ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಾಯಿಂದಾಗುವುದು ಭವಾಭವ ತಿಮ್ಮ ರಾಯನ ನಾಮವ ನುಡಿಯುತಲಿರು ಜೀವಾ ಪ. ರಸನೆಯ ಗೆಲಿದರೆ ವಿಷಯ ನಿವರ್ತಿಸಿ ವಶವಾಹುದಿತರೇಂದ್ರಿಯಗಳೆಂದು ವಸುದೇವ ಸುತನು ವಾಸವಿಗೆಂದು ನುಡಿಯ ಧ್ಯಾ- ನಿಸುತ ಜಾಗೃತನಾಗು ಮುಸುಕಿನೊಳಿಹ ಜೀವಾ 1 ಭವ ಕಂಡು ನಿಂದೆಯ ಮಾಡಿ ಪಿಕವದು ಕೊಂಡಾಡುವುದಾ ಮಾಡದಿದ್ದರೆ ನಗೆಗೀಡಾಹುದಿದರಿಂದ 2 ಮಧ್ವವಲ್ಲಭನಿಗರ್ಪಿತವಾದ ನೈವೇದ್ಯ ಶುದ್ಧ ತೀರ್ಥ ತುಳಸಿಯ ಸಹಿತ ಮೆದ್ದರೆ ಬಹಿರಂತಃ ಶುದ್ಧಿಯಾಗುವುದು ನಿ- ಷಿದ್ಧ ಭಕ್ಷಣದಿಂದ ನೀಚನೆಂದೆನಿಸುವ 3 ಶ್ರೀಯರಸನ ಜಿಹ್ವೆಯಲಿ ಪೊಗಳಲು ಯಮ ರಾಯನಾಳ್ಗಳು ನೋಡಲಂಜುವರು ಮಾಯಾ ಪ್ರಪಂಚದಿ ಮರುಳಾದ ಜನರೊಳು ನ್ಯಾಯವಾಡಲು ನಾನಾಪಾಯವ ಘಟಿಸುವ 4 ಕ್ಷೇತ್ರ ಕಳತ್ರಾದಿಗಳ ಬಿಟ್ಟು ತಿರುಗುವ ತೀರ್ಥಯಾತ್ರೆಯ ಮಾಡುವುದಕಧಿಕಾ ಸ್ತೋತ್ರದಿಂದ ಶ್ರೀ ಕಳತ್ರನ ಕರುಣೈಕ ಪಾತ್ರರ ಮಾಳ್ಪ ವಿಚಿತ್ರ ಸನ್ನಹವಾದ 5 ಹಲವು ಕರ್ಮದ ಶಾಸ್ತ್ರ ನೆಲೆಯರಿಯದೆ ತ- ತ್ಫಲವಾಗಬೇಕೆಂಬ ಛಲವಿಡೀವ ಕಲಿಯೊಳಗುದಿಸಿದ ಜನರಿಗೆ ಗತಿಯಾಗಿ ಜಲಜನಾಭನ ನಾಮ ನೆಲೆಯಾಗಿ ನುಡಿವಂಥ 6 ನಾಮಕೀರ್ತನೆಗೈಯ್ಯೆ ನಲಿವುತ ಬಹ ನಮ್ಮ ಶ್ರೀಮಹೀಯರಸ ವೆಂಕಟರಾಜನು ಕಾಮಿತಾರ್ಥವ ನೀಡಲ್ಲಧಿಕ ಸಾಧನವಿದು ಪಾಮರತೆಯ ಬಿಟ್ಟು ಪರಮಾರ್ಥದ ಗುಟ್ಟು 7
--------------
ತುಪಾಕಿ ವೆಂಕಟರಮಣಾಚಾರ್ಯ