ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂಸಾರಿ ಪ. ಶೌರಿ ಸುರ ನರವಂದಿತ ಚರಣವ ಕೋರಿ ಪರಿಪರಿ ಬೇಡುವೆ ನಿನ್ನೆಡೆ ಸಾರಿ ಅರಿಯದ ಕಂದನ ಪೊರೆ ದಯೆತೋರಿ ಅರಿಯೆನದಾರನು ಮರೆಯೆನು ನಿನ್ನನು ಕರುಣಾಕರನೆಂಬೀ ಬಿರುದುಳಿಸಿನ್ನು 1 ಮನ್ಮಥಪಿತ ಬಾ ಸುಂದರಕಾಯ ಮನ್ನಿಸು ಎನ್ನಪರಾಧವ ಜೀಯ ಚಿನ್ಮಯರೂಪನೆ ಚೆನ್ನಿಗರಾಯ ಅನ್ಯರ ನೆರೆಯೆನು ನೀ ಕೇಳಯ್ಯ ಎನ್ನೊಳಗೀಪರಿ ಛಲವೇಕಯ್ಯ ಇನ್ನಾದರು ಕೈಪಿಡಿ ದಮ್ಮಯ್ಯ 2 ಮಂದರಗಿರಿಧರ ಗೋವಿಂದನೆ ಬಾ ನಂದಕುಮಾರನೆ ತಡೆಯದೆ ನೀ ಬಾ ನಂದಿನಿಗೊಲಿದಾನಂದವ ಕೊಡು ಬಾ ವೃಂದಾವನ ವಿಹಾರನೇ ಬಾ ಬಾ ಇಂದಿರೆಯರಸನೆ ಶೇಷಗಿರೀಶನೆ ಇಂದೆನಗೊಲಿದೈ ತಂದೆಯೆ ಭಳಿರೆನೆ 3
--------------
ನಂಜನಗೂಡು ತಿರುಮಲಾಂಬಾ