ಕಂಡೆ ಗುರುರಾಯನಾ ಸುರಮನೋಪ್ರಿಯನಾ ಪ
ತೊಂಡವತ್ಸಲ ಧರ - ದಂಡ ಕಮಂಡಲ
ಪಂಡಿತಾಗ್ರಣಿಗಳೊಳು - ದ್ದಂಡ ಮಹಿಮನ ಅ.ಪ
ಮಣಿ ವಿಭವಾ
ವ್ರತತಿಜೋಪಮ ಯುಗನಯನ ಸಂಪಿಗಿನಾಸವಾ
ಕಪೋಲ ಯುಗ ಭಾಸವಾ
ವದನಾಬ್ಜದೊಳೊಪ್ಪುವ ಕಿರಿಹಾಸವಾ ಹಾ-ಹಾ- ಹಾ 1
ಕುಂದ - ಕುಟ್ಮಿಲ - ದಂತ ಪಂಕ್ತಿಯಾ ಅರುಣ
ಪೊಂದಿ ಪೊಳೆವೊದದರ ಛವಿಯಾ
ಸುಂದರ ದರೋಪಮ ಕಂಧರಾಂಕಿತ ಬಾಹುದಂಡವಾ
ಭುಜದಳೊಪ್ಪುವ ಮುದ್ರನಾಮವ
ಹೃದಯ - ಮಂಡಲ ಮುದ್ರನಾಮವ ಹಾ-ಹಾ-ಹಾ 2
ಚಲುವ ಸುಳಿನಾಭೀ ಪುಳಿನ ಪೋಲುವೊ ನಿತಂಬವಾ
ಕದಳಿ ಸ್ತಂಭವಾ
ಮಾಡುವ ಚರ್ಯ ವಿಡಂಬವಾ ಹಾ - ಹಾ - ಹಾ 3
ಕರಿರದೋಪಮ ಜಂಘೆಗಳಾ - ಗುಲ್ಫ
ವರರತ್ನ ಪಾದಾಂಗುಲಿ ಸಂಫÀಗಳ
ಸ್ಮರಿಸುವೊ ಜನರಿಗೆ ಸುರವರತರು ಪೋಲುವಾ
ದುರಿತ ನಿರುತ ನೀಡುವೋ ನಭೀಷ್ಟವಾ
ಭಕುತರೊಳಗೆ ತಾನಾಡುವಾ ಹಾ - ಹಾ - ಹಾ 4
ನೀತ ಗುರುಜಗನ್ನಾಥಾ ವಿಠಲಪಾದ
ಪ್ರೀತಿಪೂರ್ವಕ ಭಜಿಸುತ
ಭೂತ ಪ್ರೇತದ ಭಾಧೆUಳನೆಲ್ಲ ಕಳೆಯುವಾ
ಸಕಲ ಸೌಖ್ಯನೀಡುವಾ
ನಂಬಿದರೀತ ಪೊರೆಯುವಾ
ತೋರಿಪನಾಗಯ್ಯ ಮಹಿಮವಾ ಹಾ - ಹಾ - ಹಾ 5