ಮಾತನಾಡೈ ಮನ್ನಾರಿ ಕೃಷ್ಣ ಮಾತನಾಡೈ ಪ
ದಾತನು ನೀನೆಂದು ಬಯಸಿ ಬಂದೆನು ಮಾತನಾಡೈಅ.ಪ.
ಸಿರಿ ಪೊಂಗೊಳಲೊ ಜಗ-|
ದಾಧಾರದ ನಿಜ ಹೊಳೆಯೋ ||
ಪಾದದ ಪೊಂಗೆಜ್ಜೆ ಥಳಿಲೊ ಸರ್ವ |
ವೇದಗಳರಸುವ ಕಲ್ಪಕ ಸೆಳಲೊ 1
ಕಸ್ತೂರಿ ತಿಲಕದ ಮದವೊ ಮ-
ಕುಟ ಮಸ್ತಕದಿ ಝಗಝಗವೊ ||
ವಿಸ್ತರದಿ ಪೊತ್ತ ಜಗವೊ ಪರ- |
ವಸ್ತುವು ನಂದ ಯಶೋದೆಯ ಮಗುವೊ 2
ನವನೀತವ ಪಿಡಿದ ಕರವೊ ನವ-|
ನವ ಮೋಹನ ಶೃಂಗಾರವೊ ||
ಅವತರಿಸಿದ ಸುರತರುವೊ ಶತ-
ರವಿಯಂದದಿ ಉಂಗುರವಿಟ್ಟ ಭರವೊ 3
ಆನಂದ ಜ್ಞಾನದ ಹೃದವೊ ಶುಭ-|
ಮಾನವರಿಗೆ ಬಲು ಮೃದುವೊ ||
ಆನನ ಛವಿಯೊಳು ಮಿದುವೊ ಪಾಪ-|
ಪಾವಕ ಪದವೊ 4
ತ್ರಿಜಗದಧಿಕ ಪಾವನನೊ ಪಂ-|
ಕಜ ನೇತ್ರೆಯ ನಾಯಕನೊ ||
ಅಜಭವಾದಿಗಳ ಜನಕನೊ ನಮ್ಮ |ವಿಜಯವಿಠ್ಠಲ ಯದುಕುಮಾರಕನೊ 5