ಒಟ್ಟು 7 ಕಡೆಗಳಲ್ಲಿ , 6 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂಡೆ ಗುರುರಾಯನಾ ಸುರಮನೋಪ್ರಿಯನಾ ಪ ತೊಂಡವತ್ಸಲ ಧರ - ದಂಡ ಕಮಂಡಲ ಪಂಡಿತಾಗ್ರಣಿಗಳೊಳು - ದ್ದಂಡ ಮಹಿಮನ ಅ.ಪ ಮಣಿ ವಿಭವಾ ವ್ರತತಿಜೋಪಮ ಯುಗನಯನ ಸಂಪಿಗಿನಾಸವಾ ಕಪೋಲ ಯುಗ ಭಾಸವಾ ವದನಾಬ್ಜದೊಳೊಪ್ಪುವ ಕಿರಿಹಾಸವಾ ಹಾ-ಹಾ- ಹಾ 1 ಕುಂದ - ಕುಟ್ಮಿಲ - ದಂತ ಪಂಕ್ತಿಯಾ ಅರುಣ ಪೊಂದಿ ಪೊಳೆವೊದದರ ಛವಿಯಾ ಸುಂದರ ದರೋಪಮ ಕಂಧರಾಂಕಿತ ಬಾಹುದಂಡವಾ ಭುಜದಳೊಪ್ಪುವ ಮುದ್ರನಾಮವ ಹೃದಯ - ಮಂಡಲ ಮುದ್ರನಾಮವ ಹಾ-ಹಾ-ಹಾ 2 ಚಲುವ ಸುಳಿನಾಭೀ ಪುಳಿನ ಪೋಲುವೊ ನಿತಂಬವಾ ಕದಳಿ ಸ್ತಂಭವಾ ಮಾಡುವ ಚರ್ಯ ವಿಡಂಬವಾ ಹಾ - ಹಾ - ಹಾ 3 ಕರಿರದೋಪಮ ಜಂಘೆಗಳಾ - ಗುಲ್ಫ ವರರತ್ನ ಪಾದಾಂಗುಲಿ ಸಂಫÀಗಳ ಸ್ಮರಿಸುವೊ ಜನರಿಗೆ ಸುರವರತರು ಪೋಲುವಾ ದುರಿತ ನಿರುತ ನೀಡುವೋ ನಭೀಷ್ಟವಾ ಭಕುತರೊಳಗೆ ತಾನಾಡುವಾ ಹಾ - ಹಾ - ಹಾ 4 ನೀತ ಗುರುಜಗನ್ನಾಥಾ ವಿಠಲಪಾದ ಪ್ರೀತಿಪೂರ್ವಕ ಭಜಿಸುತ ಭೂತ ಪ್ರೇತದ ಭಾಧೆUಳನೆಲ್ಲ ಕಳೆಯುವಾ ಸಕಲ ಸೌಖ್ಯನೀಡುವಾ ನಂಬಿದರೀತ ಪೊರೆಯುವಾ ತೋರಿಪನಾಗಯ್ಯ ಮಹಿಮವಾ ಹಾ - ಹಾ - ಹಾ 5
--------------
ಗುರುಜಗನ್ನಾಥದಾಸರು
ಕರುಣಿಸೆ ಕೋಮಲ ಗಾತ್ರೆ ಕಂಜಜಮಾತೆ ಪ ಸುರರು ನಲಿಯುತ ಶಿರವ ಬಾಗಿ ಕರವ ಮುಗಿಯಲು ಪರಮ ಹರುಷದಿ ವರವ ಕೊಡುತಿಹ ಹರಿಯ ಮಡದಿಯೆ ಅ.ಪ. ಕ್ಷೀರವಾರಿಧಿ ತನಯೆ ನಿನ್ನಯ ದೇಹ ಬೀರುತಿದೆ ವಿದ್ಯುಛ್ಛವಿಯೆ ಶ್ರೀ ಹರಿಜಾಯೆ ವರ ಸುದರ್ಶನ ಶಂಖಹಸ್ತದಿ ಮೆರೆಯುತಿರೆ ಭಕುತರನು ಸಲಹಲು ಕರವೀರಪುರ ನಿಲಯದಿ ನೆಲಸಿ ವರದಭಯ ಹಸ್ತವ ತೋರುತಿರ್ಪೆ 1 ಮನಸಿಜಕೋಟಿ ಸುರೂಪಿಣಿ ಮೃದುಮಧುರ ವಾಣಿ ಧನಕನಕಾದಿಗಳಭಿಮಾನಿ ಕೈವಲ್ಯದಾಯಿನಿ ವನಜಸಂಭವೆ ನಿನ್ನ ಒಂದರೆ- ಕ್ಷಣವು ಬಿಡದಲೆ ತನ್ನ ಉರದೊಳು ದನುಜಮರ್ಧನ ಧರಿಸಿಕೊಂಡು ತನುವು ಮನವನು ನಿನಗೆ ತೆತ್ತಿಹ 2 ರಂಗೇಶವಿಠಲನ ರಾಣಿ ಪಂಕಜಪಾಣಿ ಡಿಂಗರೀಕರ ಪೊರೆವ ಕರುಣಿ ಕಾಳಾಹಿವೇಣಿ ಮಂಗಳಾಂಗಿಯೆ ಖೂಳ ಕುಜನರ ಸಂಗಬಿಡಿಸುತ ತವ ಪದ ಸರೋ ಜಂಗಳಲಿ ನಾ ನಲಿದು ವಿಹರಿಪಭೃಂಗನಾಗುವ ಪರಿಯ ತೋರೆ 3
--------------
ರಂಗೇಶವಿಠಲದಾಸರು
ಜೋಗಿಯ ನೋಡಿರೇ ತಾಪಸ ಯೋಗಿಯ ನೋಡಿರೇ ಆಗಮನುತ ಗುಣಸಾರಸ್ವಾನಂದಶರವಾ ಭುವನದಿಮೆರವಾ ಪ ಗಿರಿಜೇಶನು ಧರಿಸಿಹ ರುಂಡಮಾಲಾಕೃತಿಯೋ ; ವಿದ್ಯುಲ್ಲತಿಯೋ ಭೂಷಣವೋ ; ತಾರಾಗಣವೋ 1 ಶ್ರೀ ಮಹಾದೇವನ ನಂಜು ಗೊರಳಠವಠವಿಯೋ : ಮೇಘ ಚ್ಛವಿಯೋ ತರಣಿಯ ಸದನೋ ಕಾಮಶಲಭನುಹಿದ ಭಾಲಾಕ್ಷದ ಇರವೋ; ದೀಪಾಂಕುರವೋ; ವ್ಯೋಮನದಿಯ ಆವರಿಸಿಹ ಭವನ ಕಂಜೆಡಿಯೋ: ಹವಳದ ಕುಡಿಯೋ 2 ಕರ ಡಮರದ ನಾದಸ್ಪರಣೋ : ಘನವ್ಯಾಕರಣೋ: ಕರ್ಪುರ ಗಿರಿಯೋ; ಸುರಕುಜ ಪರಿಯೋ: ಗುರವರ ಮಹಿಪತಿ ನಂದನ ತಾರಕ ಶಿವನೋ: ನಿಜ ಬಾಂಧವನೋ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೀಲವರ್ಣ ವಿಠಲ ನಾ ನಿನ್ನ ಮೆಚ್ಚಿದೆ ಎನ್ನಪಾಲಿಸಯ್ಯ ಪರಮಪಾವನ್ನ ಮೆಚ್ಚಿದೆ ಪ. ಶರಧಿ ಲೋಚನಕೆ ಭಯ ನಿನ್ನವರ ನೀಲೋತ್ಪಲದೀ ವಕ್ಷದೊಳ್ ಘಾಯಸ್ಮರನ ಧಾಳಿಗೆ ಕಡುನೊಂದೆನೊ ಪ್ರಿಯಾ ನಿನ್ನಕರುಣಕವಚವನ್ನು ತೊಡಿಸೊ ಜೀಯ 1 ಪಾದ ಬಾಲರವಿಯ ನಿನ್ನತರಳಲೋಚನಕೆ ಮುಖೇಂದು ಛವಿಯಗುರುಮಾಡಿ ಸಲಹಯ್ಯ ಸಿರಿದೇವಿಯ ಎನ್ನೊಡನೆವರವ[ಪಡೆವೆನು] ನಿನ್ನಂಘ್ರಿಸೇವೆಯ 2 ಮುನಿಜನ ಮನಕೆ ಸಿಲುಕದಿಪ್ಪನ ಎನ್ನಮನೆಗೆ ಬಾರೆಂಬುದುಚಿತವಲ್ಲ ನಿನ್ನಅನಿಮಿತ್ತ ಬಂಧುವೆ ನೀ ದಯಾಸಂಪನ್ನಎನ್ನಿನಿಯ ಬಾರಯ್ಯ ನೀನು ಹಯವದನ್ನ 3
--------------
ವಾದಿರಾಜ
ಮಾತನಾಡೈ ಮನ್ನಾರಿ ಕೃಷ್ಣ ಮಾತನಾಡೈ ಪ ದಾತನು ನೀನೆಂದು ಬಯಸಿ ಬಂದೆನು ಮಾತನಾಡೈಅ.ಪ. ಸಿರಿ ಪೊಂಗೊಳಲೊ ಜಗ-| ದಾಧಾರದ ನಿಜ ಹೊಳೆಯೋ || ಪಾದದ ಪೊಂಗೆಜ್ಜೆ ಥಳಿಲೊ ಸರ್ವ | ವೇದಗಳರಸುವ ಕಲ್ಪಕ ಸೆಳಲೊ 1 ಕಸ್ತೂರಿ ತಿಲಕದ ಮದವೊ ಮ- ಕುಟ ಮಸ್ತಕದಿ ಝಗಝಗವೊ || ವಿಸ್ತರದಿ ಪೊತ್ತ ಜಗವೊ ಪರ- | ವಸ್ತುವು ನಂದ ಯಶೋದೆಯ ಮಗುವೊ 2 ನವನೀತವ ಪಿಡಿದ ಕರವೊ ನವ-| ನವ ಮೋಹನ ಶೃಂಗಾರವೊ || ಅವತರಿಸಿದ ಸುರತರುವೊ ಶತ- ರವಿಯಂದದಿ ಉಂಗುರವಿಟ್ಟ ಭರವೊ 3 ಆನಂದ ಜ್ಞಾನದ ಹೃದವೊ ಶುಭ-| ಮಾನವರಿಗೆ ಬಲು ಮೃದುವೊ || ಆನನ ಛವಿಯೊಳು ಮಿದುವೊ ಪಾಪ-| ಪಾವಕ ಪದವೊ 4 ತ್ರಿಜಗದಧಿಕ ಪಾವನನೊ ಪಂ-| ಕಜ ನೇತ್ರೆಯ ನಾಯಕನೊ || ಅಜಭವಾದಿಗಳ ಜನಕನೊ ನಮ್ಮ |ವಿಜಯವಿಠ್ಠಲ ಯದುಕುಮಾರಕನೊ 5
--------------
ವಿಜಯದಾಸ
ಸರಸ್ವತಿ ಮಂಗಳಾರುತಿಯನೆತ್ತೀರೆ ವಾರಿಜಭವಮುಖಿಗೆ ಮಂಗಳಾರುತಿಯನೆತ್ತೀರೆ ಪ ಇಂದು ಬಿಂಬ ಸದೃಶ ವದನೆಗೆ ಲಾವಣ್ಯ ಖಣಿಗೆ ಅಂದ ಕುಂಕುಮಭೂಷಿತ ಫಣೆಗೆ ಹರಿದ್ರ ಭೂಷೆಗೆ ಸಂದ ಮೌಕ್ತಿಕ ಚಂಪಕ ನಾಸಿಕೆಗೆ ಚಂದ ಕರುಣಾಭರಣ ಭೂಷಿತೆಗೆ ಚಾಪ ಇಂದು ಛವಿಯ ಕಿರೀಟ ಭೃತೆಗೆ ಹಿಂದೆ ಜೋಲ್ವ ಕನಕವೇಣಿಗೆ ಮಂಗಳಾರುತಿಯನೆತ್ತಿರೆ 1 ಚಾರುವಸನ ಭೂಷಿತಾಂಗೆಗೆ ವಿದ್ಯುತ್ಸುಕಾಂತೆಗೆ ಹಾರಪದ ಶÀಮಿರೂಪ ಕಂಠೆಗೆ ಸುಕಂಬು ಶ್ರೀದೇವಿಗೆ ಸಾರ ವೇದಾಂಗ ಭೂತೆಗೆ ನೀರಜ ಪಲ್ಲವಗಾತ್ರೆಗೆ ಸಾರಸಾಕ್ಷಿ ಶಿರಿವಂತೆಗೆ ಮಂಗಳಾರುತಿಯನೆತ್ತಿರೆ2 ಕರದಿ ವೀಣೆ ಧರಿಪ ದೇವಿಗೆ ಪಾವನ್ನಗಾತ್ರೆಗೆ ಧರೆಯ ಸೃಷ್ಟಿಕರ್ತನರಸಿಗೆ ಮಂಗಳ ವಾಣಿಗೆ ಪರಿಪರಿಯಲಂಕಾರ ಭೂಷಿತೆಗೆ ಸರಸ ಕೋಮಲ ಪದ್ಮಪಾತೆಗೆ ಮರಕತಭೂಷಣ ಭಾಸೆಗೆ ನಿರುತ ಜನಕೆ ವಿದ್ಯಪ್ರದೆಗೆ ನರಸಿಂಹವಿಠ್ಠಲನ ಬಾಲೆಗೆ ಮಂಗಳಾರುತಿಯನೆತ್ತಿರೆ 3
--------------
ನರಸಿಂಹವಿಠಲರು
ಹೊಂದಿ ಸುಖಿಸಿನೆರೈಯ್ಯ ನಮ್ಮ ದೇವ ದೇವನಂ | ತಂದೆ ಮಹಿಪತಿ - ಜಪಾಲ ಭಕ್ತ ಜೀವ ಜೀವನಂ ಪ ತೋರ್ಪಕರ್ಪೂರಗಂಗಛವಿಯ | ಸರ್ಪ ಅರ್ಪಿತಾಂಕ ಕಂಠ | ದಿರ್ಪ ಸರ್ಪ ಭೂಷಕಂ - ದರ್ಪ ದರ್ಪ ನಾಶನು 1 ಸ್ಥೈರ್ಯಧೈರ್ಯ ವೀರ್ಯೋದಾರ್ಯ | ವರ್ಯ ಚರ್ಯದೋರಿ ಜನಕ | ಕಾರ್ಯ ಕಾರ್ಯನರ ಹಿಸುವಾ | ಆರ್ಯ ರಾರ್ಯ ಸಾಂಬನಂ | 2 ಕಾಲಕಾಲ ಶಂಭುರಜತ | ಶೈಲವಾಲಯನಿಸಿ ಗಿರಿಜೆ | ನೀಲ ಲೋಹಿತಂಕ | ಪಾಲಿಶೂಲಿ ಶರ್ವನಂ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು