ಧ್ಯಾನವಿರಲಿ ಗುರುವೆ ನಿನ್ನಯಧ್ಯಾನವಿರಲಿ ಗುರುವೆನಿನ್ನ ನಿತ್ಯಾ ಕಾಲದಿ ಪದಧ್ಯಾನದೊಳಗೋಲಾಡುವಂತೆ ಗುರು ಚಿದಾನಂದ ಎಂಬ ಪ
ಗಿರಿಯೊಳಿರಲಿ ಧರೆಯೊಳಿರಲಿಗಿರಿಯ ಗುಹೆಯ ಗೃಹದೊಳಿರಲಿಪುರದೊಳಿರಲರಣ್ಯಗಳೊಳುಚರಿಸುತಿರಲಿ ಮರೆಯದೇ 1
ಮರದೊಳಿರಲಿ ಮುಳ್ಳೊಳಿರಲಿಕೆರೆಯ ತೀರ್ಥ ಕ್ಷೇತ್ರದೊಳಿರಲಿಹರವು ಹಳ್ಳ ಕೊಳ್ಳಗಳೊಳುಹರಿವುತಿರಲಿ ಮರೆಯದೆ2
ಹಸಿವೆಯಿರಲಿ ತೃಷೆಯೊಳಿರಲಿಬಿಸಿಲು ಮಳೆ ಛಳಿಗಳೊಳಿರಲಿವಿಷಯ ವ್ಯಾಧಿ ಕಂಟಕಗಳೊಳ್ವಿಷಮವಿರಲಿ ಮರೆಯದೇ 3
ನಡೆವುತಿರಲಿ ಎಡವುತಿರಲಿನಡೆಯಲಾರದೆ ಕೆಡೆಯುತಿರಲಿಕಡುವಿರೋಧದಿಂ ಕುವಾದತಡೆಯುತಿರಲಿ ಮರೆಯದೆ 4
ಹೆಂಡೆಲಿಡಲಿ ಹೆಂಟೆಲಿಡಲಿಕಂಡ ಕಂಡದರಲಿಡಲಿಭಂಡ ಮನುಜರವರು ಏನುಮಾಡುತಿರಲಿ ಮರೆಯದೇ5
ನಿನ್ನ ಧ್ಯಾನ ಷಟ್ಸಮಾಧಿನಿನ್ನ ಧ್ಯಾನ ಮುಕ್ತಿ ನಿಲಯನಿನ್ನ ಧ್ಯಾನಕಧಿಕವಿಲ್ಲ ನಿನ್ನ ಧ್ಯಾನವೆನಗೆ ನಿತ್ಯವಿರಲಿ ಮರೆಯದೆ6
ಪಾದ ಯೋಗಿ 7