 ತುಳಿದು ಶೃತಿ ವಿರೋಧ ಬೋಧೆ ಸುಜನ ತತಿಯ ಸುಮತಿ ಚಲುವ ಕುವರ ನೆನಿಸಿ ಬಂದೆ ಹೋ ಬಲಿಸಿ ಕೃಷ್ಣನನ್ನು ಕುಣಿಸಿ ಬಲಿಸಿ ವಾಯು ಮತವ ಮೆರಸಿ ಒಲಿದು ನೃಪಗೆ ರಾಜ್ಯವಾಳಿ ಹಳಿದೆ ವಿಧುವ ಕೀರ್ತಿ ವಿಭವದಿ 2 ಮತ್ತೆ ಬಂದೆ ರಾಘವೇಂದ್ರ ಹತ್ತು ಆರು ಮತ್ತೆ ನಾಲ್ಕು ಮೊತ್ತ ಕಲೆಗಳೆಲ್ಲ ಬಲ್ಲ ಸತ್ಯ ಪ್ರಾಣ ಶಾಸ್ತ್ರ ಮೆಲ್ಲನೆ ಎತ್ತ ಸಾಟಿ ಕಲ್ಪವೃಕ್ಷ ನಿತ್ಯ ವಿವಿಧ ಮಹಿಮೆ ತೋರ್ಪೆ ಇತ್ತು ಪೊರೆವೆ ಜನರ ಬಿಢೆಯ ವಿತ್ತ ನೀಡು ಭೃತ್ಯಗೆ 3 ನಾರಸಿಂಹ ವೇದ ವ್ಯಾಸ ಮೂರುತೀಶ ರಾಮಚಂದ್ರ ಸೂರಿಗಮ್ಯ ಕೃಷ್ಣ ದೇವ ಸುರರು ಎಲ್ಲರು ಸೇರಿ ನಿಮ್ಮ ನಡಿಸಿ ಕಾರ್ಯ ಸೂರೆ ಗೈಸುತಿರಲು ಕೀರ್ತಿ ಪಾರವಿಲ್ಲ ಮಹಿಮೆಗೆಂಬೆ ಈರ ಪಿತನ ಕರುಣ ಭೂಷಿತ 4 ರಾಘವೇಂದ್ರ ನಿಮ್ಮ ನಾಮ ಯೋಗ್ಯ ಜಪಿಸೆ ಭಕ್ತಿಯಿಂದ ಶ್ರೀಘ್ರನಾಶ ಅಘಸಮೂಹ ಹಾಗೆ ಸಿದ್ಧಿ ವಾಂಛಿತಂಗಳು ಯೋಗ ಸಿದ್ಧಿ ಭೋಗ ಸಿಧ್ಧಿ ಯೋಗ ಪತಿಯ ಭಕ್ತಿ ಸಿಧ್ಧಿ ಬೇಗ ಪಡೆದು ಕ್ರಮದಿ ಭವದ ಬೇಗ ನೀಗಿ ಮುಕ್ತಿ ಕಾಂಬುವ 5 ದಾನ ಗೈದನಿಷ್ಟ ಪುಣ್ಯ ಸುಜನ ಶಿಷ್ಯ ತತಿಗೆ ಶ್ರೀನಿವಾಸನನ್ನು ಯಜಿಪ ದಾನ ಶೌಂಡ ನಿಮಗೆ ಸಾಟಿಯ ಕಾಣೆ ಕಾಣೆ ಸತ್ಯ ಸತ್ಯ ನಾನು ಮೂಢ ಪಾಪಿ ಕೃಪಣ ಏನು ಸೇವೆ ಮಾಡಲಾಪೆ ಕಾಯ ಬೇಕೆಂಬೆ 6 ನಿನ್ನ ನೆನೆದ ಮಾತ್ರಕಿನ್ನು ಅನ್ನ ವಸನ ಎಲ್ಲ ಸಿಧ್ಧ ಹೊನ್ನು ಹೆಣ್ಣು ಮಣ್ಣು ಮಿಷಯ ನಿನ್ನ ಕೇಳ್ವ ಜ್ಞಾನಿ ಆಹನೆ ಮನ್ನಿಸೆನ್ನ ದೋಷರಾಶಿ ನಿನ್ನ ಶಿಷ್ಯನೆಂದು ಗ್ರಹಿಸು ಮನ್ನ ಮಾಡು ಭವವ ಬೇಗ ಕಣ್ಣು ನೀಡು ಜ್ಞಾನ ದೆಂಬುವೆ 7 ಜಯ ಸುಧೀಂದ್ರ ಪ್ರೇಮ ಪುತ್ರ ಜಯ ವಿಜೀಂದ್ರವರ ಸುಪೌತ್ರ ಜಯ ಜಯೇಂದ್ರ ಕರುಣ ಪಾತ್ರ ಜಯ ಕವೀಂದ್ರ ಮಧ್ವ ಛಾತ್ರನೆ ಜಯ ಭವಾಭ್ದಿ ಪೋತ ಚರಣ ಜಯ ದಯಾಭ್ದೆ ಸುಗುಣ ಕೋಶ ಜಯ ಯತೀಂದ್ರ ಕಾಮಧೇನು ಜಯವು ಜಯವು ಜ್ಞಾನ ಭಾಸ್ಕರ 8 ಸತ್ಯಸಂಧ ಸತ್ಯ ಸ್ತಂಭ ಭೃತ್ಯ ಸತ್ಯ ವೇತ್ತ ಸತ್ಯನಾಥ ನೊಲಿ ಮೆಯಿಂದ ನಿತ್ಯ ಕಾಂಬನೆ ಸತ್ಯ ಮಾತೆ ಸಿರಿಯ ನಾಳ್ವ ಮುಕ್ತಿದಾತ ಕೃಷ್ಣವಿಠಲ ಚಿತ್ತದಲ್ಲಿ ಸುಳಿಯಲೆಂಬಭೃತ್ಯ ಬಯಕೆ ಸತ್ಯ ಮಾಡ್ಪ್ರಭೋ 9
--------------
ಕೃಷ್ಣವಿಠಲದಾಸರು